ಕನ್ನಡ ಭಾಷಾ ಪ್ರೇಮಿ, ಕನ್ನಡ ಹೋರಾಟಗಾರ ಬೆಂಗಳೂರಿನ ನಂ.ವಿಜಯಕುಮಾರ
Kannada language lover, Kannada fighter No. Vijayakumar of Bangalore
ನಂ.ವಿಜಯಕುಮಾರ ಎಂದರೆ ಕಾಲಿಗೆ ಚಕ್ರ ಕಟ್ಟಿಕೊಂಡು ನಾಡಿನ ಉದ್ದಗಲಕ್ಕೂ ಸಂಚರಿಸಿ ದೇಶಭಕ್ತ, ಕನ್ನಡ ಭಾಷೆ, ಗಡಿ, ಸಾಹಿತ್ಯಕ್ಕಾಗಿ ಹೋರಾಡಿದ ಮಹನೀಯರ ಪುಣ್ಯ ಭೂಮಿಗೆ ಹೋಗಿ ಅವರ ಸ್ಮಾರಕಗಳನ್ನು ಸ್ವಚ್ಚಗೊಳಿಸಿ ಪೂಜೆ ಸಲ್ಲಿಸಿ ಗೌರವ ಸಲ್ಲಿಸುವ ಅಪರೂಪದ ವ್ಯಕ್ತಿಯಾಗಿದ್ದಾರೆ. ಬೆಂಗಳೂರಿನ ಲಗ್ಗೇರೆಯಲ್ಲಿ ವಾಸಿಸುವ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ಅಲ್ಲಿಯ ಪರಿಸರದಲ್ಲಿ ಕನ್ನಡಕ್ಕೆ ಯಾವುದೇ ತೊಂದರೆಯಾದರೂ ಸಹ ಖುದ್ದಾಗಿ ನಿಂತು ಪರಿಹರಿಸುತ್ತಾರೆ.
ಈ ಇಳಿ ವಯಸ್ಸಿನಲ್ಲಿ ನಾಡಿನ ಯಾವುದೇ ಮೂಲೆ ಮೂಲೆಗೆ ಸಂಚರಿಸಿ ಅಲ್ಲಿ ಕನ್ನಡಕ್ಕೆ ಅವಮಾನವಾಗುವ ಯಾವುದೇ ಸಮಸ್ಯೆ ಇದ್ದರೂ ನಿಂತು ಬಗೆ ಹರಿಸುವ ಮಹಾನುಭಾವರು. ಇವರು ಹುಟ್ಟಿ ಬೆಳೆದಿದ್ದು ಬೆಂಗಳೂರಿನ. ಮಾಗಡಿ ರಸ್ತೆಯ ಕೆಂಪಾಪೂರ ಅಗ್ರಹಾರದಲ್ಲಿ. 12.3.1956 ರಲ್ಲಿ ಜನಿಸಿದ ಇವರ ತಂದೆ ನಂಜುಂಡಪ್ಪ , ತಾಯಿ ಗಂಗರೇವಮ್ಮ, ಇಬ್ಬರು ಸಹೋದರು, 3 ಜನ ಸಹೋದರಿಯರನ್ನು ಹೊಂದಿದ್ದಾರೆ. ಬೆಂಗಳೂರಿನ ಅರಮನೆ ರಸ್ತೆಯ ಸರಕಾರಿ ಕಲಾ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದಿದ್ದಾರೆ. ತಮ್ಮ ಶಿಕ್ಷಣ ಪಡೆದ ನಂತರ ಬೆಂಗಳೂರಿನ ಕೆಡಬರಿಸ್ ಕಂಪನಿಯಲ್ಲಿ ಮಾರಾಟ ಪ್ರತಿನಿಧಿಯಾಗಿ ಸೇವೆಗೆ ಸೇರಿ 18 ವರ್ಷ ಕಾಲ ಸೇವೆ ಮಾಡಿದ್ದಾರೆ. ಇವರು 2016 ರಲ್ಲಿ ನಿವೃತ್ತಿಯಾದರು. ಸುಮಾರು 25 ವರ್ಷಗಳಿಂದ ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ನಿರಂತರ ಸೇವೆಯಲ್ಲಿದ್ದಾರೆ. 10 ವರ್ಷಗಳ ಕಾಲ ವಿಜಯನಗರ ಕ್ಷೇತ್ರದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾಗಿ, ಎರಡು ಬಾರಿ ವಿಜಯ ನಗರ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಒಂದು ಬಾರಿ ಗೌರವ ಕಾರ್ಯದರ್ಶಿಯಾಗಿ ಸೇವೆಗೈದಿದ್ದಾರೆ. ಕನ್ನಡ ಜನಶಕ್ತಿ ಸಂಘಟನೆ ಉಪಾಧ್ಯಕ್ಷರಾಗಿದ್ದಾರೆ.
