ಕಾಯಂಗೊಳ್ಳದ ಗ್ರಾಮ ಸಹಾಯಕರ ಹುದ್ದೆ: ಭದ್ರತೆಯಿಲ್ಲದ ಜೀವನ ಶ್ಯಾಮೀದಸಾಬ ತಾಳಕೇರಿ

 

ಲೋಕದರ್ಶನ ವರದಿ

ಯಲಬುಗರ್ಾ 25: ಕಂದಾಯ ಇಲಾಖೆಯಲ್ಲಿ ಸತತ 25ರಿಂದ30 ವರ್ಷಗಳಿಂದಲು ಕಾರ್ಯನಿರ್ವಹಿಸುತ್ತಿರುವ ಈ ಗ್ರಾಮ ಸಹಾಯಕರು ಇದೆ ಕೆಲಸವನ್ನೆ ನಂಬಿಕೊಂಡು ಜೀವನ ಸಾಗಿಸುತ್ತಿದ್ದು ಸರಕಾರದಿಂದ ಸಿಗುವ ಅಲ್ಪ ಸಂಬಳದಲ್ಲೆ ಯತೆಚ್ಚವಾಗಿ ಕೆಲಸ ಮಾಡುತ್ತಿರುವ ಇವರು ಕೇಂದ್ರ ಅಥವಾ ರಾಜ್ಯದ್ದೆ ಆಗಲಿ ಯಾವುದೆ ಯೋಜನೆಗಳ ಗ್ರಾಮ ಮಟ್ಟದ ಅನುಷ್ಠಾನದಲ್ಲಿ ಸಕ್ರೀಯವಾಗಿ ಬಡವರಿಗೆ ತಲುಪಿಸುವಲ್ಲಿ ಮಾರ್ಗದಾತರು,

 ರಾಜ್ಯದ ಯಾವುದೆ ಮೂಲೆಗಳಿಂದ ಬರುವ ಗ್ರಾಮ ಲೆಕ್ಕಾಧಿಕಾರಿಗಳಿಗೆ ಪ್ರಾಥಮೀಕ ಮಾಹಿತಿಯನ್ನು ದತ್ತಾಂಶಗಳನ್ನು ಒದಗಿಸುತ್ತಾರೆ,ಹತ್ತು ಹಲವು ಯೋಜನೆಗಳನ್ನು ಸರಕಾರಗಳು ಬಡವರ ಪರ ಅಹಿಂದ ಪರ ಅರ್ಹ ಫಲಾನುಭವಿಗಳನ್ನ ಗುರುತಿಸಿ ಸರಕಾರಕ್ಕೆ ತಿಳಿಸುವವರು ಗ್ರಾಮ ಸಹಾಯಕರು,

ಕನರ್ಾಟಕ ಗ್ರಾಮ ಕಛೇರಿ ರದ್ದತಿ ಕಾಯ್ದೆ 1961ರ,4ನೇ ನಿಯಮಾವಳಿಗಳ ಪ್ರಕಾರ ಬ್ರೀಟಿಷ್ ಕಾಲದಿಂದ ವಂಶಪಾರಂಪರೆಯಾಗಿ ಬಂದ ಎಲ್ಲಾ ಗ್ರಾಮೀಣ ಹಂತದ ವೀಲೆಜ್ ಆಪೀಸರ್ಸ್ ಹುದ್ದೆಗಳು ರದ್ದಾಗುತ್ತವೆ ಆಡಳಿತಾತ್ಮಕ ಅನುಕೂಲಕ್ಕಾಗಿ ತಾತ್ಕಾಲಿಕವಾಗಿ 1978 ರಲ್ಲಿ ಬಸಲಿಂಗಪ್ಪನವರು ಗ್ರಾಮ ಸೇವಕರ ಸೇವೆಯ ಅಗತ್ಯವನ್ನು ಮನಗಂಡು ಹುದ್ದೆಗಳಿಗೆ ಅಸ್ತು ಎಂದಿದ್ದರು, ಇದಕ್ಕು ಮೊದಲು ಹಳ್ಳಿಯಲ್ಲಿ ಆಡಳಿತ ನಡೆಸುತ್ತಿದ್ದ ಪಟೇಲರು ಶಾನಭೋಗರಿಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು ಆಗ ಇವರನ್ನು ಚಕ್ರ, ತಳವಾರ, ನೀರಗಂಟಿಗಳೆಂದು ಕರೆಯಲಾಗುತ್ತಿತ್ತು ಹುದ್ದೆ ಆರಂಭಗೊಂಡಾಗ ಇವರ ವೇತನ ಕೇವಲ 100 ರೂ ಮಾತ್ರ ಇತ್ತು, 2002ರಲ್ಲಿ 1000 ರೂ,2013ರಲ್ಲಿ 7000 ರೂ ಹಾಗೂ 2017ರ ಬಜೇಟ್ನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು 10,000 ರೂ ವೇತನ ನಿಗದಿ ಮಾಡಿದ್ದಾರೆ,

