ಕಾರ ಹುಣ್ಣಿಮೆ: ಹುಲೂರಿನಲ್ಲಿ ಬಿಳಿ ಹೋರಿ ಪ್ರಥಮ

ಕಾರ ಹುಣ್ಣಿಮೆ: ಹುಲೂರಿನಲ್ಲಿ ಬಿಳಿ ಹೋರಿ ಪ್ರಥಮ Kara full moon: First white bull seen in Hulur

 ಲಕ್ಷ್ಮೇಶ್ವರ  30:  ತಾಲ್ಲೂಕಿನಾದ್ಯಂತಸೋಮವಾರ ಕಾರ ಹುಣ್ಣಿಮೆ ಹಬ್ಬವನ್ನು ಸಂಭ್ರಮದೊಂದಿಗೆ ಆಚರಿಸಲಾಯಿತು ಕಾರ ಹುಣ್ಣಿಮೆ ಅಂಗವಾಗಿ ಎತ್ತುಗಳ ಕರಿಯನ್ನು ಓಡಿಸಿ ಅವುಗಳಲ್ಲಿ ಪ್ರಥಮ ಬಂಧ ಎತ್ತನ್ನು ಕರಿಹರಿದ ಎತ್ತು ಎಂದು ಎತ್ತಿನ ಮೆರವಣಿಗೆಯನ್ನು ಮಾಡಿ ಸಂಭ್ರಮಿಸುವುದು ವಾಡಿಕೆಯಿಂದ ನಡೆದುಕೊಂಡು ಬಂದಿದೆ ಅದರಂತೆ ಸೋಮವಾರ ತಾಲೂಕಿನ ಹುಲ್ಲೂರು ಗ್ರಾಮದಲ್ಲಿ ಕಾರ ಹುಣ್ಣಿಮೆ ಅಂಗವಾಗಿ ಗ್ರಾಮದ ಎಲ್ಲ ರೈತರು ತಮ್ಮ ಎತ್ತುಗಳನ್ನು ಶೃಂಗಾರ ಗೊಳಿಸಿ ಪೂಜಿಸುವುದರೊಂದಿಗೆ ಸಂಜೆ ಕರಿ ಹರಿಯಲು ಬಿಟ್ಟರುಅದರಲ್ಲಿ ಗ್ರಾಮದ ಬಸನಗೌಡ್ರು ಪಾಟೀಲ್ ಅವರ ಬಿಳಿ ಹೋರಿ ಎಲ್ಲ ಎತ್ತುಗಳ ಗಿಂತ ಎಲ್ಲಾ ಹೋರಿಗಳಿಗಿಂತ ಮುಂದೆ ಓಡಿ ಬಂದು ಬೇನಸೊಪ್ಪಿನ ಹಗ್ಗ ಹರಿಯುವ ಮೂಲಕ ಕರಿ ಹರಿಯುತು ಕರಿಹರಿದ ಎತ್ತನ್ನು ನೋಡಿ ಎಲ್ಲಾ ರೈತ ಬಾಂಧವರು ಕೇಕೆ ಹೊಡೆದು ಸಂಭ್ರಮಿಸಿದರು ನಂತರ ಗ್ರಾಮದಲ್ಲಿ ಸಂಭ್ರಮದೊಂದಿಗೆ ಕರಿಹರಿದ ಹೋರಿಯನ್ನು ಮೆರವಣಿಗೆ ಮಾಡಿದರು ಅದರಂತೆ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಮತ್ತು ಲಕ್ಷ್ಮೇಶ್ವರ ಪಟ್ಟಣದಲ್ಲಿ ಎಲ್ಲಾ ರೈತ ಬಾಂಧವರು ಕಾರಹುಣ್ಣಿಮೆ ಹಬ್ಬವನ್ನು ಸಂಭ್ರಮದೊಂದಿಗೆ ಆಚರಿಸಿದರು.