ಕನ್ನಡ ಭಕ್ತರ ಬಳಗದ ಅಧ್ಯಕ್ಷರಾಗಿದ್ದಾರೆ. ಇವರು ನಾಡಿನ ಉದ್ದಲಗಕ್ಕೂ ಸಂಚರಿಸಿ ದೇಶ ಭಕ್ತರ ಮೂರ್ತಿಗಳು, ಸಾಹಿತಿಗಳ ಸಮಾಧಿ ಸ್ಥಳಗಳು, ನಾಡ ಭಕ್ತರು, ವೀರಯೋಧರ ಸ್ಮಾರಕಗಳಿಗೆ ಬೇಟಿಯಾಗಿ ಭಕ್ತಿಯಿಂದ ಹೂಮಾಲೆ ಹಾಕಿ, ಪೂಜೆ ಸಲ್ಲಿಸಿ, ಕನ್ನಡ ದ್ವಜ ನೆಟ್ಟು, ನುಡಿನಮನ ಸಲ್ಲಿಸುತ್ತಾ ಬಂದಿದ್ದಾರೆ. ಪ್ರತಿ ವರ್ಷ ಅಗಸ್ಟ 15 ರಂದು ನಂದಗಡದ ಸಂಗೊಳ್ಳಿ ರಾಯಣ್ಣ ಸ್ಮಾರಕಕ್ಕೆ ಮತ್ತು ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವದಂದು ಬೆಳಗಾವಿ ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡು ಭಕ್ತಿಯ ನಮನ ಸಲ್ಲಿಸುತ್ತಾರೆ. ಪುಲವಾಮಾ ದಾಳಿಯಲ್ಲಿ ಹುತಾತ್ಮ ಯೋಧರ ಮನೆಗಳಿಗೆ ಬೇಟಿ ನೀಡಿ ಕುಟುಂಬಸ್ಥರಿಗೆ ದೈರ್ಯ ತುಂಬಿದ್ದಾರೆ. ಕನ್ನಡ ನಾಡಿನ ಹೋರಾಟಗಾರರ ಬಗ್ಗೆ ಅತೀವ ಅಭಿಮಾನ ಹೊಂದಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ಬೆಂಗಳೂರಿನ ಗೌರವ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ರಾ ನಾಡಿನ 15 ಜಿಲ್ಲೆಗಳ ಪ್ರಮುಖ ಸ್ಥಳಗಳಿಗೆ ಬೇಟಿ ನೀಡಿ ಕನ್ನಡ ಜನರ ಕಷ್ಟ- ನಷ್ಟ ನಾಡಿ.