ಅಂಜುಮನ್ ಕಲಾ, ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕನ್ನಡ ಹಬ್ಬ ಆಚರಣೆ
Kannada festival celebrated at Anjuman Arts and Commerce College
ಬೆಳಗಾವಿ, 17 : ಅಂಜುಮನ್ ಕಲಾ, ವಾಣಿಜ್ಯ ಮತ್ತು ಎಂ ಕಾಂ ಮಹಾವಿದ್ಯಾಲಯ ಬೆಳಗಾವಿಯ ಕನ್ನಡ ವಿಭಾಗ ಮತ್ತು ಐಕ್ಯೂ ಎಸಿ ಸಂಯೋಗದೊಂದಿಗೆ 70ನೇ ಕನ್ನಡ ಹಬ್ಬವನ್ನು ಶನಿವಾರ ದಿ. 15ರಂದು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ವಿಜೃಂಬನೆಯಿಂದ ಆಚರಿಸಲಾಯಿತು.ಕಾರ್ಯಕ್ರಮದ ಮುಖ್ಯ ಅಧ್ಯಕ್ಷತೆಯನ್ನು ಗ್ರೇಡ್ 1 ಪ್ರಾಚಾರ್ಯರು ಡಾ, ಎಚ್ ಆಯ್ ತಿಮ್ಮಾಪೂರ ಭಾಗವಹಿಸಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕನ್ನಡ ಹಬ್ಬದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಡಾ, ಎಚ್ ಆಯ್ ತಿಮ್ಮಾಪೂರ ಅವರು ಮಾತನಾಡಿ ಕಾಲೇಜಿನಲ್ಲಿ ಕನ್ನಡ ಹಬ್ಬದ ಸಂಭ್ರಮ ಕಾರ್ಯಕ್ರಮ ಆಯೋಜನೆ ಮಾಡಿರುವುದನ್ನು ನೋಡಿ ತುಂಬಾ ಸಂತೋಷವಾಯಿತು. ಕನ್ನಡ ಭಾಷೆ 2000 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಪುರಾತನ ಭಾಷೆ ಈ ಕನ್ನಡ ಭಾಷೆಯಾಗಿದೆ.
ಕವಿರಾಜಮಾರ್ಗ, ಆಧಿಪುರಾಣ, ಶಾಂತಿ ಪುರಾಣ, ಗದಾಯುದ್ದ, ವಡ್ಡಾರಾಧನೆ, ಗಿರಿಜಾ ಕಲ್ಯಾಣ ಮೊದಲಾದ ಕನ್ನಡದ ಪ್ರಾಚೀನ ಮಹಾಕಾವ್ಯಗಳನ್ನು ರಚಿಸಿರುವ ನಮ್ಮ ಹಳೆಗನ್ನಡ ಕವಿಗಳು ಕನ್ನಡದ ಸಾಹಿತ್ಯ ಶ್ರೀಮಂತಿಕೆಯನ್ನು ಮೆರೆದಿದ್ದಾರೆ ಎಂದು ಹೇಳುತ್ತಾ ಯುವಕರು ತಮ್ಮ ನಿತ್ಯ ಜೀವನದಲ್ಲಿ ಸಾದ್ಯವಾದಷ್ಟು ಕನ್ನಡವನ್ನು ಬಳಸಿ ಉಳಿಸುವ ಕಾರ್ಯಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪ ಪ್ರಾಚಾರ್ಯರಾದ ಡಾ, ಎಸ್ ಎಮ್ ಖತೀಬ್, ಐಕ್ಯೂ ಎಸಿ ಮುಖ್ಯಸ್ಥರಾದ ಡಾ. ಆಯ್ ಎಮ್ ಶಿಲ್ಲೇಧಾರ, ಸಾಂಸ್ಕೃತ ಕಾರ್ಯಕ್ರಮಗಳ ಮುಖ್ಯಸ್ಥೆಯಾದ ಡಾ. ಎಸ್ ಬಿ ಖಾಜಿ, ಡಾ, ಯಶವಂತ ಹಾಗೂ ಪ್ರೋ. ವೈಶಾಲಿ ಬಬಲಿ ಮತ್ತು ಎಲ್ಲಾ ಅತಿಥಿ ಮಹೋದಯರು ಹಾಗೂ ಬೋಧಕ ಬೋದಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪನೆಯನ್ನು ವಿದ್ಯಾರ್ಥಿನಿಯಾದ ಪೂಜಾ ಲಕ್ಷ್ಮನ್ನವರ ನೆರವೇರಿಸಿದರು, ವಂದನಾರೆ್ಣಯನ್ನು ಪ್ರೋ. ಸಿದ್ದು ದನದವರ ಮಾಡಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 