ಬಂಡಿಹಟ್ಟಿಯಲ್ಲಿ ಕನಕದಾಸರ ಜಯಂತಿ ಆಚರಣೆ
Kanakadasa Jayanti celebrated in Bandihatti
ಲೋಕದರ್ಶನ ವರದಿ
ಬಂಡಿಹಟ್ಟಿಯಲ್ಲಿ ಕನಕದಾಸರ ಜಯಂತಿ ಆಚರಣೆ
ಬಳ್ಳಾರಿ 09: ಸ್ಥಳೀಯ ಬಂಡಿಹಟ್ಟಿಯ ಶ್ರೀರಾಮಲಾದೇವಿ ದೇವಸ್ಥಾನದ ಹತ್ತಿರದಲ್ಲಿ ದಾಸ ಶ್ರೇಷ್ಠ ಕನಕದಾಸರ 538ನೇ ಜಯಂತ್ಸ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. 29ನೇ ವಾರ್ಡಿನ ಪಾಲಿಕೆ ಸದಸ್ಯರಾದ ಶ್ರೀಮತಿ ಮಂಜುಳಾ ಉಮಾಪತಿ ಅವರು ಕನಕದಾಸರ ಪುತ್ಥಳಿಗೆ ಮಾಲಾರೆ್ಣ ಮಾಡಿ, ಪೂಜೆ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕನಕದಾಸರ ತತ್ವ, ಆದರ್ಶಗಳನ್ನು ಎಲ್ಲರೂ ರೂಢಿಸಿಕೊಂಡು ಉತ್ತಮ ಪ್ರಜೆಗಳಾಗಿ ಜೀವನ ನಡೆಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ವೆಂಕೋಬಿ, ಗುಜರಿ ಬಸವರಾಜ್, ಅಬಕಾರಿ ಇಲಾಖೆಯ ನಿವೃತ್ತ ನೌಕರ ದೊಡ್ಡ ಹನುಮಂತಪ್ಪ, ಕೆ.ಟಿ.ಈಶ್ವರ, ಕೊಂಡಿ ಮಲ್ಲಿಕಾರ್ಜುನ, ಡಾ.ಲೋಹಿತ್‌ಕುಮಾರ್ ಆರ್, ಶಿವಶರಣ, ಶಿವಶಂಕರ್, ಸೋಮಶೇಖರ್, ಆಲಂಬಾಷ, ರಘು, ಹೊನ್ನೂರ್‌ಸ್ವಾಮಿ, ಮಜ್ಜಿಗೆ ಹನುಮಂತ, ಶ್ಯಾಮಿಯಾನ ಬಸಪ್ಪ, ಸಣ್ಣ ಈಶ್ವರ, ಗಾದಿಲಿಂಗ, ಬಸವರಾಜ ಕೆ, ಷಣ್ಮುಖ, ಸದಾಶಿವ, ಪಂಪಾಪತಿ ಕೆ, ಮಂಜುನಾಥ, ಅನಿಲ್, ಕೋರಿ ರವಿ, ಬಸಪ್ಪ, ಮುಂತಾದವರು ಭಾಗವಹಿಸಿದ್ದರು.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು:
ಕನಕದಾಸರ ಪುತ್ಥಳಿಯ ಮುಂಭಾಗದಲ್ಲಿ ಸಂಜೆ ವೇಳೆಯಲ್ಲಿ ಕನಕದಾಸರ ಕೀರ್ತನೆಗಳ ಗಾಯನವನ್ನು ಶಿವಶರಣ ಮತ್ತು ತಂಡದವರು ಹಾಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಸಾಧಕರುಗಳಲ್ಲಿ ಪ್ರಮುಖವಾಗಿ ಸೈನ್ಯದಲ್ಲಿ ಕೆಲಸ ಮಾಡುತ್ತಿರುವ ಸಂದೀಪ್, ಶಿವಶಂಕರ್ ಇವರ ಪೋಷಕರಿಗೆ , ಪಿಎಚ್.ಡಿ ಪದವಿಯನ್ನು ಪಡೆದಿರುವ ಡಾ.ಗಂಗೋತ್ರಿ ವಿ, ,ಬಯಲಾಟ ಕಲಾವಿದರಾದ ಸಣ್ಣ ಭೀಮಣ್ಣ ಅವರಿಗೂ ಸಹ ಸನ್ಮಾನಿಸಲಾಯಿತು. ರಂಗೋಲಿ ಸ್ಪರ್ಧೆ: ಕಬಡ್ಡಿ, ಮ್ಯೂಜಿಕಲ್ ಚೇರ್ಸ, ಇತ್ಯಾದಿ ಮನರಂಜನೆ ಕಾರ್ಯಕ್ರಮಗಳನ್ನು ಸಂಜೆ ನಡೆಸಲಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 