ಕನಕದಾಸರು ಕೇವಲ ಕೀರ್ತನಕಾರರಲ್ಲ, ಸಮಾಜ ಸುಧಾರಣೆಯ ಚಿಂತಕರಾಗಿದ್ದರು

ಕನಕದಾಸರು ಕೇವಲ ಕೀರ್ತನಕಾರರಲ್ಲ, ಸಮಾಜ ಸುಧಾರಣೆಯ ಚಿಂತಕರಾಗಿದ್ದರು Kanakadasa was not just a kirtan composer, but a thinker of social reform.

ರೋಣ 08: ಗದಗ ಜಿಲ್ಲೆ, ರೋಣ ತಾಲೂಕಿನ ಹುನಗುಂಡಿ ಗ್ರಾಮದಲ್ಲಿ ಶ್ರೀಮಹರ್ಷಿ ವಾಲ್ಮೀಕಿ ಸಭಾ ಭವನದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಕನಕದಾಸರ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.            ಈ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರು ಗದಗ ಜಿಲ್ಲಾ ಬಿಜೆಪಿ ಎಸ್‌.ಟಿ. ಮೋರ್ಚಾ ಹಾಗೂ ಗದಗ ಜಿಲ್ಲಾ ಮಟ್ಟದ ಜಾಗೃತಾ ಸಮಿತಿಯ ಮೇಲ್ವಿಚಾರಕರು ಮಾಜಿ ಸದಸ್ಯ ಬಸವಂತಪ್ಪ ತಳವಾರ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರೆ​‍್ಣ ಮಾಡಿ  ಮಾತನಾಡಿ, ಕನಕದಾಸರು ಕೀರ್ತನೆಗಳ ಜೊತೆಗೆ ಕಾವ್ಯ ರಚಿಸಿದವರು. ದಾಸಸಾಹಿತ್ಯದ ವೈವಿದ್ಯತೆಯನ್ನು ಹೆಚ್ಚಿಸಿದ್ದು ಮಾತ್ರವಲ್ಲ, ತಮ್ಮ ಸಮಕಾಲೀನ ವಿಕ್ಷಿಪ್ತ ಪರಿಸರಕ್ಕೆ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಮಾನವೀಯವಾಗಿ ಸ್ಪಂದಿಸಿ ಬದುಕಿನ ಮೌಲ್ಯ ಶೋಧನೆಗೆ ತೊಡಗಿದ್ದರು. ಅವರ ಕಾವ್ಯಕೀರ್ತನೆಗಳು ಎಲ್ಲ ಕಾಲದ ಪ್ರಜ್ಞಾವಂತ ಸಾಹಿತ್ಯಾಸಕ್ತರ ಗಮನ ಸೆಳೆಯಬಲ್ಲ ಎಂತಾ ವಿಮರ್ಶಕರ ಆಹ್ವಾನ ಸ್ವೀಕರಿಸಬಲ್ಲ ಎದೆಗಾರಿಕೆಯನ್ನು ಪಡೆದವರಾಗಿದ್ದರು.  

