ಕನಕದಾಸ ಜಯಂತಿ ಆಚರಣೆ ಕಾರ್ಯಕ್ರಮ

 ಕನಕದಾಸ ಜಯಂತಿ ಆಚರಣೆ ಕಾರ್ಯಕ್ರಮ Kanakadasa Jayanti celebration programme


ವಿಜಯಪುರ 08 : ನಗರದ ಬಿಎಲ್‌ಡಿಇ ಸಂಸ್ಥೆಯ ಎಸ್‌ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ದಿನಾಂಕ;08-11-2025 ಶನಿವಾರದಂದು ದಾಸ ಶ್ರೇಷ್ಟ ಕನಕದಾಸ  ಜಯಂತಿ ಆಚರಿಸಲಾಯಿತು. ಈ ವೇಳೆಯಲ್ಲಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಉಷಾದೇವಿ ಹಿರೇಮಠ ಮಾತನಾಡಿ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿನ ಅಂಕುಡೊಂಕುಗಳು ಸಮಾಜದಲ್ಲಿನ ಮೇಲು ಕೀಳು ಎಂಬುದು ತಮ್ಮ ಕಾವ್ಯದ ಮೂಲಕ ಪ್ರತಿಬಿಂಬಿಸಿದ್ದಾರೆ. ಅವರ ಇಡೀ ಸಾಹಿತ್ಯ ಅರುಳುವುದೇ ಕೀರ್ತನೆಗಳಲ್ಲಿ. ಕೀರ್ತನೆ ಅಂದ್ರೆ ಪರಮಾತ್ಮನ ಕೀರ್ತಿಯನ್ನ ಆರಾಧಿಸುವಂತಹ ಭಜನೆಗಳು. ತಮ್ಮ ಭಜನೆಗಳ ಮೂಲಕ ಲೋಕುದ್ದಾರೆ ಮಾಡಿದ್ದಾರೆ. ಒಬ್ಬ ಸಾಮಾಜಿಕ ದಾರ್ಶನಿಕರಾಗಿ ಸಾಹಿತ್ಯದಲ್ಲಿ ಒಬ್ಬ ಶ್ರೇಷ್ಠವಾಗಿ ದಾಸ ಶ್ರೇಷ್ಟರಾಗಿ ಹೊರಹೊಮ್ಮಿದ್ದಾರೆ ಹಾಗಾಗಿ ಅವರು ಹಾಕಿ ಕೊಟ್ಟ ಸನ್ಮಾರ್ಗಗಳತ್ತ ಸಾಗಬೇಕಾಗಿದೆ ಎಂದರು. 

ಕನಕದಾಸ  ಜಯಂತಿ ಕೇವಲ ಜಯಂತಿಗೆ ಸೀಮಿತವಾಗದೆ ಅವರು ತಮ್ಮ ಕೀರ್ತನೆಗಳ ಮೂಲಕ ಕೊಟ್ಟ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅವರ ವಿಚಾರಧರೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಕೊಳ್ಳುವುದರೊಂದಿಗೆ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಪ್ರಾಚಾರ್ಯೆ ಡಾ.ಆರ್‌.ಎಂ.ಮಿರ್ಧೆ,ಉಪ ಪ್ರಾಚಾರ್ಯ ಡಾ.ಅನಿಲ ಭೀ.ನಾಯಕ, ಐಕ್ಯೂಎಸಿ ನಿರ್ದೇಶಕ ಡಾ.ಪಿ.ಎಸ್‌.ಪಾಟೀಲ,ಪ್ರೊ.ಪವನ್ ಮಹೇಂದ್ರಕರ್ ಸೇರಿದಂತೆ ಇನ್ನಿತರ ಪಿಯುಸಿ,ಪದವಿ ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.