ಕಂದಾಯಬಾಕಿ ವಸೂಲಿಗೆ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸಹಕರಿಸುವದು ಭೂ ದಾಖಲೆಗಳಾದ ಪಹಣಿ,ಖಾತೆ ಮಾಡಿಸಲು ರೈತರಿಗೆ ನೇರವಾಗುವದು, ಆರ್ಟಿಸಿ ಬದಲಾವಣೆ, ಪಹಣಿ ನಕಲಿಗೆ ಸ್ಥಳಿಯ ಮಾಹಿತಿ ಒದಗಿಸುವದು, ಐಆರ್ಡಿಪಿ ಯೋಜನೆ ಅನುಷ್ಠಾನಕ್ಕೆ ಫಲಾನುಭವಿಗಳ ಗುರುತಿಸುವಿಕೆಗೆ ಸಹಾಯ ರೈತರಿಗೆ ಕೃಷಿ ಕಾರ್ಡಗಳನ್ನು ನೀಡುವದು ಜನನ ಮರಣ ವಿವಿಧ ದೃಡಿಕರಣ ಪತ್ರಗಳನ್ನು ಜನರಿಗೆ ಒದಗಿಸಲು ಸಹಕರಿಸುವದು,ಯಾವುದೇ ಯೋಜನೆ ಅನುಷ್ಠಾನದ ಜವಾಬ್ದಾರಿ ಮೊದಲು ತೆಗೆದುಕೊಂಡು ನೇರವಾಗುವದು, ಬೆಂಕಿ ಅನಾಹುತ ಬೆಳೆ ಹಾನಿ ಪಕೃತಿ ವಿಕೋಪ,ಬರ ಪರಿಹಾರ,ಇತ್ಯಾದಿಗಳ ಬಗ್ಗೆ ಮಾಹಿತಿ ನೀಡುವದು ವೃದ್ದಾಪ್ಯ ವೇತನ, ವಿದವಾ ವೇತನ,ಅಂಗವಿಕಲರ ವೇತನ,ಕಲಾವಿಧರ ಮಾಶಾಸನ ಮಂಜೂರಾತಿಯ ಬಗ್ಗೆ ಮಾಹಿತಿ ನೀಡುವದು,ಇದು ಅಷ್ಟೆ ಅಲ್ಲದೆ ಚುನಾವಣಾ ಕಾರ್ಯಗಳು,ಹಿರಿಯ ಅಧಿಕಾರಿಗಳು ಬೇಟಿ ನೀಡಿದಾದ ಮಾಹಿತಿ ಒದಗಿಸುವದು, ಇನ್ನೂ ಅನೇಕ ಕೆಲಸಗಳನ್ನು ಗ್ರಾಮ ಸಹಾಯಕರು ನಿರ್ವಹಿಸಿಕೊಂಡು ಬರುತ್ತಿದ್ದಾರೆ.

