ಮಾ 29ರಿಂದ ಕಲ್ಮೇಶ್ವರ ಜಾತ್ರಾ ಮಹೋತ್ಸವ
Kalmeshwara Jatra festival from March 29th
ಲೋಕದರ್ಶನ ವರದಿ
ಬೆಳಗಾವಿ 26 : ತಾಲೂಕಿನ ಚಂದನ ಹೊಸೂರ ಗ್ರಾಮದಲ್ಲಿ ಪ್ರತಿ ವರ್ಷದ ಪದ್ದತಿಯಂತೆ ರವಿವಾರ ದಿ. 29ರಿಂದ ಏಪ್ರೀಲ್ 02ರವರೆಗೆ ಐದು ದಿನಗಳ ಕಾಲ ಕಲ್ಮೇಶ್ವರ ಜಾತ್ರಾ ಮಹೋತ್ಸವು ಅತಿ ವಿಜೃಂಬಣೆಯಿಂದ ಜರುಗುವುದು.
ರವಿವಾರ ದಿ. 29ರಂದು ಜಾತ್ರಾ ಪ್ರಾರಂಭವಾಗಿ ಅಂಬಲಿ ಬಂಡೆಗಳನ್ನು ಸಿದ್ದಪಡಿಸುವುದು ಹಾಗೂ ಕಿಚ್ಚದ ಕಟ್ಟಿಗೆಯನ್ನು ಪೂಜೆ ಮಾಡಿತರುವುದು. ಸೋಮವಾರ ದಿ. 30ರಂದು ಸಾಯಂಕಾಲ 6 ಗಂಟೆಗೆ ಕಲ್ಮೇಶ್ವರ ಗುಡಿ ಸುತ್ತ ಅಂಬಲಿ ಬಂಡಿಗಳು ಪ್ರದಕ್ಷಣೆ ಹಾಕುವುದು. ನಂತರ ಅಂಬಲಿ ಹಾಗೂ ಗುಗ್ಗರಿ ಮಹಾಪ್ರಸಾದ ಜರುಗುವುದು. ರಾತ್ರಿ ಭಜನೆ, ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗುವವು. ಮಂಗಳವಾರ ದಿ. 31ರಂದು ಗ್ರಾಮದ ಭಕ್ತಾಧಿಗಳಿಂದ ಚಕ್ಕಡಿ, ಟ್ರಾಕ್ಟರ, ಟೆಂಪು ಇನ್ನೀತರ ವಾಹನಗಳಿಂದ ಕಿಚ್ಚದ ಕಟ್ಟಿಗೆಯನ್ನು ಕಿಚ್ಚ ತಯಾರಿಸಿ ಸಾಯಂಕಾಲ 6 ಗಂಟೆಗೆ ಕಿಚ್ಚ ಹಾಯುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ 10.30ಕ್ಕೆ ಸಂಗ್ಯಾ ಬಾಳ್ಯಾ ನಾಟಕ ಇರುವುದು.
ಬುಧವಾರ ದಿ. 01ರಂದು ಕಲ್ಮೇಶ್ವರ ದೇವಸ್ಥಾನದಲ್ಲಿ ಕಾಯಿ ಒಡೆಯುವುದು ನಂತರ ಭಕ್ತಾಧಿಗಳಿಂದ ತೋಕಾನುತುಕ ಟೆಂಗಿನಕಾಯಿಗಳನ್ನು ನೀಡಿತಮ್ಮ ಹರಕೆಗಳನ್ನು ತಿರಿಸಿಕೊಳ್ಳುತ್ತಾರೆ. ಗುರುವಾರ ದಿ. 02ರಂದು ಪಾಲಕಿ ಸೇವೆಯೊಂದಿಗೆ ಜಾತ್ರ್ರೆಯು ಸಂಪನ್ನವಾಗುವುದು ಎಂದು ಗ್ರಾಮದ ಪಂಚ ಕಮೀಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 