ಕಂಪ್ಲಿ: ಮಾ.19ರಂದು ಉಚಿತ ಮಹಿಳಾ ಆರೋಗ್ಯ ತಪಾಸಣಾ ಶಿಬಿರ

ಲೋಕದರ್ಶನ ವರದಿ                  

ಕಂಪ್ಲಿ 14: ಪ್ರಥಮ ಬಾರಿಗೆ ಮಹಿಳೆಯರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿದ್ದು  ಪ್ರತಿಯೊಬ್ಬ30ವರ್ಷದ ಮೇಲೆರುವ ಮಹಿಳೆಯರು ಆರೋಗ್ಯ ತಪಾಸಣಾ ಶಿಬಿರವನ್ನು  ಸದುಪಯೋಗಪಡಿಸಿಕೊಳ್ಳಬೇಕೆಂದು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಕೆ.ಶ್ರೀನಿವಾಸರೆಡ್ಡಿ ಹೇಳಿದರು. 

    ಇಲ್ಲಿನ ಡಾ.ಶ್ರೀನಿವಾಸ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆಯರು  ಕಲಬೆರಕೆ ಆಹಾರ ಸೇವನೆಯಿಂದ ವಿವಿಧ ರೋಗ ಹರಡಿರುವ ಸಂಭವವಿರುವುದರಿಂದ ಆರೋಗ್ಯ ತಪಾಸಣೆ ಮಾಡಿಸಿಕೊಂಡಾಗ ಮಾತ್ರರೋಗ ಲಕ್ಷಣಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡಿ ಮಹಿಳೆಯರನ್ನು .ಅಪಾಯದಿಂದ  ಪಾರು ಮಾಡಲು ಸಾಧ್ಯ. ಮಾ.17 ಬೆಳಿಗ್ಗೆ 9ಗಂಟೆಯಿಂದ, ಕೊಟ್ಟಾಲ್ ರಸ್ತೆಯ ಕಾಲುವೆ ಹತ್ತಿರದ ಶಿರಿಡಿ ಸಾಯಿಬಾಬಾ ಸೇವಾಶ್ರಮದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ ಏಪರ್ಾಡಿಸಿದೆ.  ಆರೋಗ್ಯ ತಪಾಸಣೆ ಗೆ ಬರುವ ಮಹಿಳೆಯರಿಗೆ ಹಳೆ ಬಸ್ ನಿಲ್ದಾಣದಿಂದ ಉಚಿತವಾಗಿ  ಬಸ್ ಸೌಲಭ್ಯ ಒದಗಿಸಲಾಗಿದೆ ಎಂದರು. 

     ವೈದ್ಯ ಡಾ.ಜಂಬುನಾಥಗೌಡ ಮಾತನಾಡಿ,  ಗಡ್ಡೆ ಅಥವಾ ಊತ ಇರುವ ಮಹಿಳೆಯರಿಗೆ ಮ್ಯಾಮೋಗ್ರಫಿ ಯಂತ್ರ ಮೂಲಕ ಪರೀಕ್ಷೆ ಮಾಡಲಾಗುವುದು.  ಹೊರಗಡೆ 11ಸಾವಿರ ರೂಪಾಯಿಗಳ ಖರ್ಚು ಬರುತ್ತದೆ.. ಡಾ.ಕಾತರ್ೀಕ್ ಗೌಡ ಇವರು ಶಿಬಿರದಲ್ಲಿ ಅಗತ್ಯವಿದ್ದಲ್ಲಿ ಉಚಿತ ಸ್ಕ್ಯಾನಿಂಗ್ ಮಾಡಲಿದ್ದಾರೆ. 500ಮಹಿಳೆಯರ ಆರೋಗ್ಯ ತಪಾಸಣೆ ಗುರಿ ಹೊಂದಿದ್ದು ಕಂಪ್ಲಿ.ಗಂಗಾವತಿ ಹೋಸಪೇಟೆ.ಬಳ್ಲಾರಿ.ಕೊಪ್ಪಳ ಹಾಗು ಗ್ರಾಮದ ಮಹಿಳೆಯರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು 

    ಸಕರ್ಾರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚಂದ್ರಮೋಹನ್, ವೈದ್ಯಾದಿಕಾರಿ ಡಾ.ಎಸ್.ಮಂಜುನಾಥ, ಎಲುಬು ಕೀಲು ವೈದ್ಯಾಧಿಕಾರಿ ಡಾ.ಮಲ್ಲಿಕಾಜರ್ುನ, ಮಕ್ಕಳ ವೈದ್ಯಾಧಿಕಾರಿ ಡಾ.ಕಲ್ಪನಾ ಭರತ್, ಶಿರಿಡಿ ಸಾಯಿ ಸೇವಾಶ್ರಮದ ವಿನಿಲಾ ಡಾ.ಶ್ರೀನಿವಾಸರೆಡ್ಡಿ, ಉಮಾಮಹೇಶ್ವರಿ, ಪುಲ್ಲಾರೆಡ್ಡಿ, ಗ್ಯಾಸ್ ಮಹೇಶ್, ಸತ್ಯ ಅರುಣೋದಯ ಸೇವಾ ಸಮಿತಿ ಕಾರ್ಯಾದರ್ಶಿ  ಬಿ.ಗೋಪಾಲರಾವ್ ಸೇರಿ ಅನೇಕರಿದ್ದರು