ಪ್ರಸ್ತುತ ಗ್ರಾಮ ಸಹಾಯಕರು ಸರಕಾರವನ್ನು ಡಿ ದಜರ್ೆಯ ನೌಕರರನ್ನಾಗಿ ಮಾಡಿ ಎಂದಷ್ಟೆ ಕೇಳುತ್ತಿದ್ದು ಸರಕಾರ ಇವರ ಸಂಕಷ್ಟಗಳನ್ನು ಆಲಿಸುವ ಅಗತ್ಯವಿದೆ, ಹುದ್ದೆ ಕಾಯಂ ಬಗ್ಗೆ 1995 ರಲ್ಲಿ ಕೆಲ ಗ್ರಾಮ ಸಹಾಯಕರು ಮೊದಲ ಬಾರಿಗೆ ಕೆಎಟಿ ಬಳಿ ಮನವಿ ಮಾಡಿಕೊಂಡಿದ್ದರು ನಂತರ ರಾಜ್ಯ ಸರಕಾರ ಕೆಎಟಿ ಆದೇಶ ಪರಿಸಿಲಿಸಿ ಸವರ್ೋಚ್ಚ ನ್ಯಾಯಾಲಯದಲ್ಲಿ ಎಸ್ಸೆಲ್ಪಿ ಸಲ್ಲಿಸುತ್ತದೆ, ಆಗ ನ್ಯಾಯಾಲಯ 2001 ರಲ್ಲಿ ನೀಡಿದ ತಿಪರ್ು ಗ್ರಾಮ ಕಛೇರಿ ರದ್ದತಿ ಕಾಯ್ದೆಗನುಗುಣವಾಗಿ ಇಲ್ಲದಿರುವದರಿಂದ ಪುನ: ರಾಜ್ಯ ಸರಕಾರ ಮಂಡಿಸಿಸುವ ವಿಷಯವನ್ನು ಕನರ್ಾಟಕ ವೀಲೆಜ್ ಅಬಾಲಿಶನ್ ಯಾಕ್ಟ್ನಡಿ ಗ್ರಾಮ ಸಹಾಯಕರ ಹುದ್ದೆಗಳನ್ನು ಕಾಯಂಗೋಳಿಸಲು ಬರುವದಿಲ್ಲ ಎಂದು ತಿಳಿಸುತ್ತದೆ ರಾಜ್ಯ ಆಡಳಿತ ಸುಧಾರಣೆ ಆಯೋಗ ತನ್ನ ತಿರ್ಪನ್ನು ಸಲ್ಲಿಸುವಾಗ ಹುದ್ದೆಯನ್ನು ರದ್ದುಗೊಳಿಸುವಂತೆ ಸೂಚಿಸುತ್ತದೆ,ಆದರೆ ಹುದ್ದೆ ರದ್ದು ಮಾಡುವದರಿಂದ ಕಂದಾಯ ಇಲಾಖೆಯ ಮೇಲೆ ದುಸ್ಪರಿಣಾಮ ಉಂಟಾಗುವದರಿಂದ ಸರಕಾರ ಅವರ ಸೇವೆಯ ಅಗತ್ಯ ಪರಿಗಣಿಸಿ ಗ್ರಾಮ ಸಹಾಯಕರ ಸೇವೆ ತೃಪ್ತಿಕರವಾಗಿದ್ದರಿಂದ ಸಚಿವ ಸಂಪುಟದ ಹಾಗೂ ಆಥರ್ಿಕ ಇಲಾಖೆಯ ಅನುಮೋದನೆಯೊಂದಿಗೆ ಅವರ ಸೇವೆಯನ್ನು ಮುಂದುವರೆಸುತ್ತಾ ಬಂದಿದೆ,

ಗ್ರಾಮೀಣ ಬಾಗದಲ್ಲಿ ಆಡಳಿತದಲ್ಲಿ ಪರಿಣಾಮಕಾರಿ ನೇರವಾಗುತ್ತಿರುವ ಗ್ರಾಮ ಸಹಾಯಕರಿಗೆ ಸರಕಾರ ಮೂಲ ಸೌಲಭ್ಯಗಳನ್ನು ಒದಗಿಸಬೇಕಾಗಿದೆ ಏಕೆಂದರೆ ಇವರಿಗೆ ಮಾಸಿಕ ವೇತನ ಹೊರತಾಗಿ ಇಎಸ್ಆಯ್ ಪಿಎಪ್,ಪಿಂಚಣಿ, ವೈದ್ಯಕೀಯ ಇನ್ನೀತರ ಯಾವುದೇ ಸವಲತ್ತುಗಳಿಲ್ಲಾ ಪ್ರಸಕ್ತ ರಾಜ್ಯದಲ್ಲಿ 10,450 ಗ್ರಾಮ ಸಹಾಯಕರ ಜೀವನಧಾರವಾಗಿರುವ ಈ ಹುದ್ದೆಗೆ ಡಿ ದಜರ್ೆಯ ನೌಕರರನ್ನಾಗಿ ಪರಿಗಣಿಸಬೇಕು, ಹುದ್ದೆಗೆ ಸಂಬಂದಿಸಿದಂತೆ ಸರಕಾರ ನಿಯಮಾವಳಿ ರಚಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ 

ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಗ್ರಾಮ ಸಹಾಯಕರ ಕಷ್ಟಗಳಿಗೆ ಸ್ಪಂದಿಸುವ ಅಗತ್ಯವಿದೆ ಅಲ್ಲೆ ಅವರ ಸೇವೆಯನ್ನು ಮತ್ತಷ್ಟು ಉತ್ತಮವಾಗಿ ಪಡೆದು ಗ್ರಾಮೀಣ ಭಾಗದ ಆಡಳಿತವನ್ನು ಚುರುಕುಗೊಳಿಸುವ ಅವಶ್ಯಕತೆ ಇದೆ.