ವಿಶ್ವಕರ್ಮ ಸಮಾಜದಿಂದ ಕಾಳಿಕಾಕಮಟೇಶ್ವರ ದೇವರ ಉತ್ಸವ

ವಿಶ್ವಕರ್ಮ ಸಮಾಜದಿಂದ ಕಾಳಿಕಾಕಮಟೇಶ್ವರ ದೇವರ ಉತ್ಸವ  Kalikakamateshwara festival by Vishwakarma Samaj

ಲೋಕದರ್ಶನ ವರದಿ  

ಕಂಪ್ಲಿ, ಆಗಸ್ಟ್‌ 28: ಪಟ್ಟಣದಲ್ಲಿ ವಿಶ್ವಕರ್ಮ ಸಮಾಜದ ವತಿಯಿಂದ ಶುಕ್ರವಾರ ಶ್ರೀ ಕಾಳಿಕಾಕಮಟೇಶ್ವರ ದೇವರ ಗಂಗೇಸ್ಥಳ ಉತ್ಸವ ಹಾಗೂ ಮೆರವಣಿಗೆ ಶ್ರದ್ಧಾಭಕ್ತಿಯಿಂದ ನಡೆಯಿತು.  ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು. ಬಳಿಕ ಭಕ್ತರಿಗೆ ತೀರ್ಥಪ್ರಸಾದ ವಿತರಿಸಲಾಯಿತು. ಸಂಜೆ ಶ್ರೀ ಕಾಳಿಕಾಕಮಟೇಶ್ವರ ದೇವರ ಉಯ್ಯಾಲೆ ಪೂಜೆ ಶಾಸ್ತ್ರೋಕ್ತವಾಗಿ ನೆರವೇರಿತು.  

ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜದ ಅಧ್ಯಕ್ಷ ಡಿ. ರುದ್ರ​‍್ಪ, ಪ್ರಾಚಾರ್ಯ ಹಾಗೂ ಕಾರ್ಯದರ್ಶಿ ಡಿ. ಮೌನೇಶ್, ಮುಖಂಡರಾದ ಕಾಳಾಚಾರಿ, ನಾರಾಯಣಚಾರ್, ಮೌನೇಶ್, ರಾಘು, ಮಲ್ಲಿ, ಚಂದ್ರಶೇಖರ ಆಚಾರ, ರಾಘವೇಂದ್ರ, ಷಣ್ಮುಖ ಆಚಾರ, ರಾಮಚಂದ್ರ ಆಚಾರ, ಡಿ. ಭರತ್, ಮಹಿಳಾ ಅಧ್ಯಕ್ಷೆ ರಾಧಾ, ಡಿ. ವೀಣಾ, ವಿಜಯಲಕ್ಷ್ಮೀ, ಪೂಜಾ ಸೇರಿದಂತೆ ಸಮಾಜದವರು ಪಾಲ್ಗೊಂಡಿದ್ದರು.  ವಿಶ್ವಕರ್ಮ ಸಮಾಜದ ವತಿಯಿಂದ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಮಾಜದ ಮಹಿಳೆಯರು, ಮುಖಂಡರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.