ಕನಕದಾಸರು ಕೇವಲ ಕೀರ್ತನಕಾರರಲ್ಲ, ಕೇವಲ ಕವಿಯಲ್ಲ, ಕೇವಲ ದಾರ್ಶನಿಕರಲ್ಲ, ಕೇವಲ ಸಮಾಜ ಸುಧಾರಣಾವಾದಿಯಲ್ಲ, ಅವರು ಎಲ್ಲವು ಆಗಿದ್ದರು. ಭಕ್ತನಾಗಿಯೂ, ಸ್ವಬಂಡಾಯ ಮನೋಧರ್ಮದ ಚಿಕಿತ್ಸಕರಾಗಿದ್ದರು. ಸಮಾಜಕ್ಕೆ ಮೌಲ್ಯಗಳನ್ನು ಬಿತ್ತುವುದರಲ್ಲಿ ಈ ಮೌಲ್ಯಧಾರಣೆಗೆ ತನ್ನನ್ನೇ ಒಡ್ಡಿಕೊಂಡ ಬಗೆ ಅನನ್ಯವಾದುದು. ಸಾಮಾನ್ಯವಾಗಿ ಕಾವ್ಯ ಪ್ರತಿಭಾ ಪ್ರದರ್ಶನಕ್ಕೆ ಭಾಷಾ ಪ್ರೌಢಿಮೆ ಹೊಗಳಿಕೆಗಳನ್ನು ಸಾಮಾಗ್ರಿ ಮಾಡಿಕೊಳ್ಳುತ್ತಿದ್ದ ಕಾಲದಲ್ಲಿ ಅನುಭವ ಅಭಿವ್ಯಕ್ತಿಯನ್ನು ಏಕಮಾಡಿಕೊಂಡು ಸಾಹಿತ್ಯ ರಚಿಸಿದರು.  ಎಲ್ಲಾರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂಬ ಕೀರ್ತನೆಯಲ್ಲಿ ಮಾನವನ ಬದುಕಿನ ಸಿದ್ಧಾಂತವನ್ನು ತೋರಿಸಿದ್ದಾರೆ. ಬದುಕಿನ ಬೆಡಗಾವನ್ನು ಬಣ್ಣಿಸುತ್ತಲ್ಲೇ ಅವರ ಗುಟ್ಟನ್ನು ರಟ್ಟಾಗಿಸಿಬಿಡುತ್ತಾರೆ ಕನಕದಾಸರು. ದಾಸ, ದಾಸರ ಮನೆಯ ದಾಸಿಯರ ಮಗನಾನು, ಸಾಸಿಯರ ನಾಮದೊಡೆಯ ರಂಗಯ್ಯನ ಮನೆಯ ಶಂಕರದಾಸರ ಮನೆಯ ಮಂಕುದಾಸಯ್ಯ ನಾನು. ಬೊಂಕದಿ ಬಾಗಿಲನ ಕಾಯುವ ಬಡದಾಸ ನಾನೇಯ್ಯ, ಕಾಳಿದಾಸನ ಮನೆಯ ಕೀಳುದಾಸಯ್ಯ ನಾನೇ ಎಂದು ಮೊರೆಯಿಡುವ ಈ ಸಂತ ಕವಿ. ತಮ್ಮ ಸಾಹಿತ್ಯದುದ್ದಕ್ಕೂ ಒಂದು ಧರ್ಮದ ಮೌಢ್ಯ ಕಂದಾಚಾರಗಳನ್ನು ಅನಿಷ್ಟದ ನಂಬಿಕೆಗಳನ್ನು ಕೊನೆಗೆ ದೈವವನ್ನು ಟೀಕಿಸುವುದನ್ನು ಮರೆಯುವಂತಿಲ್ಲ. ಹಿಂದೂ ಧರ್ಮದ ಶಾಪವಾಗಿದ್ದ ಶ್ರೇಣೀಕೃತ ವರ್ಣ ವ್ಯವಸ್ಥೆಯನ್ನು ಹೋಗಲಾಡಿಸಿ ಎಂದು ಕರೆ ನೀಡುವ ಕನಕದಾಸರು ತಮ್ಮನ್ನು ವಿರೋಧಿಸಿ ಬಂದ ಪುರೋಹಿತಶಾಹಿಗಳಿಗೆ ಆತ್ಮಯಾವ ಕುಲ, ಜೀವ ಯಾವ ಕುಲ ಎಂದು ಕೇಳುತ್ತಾರೆ. ಕುಲವನ್ನು ಖಂಡಿಸುವಲ್ಲಿ ಬಸವೇಶ್ವರ, ಸರ್ವಜ್ಞರಷ್ಟೇ ಧೈರ್ಯವನ್ನು ಕನಕದಾಸರು ತೋರಿಸಿದ್ದಾರೆ. ಕುಲ, ಕುಲವೆಂದು ಹೊಡೆದಾಡದರಿ, ನಿಮ್ಮ ಕುಲದ ನೆಲೆಯನ್ನಾದರೂ ಬಲ್ಲೀರಾ ಎಂದು ಧೈರ್ಯವಾಗಿ ಕುಲಚಾರವನ್ನು ಮಾಡುವ ಸಮಾಜಕ್ಕೆ ನೇರ ಸವಾಲನ್ನು ಹಾಕಿದ್ದಾರೆ. ಗ್ರಾಮೀಣ ಪರಿಸರದಲ್ಲಿ ಬೆಳೆದ ಕನಕದಾಸರು ಗ್ರಾಮೀಣ ತತ್ವವನ್ನು ಜನಪದ ತತ್ವದಲ್ಲಿ ತಮ್ಮ ಕೀರ್ತನೆಯ ತತ್ವಗಳನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಕನಕದಾಸರ ಬಗ್ಗೆ ಬಸವಂತಪ್ಪ ಎಚ್‌. ತಳವಾರ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಬಸವಂತಪ್ಪ ಮಂಡಸೊಪ್ಪಿ, ಮಲ್ಲಪ್ಪ ಹ. ಜಂತ್ಲಿ, ಚನ್ನಬಸಪ್ಪ ಹ. ತಳವಾರ, ರಾಮಪ್ಪ ಲಕ್ಷ್ಮಪ್ಪ ತಳವಾರ, ಸಂತೋಷ ಹ. ತಳವಾರ, ಯಲ್ಲಪ್ಪ ಕುರಿ, ಯಮನಪ್ಪ ತಳವಾರ, ಗೋವಿಂದಪ್ಪ ಹ. ತಳವಾರ, ಹನಮಂತ ಶಿ. ವಾಲ್ಮೀಕಿ, ಶ್ರೀಕಾಂತ ಬಾವಿ, ಗೋವಿಂದಪ್ಪ ಆಲೂರ, ಶೇಖಪ್ಪ ಆಲೂರ, ಪುಂಡಲೀಕಪ್ಪ ಜಾಲಿಕಟ್ಟಿ, ಆನಂದ ಬೀರಣ್ಣವರ, ಮಲ್ಲಿಕಾರ್ಜುನ ಕಟಗಿ ಮುಂತಾದವರು ಭಾಗವಹಿಸಿದ್ದರು. ಕೊನೆಯಲ್ಲಿ ವಂದನಾರೆ​‍್ಣಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.