ಮಿಡಿತ ಅರಿತವರಾಗಿದ್ದಾರೆ. ಗಡಿ ಭಾಗದ ಜತ್ತ, ಗೋವಾ, ಕೇರಳ, ಕಾಸರಗೋಡು ಅಲ್ಲದೆ ದಿಲ್ಲಿ, ಮುಂಬೈ ಮೊದಲಾದ ಸ್ಥಳದ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಈಗಲೂ ಸಹ ತಮ್ಮ ಇಳಿ ವಯಸ್ಸಿನಲ್ಲಿಯೂ ನಾಡನ್ನು ಸಂಚಾರ ಮಾಡುವ ಇರಾದೆ ನಿಲ್ಲಿಸಿಲ್ಲ. ಕೆಎಸ್ ಆರ್ ಟಿಸಿ ಬಸ್ ಗಳನ ಮೇಲೆ ಕನ್ನಡ ಹೊರತುಪಡಿಸಿ ಯಾವುದೇ ಇತರ ಭಾಷೆಗಳ ಸ್ಟೀಕರ್ ಗಳಿದ್ದರೆ ಹರಿದು ಬಿಸಾಕುತ್ತಾರೆ. ಕನ್ನಡ ನಾಮಪಲಕ ಇಲ್ಲದೆ ಪರಕೀಯರ ಫಲಕಗಳಿದ್ದರೆ ಕಿತ್ತು ಹಾಕುತ್ತಾರೆ. ಬೆಂಗಳೂರು ನಗರದ ಯಾವುದೇ ಪ್ರದೇಶದಲ್ಲಿ ನಾಡಿನ ಮಹನೀಯರ ವೃತ್ತಕ್ಕೆ ಹೆಸರಿಟ್ಟಿರುವ ಬಣ್ಣಗೆಟ್ಟು ಹಾಳಾಗಿದ್ದರೆ ಅವುಗಳಿಗೆ ಸ್ವಂತ ಹಣದಲ್ಲಿ ಬಣ್ಣ ಬಳಿದು ನಳನಳಿಸುವಂತೆ ಮಾಡುತ್ತಾರೆ. ನಿಗರ್ವಿ, ನಿಷ್ಕಪಟಿ ವ್ಯಕ್ತಿತ್ವದ ದೇಶಭಕ್ತರಾದ ನಂ.ವಿಜಯಕುಮಾರ ಅವರಿಗೆ ಉತ್ತರ ಕರ್ನಾಟಕವೆಂದರೆ ಬಹಳ ಇಷ್ಟಪಡುತ್ತಾರೆ. ಇಲ್ಲಿಯ ಜನರ ಪ್ರೀತಿ, ಕಾಳಜಿಗೆ ಮೆಚ್ಚುಗೆ ವ್ಯಕ್ತ. ಪಡಿಸುತ್ತಾರೆ. ಬೆಳಗಾವಿಗೆ ಬಂದರೆ ನನಗೆ ಪೋನ್ ಮಾಡಿ ಬೇಟಿಯಾಗಿ ಬೆಳಗಾವಿ ಕನ್ನಡಿಗರು ಕನ್ನಡ ಭಾಷೆ, ಪ್ರದೇಶದ ಬಗ್ಗೆ ಹೆಮ್ಮೆ ಪಡಬೇಕು. ಇಲ್ಲಿ ಕನ್ನಡ ವಾತಾರಣ ಮೂಡಲು ಪ್ರತಿಯೊಬ್ಬರು ಪ್ರಯತ್ನಿಸಬೇಕೆಂಬ ಸಲಹೆ ನೀಡುತ್ತಾರೆ. ಅವರ ಸೇವೆ ಹೀಗೆ ಮುಂದುವರೆಯಲಿ. ಇಂತಹ ನಾಡ ಭಕ್ತರ ಸಂತತಿ ಹೆಚ್ಚಾಗಲಿ ಎಂದು ಆಶೀಸೋಣ.
ಸಿ.ವಾಯ್.ಮೆಣಸಿನಕಾಯಿ
ಸಾಹಿತಿಗಳು, ಹಿರಿಯ ಪತ್ರಕರ್ತರು, ನೇಸರಗಿ, ತಾ: ಬೈಲಹೊಂಗಲ


ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 