ಜಾಂಭವ ಯುವ ಸೇನಾ ತಾಲೂಕಾಧ್ಯಕ್ಷರಾಗಿ ಕಾಲಪ್ಪ ಮಾದರ ಆಯ್ಕೆ
Kalappa Madara elected as Jambhava Yuva Sena Taluka President
ತಾಳಿಕೋಟಿ 18: ಜಾಂಭವ ಯುವಸೇನಾ(ರಿ) ತಾಳಿಕೋಟಿ ತಾಲೂಕಾಧ್ಯಕ್ಷರಾಗಿ ಹೋರಾಟಗಾರ ಕಾಲಪ್ಪ ಹಣಮಂತ ಮಾದರ(ಮಿಣಜಗಿ) ಇವರನ್ನು ಆಯ್ಕೆ ಮಾಡಲಾಯಿತು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಾಂಭವ ಯುವ ಸೇನಾ ಜಿಲ್ಲಾಧ್ಯಕ್ಷ ಬಸಲಿಂಗ ನಂದಿ ಇವರ ನೇತೃತ್ವದಲ್ಲಿ ಬುಧವಾರ ನಡೆದ ಸಭೆಯಲ್ಲಿ ಕಾಲಪ್ಪ ಮಾದರ ಅವರ ಆಯ್ಕೆ ನಡೆಯಿತು. ನೂತನ ಅಧ್ಯಕ್ಷ ಕಾಲಪ್ಪ ಮಾದರ ಅವರಿಗೆ ಆದೇಶ ಪತ್ರವನ್ನು ವಿತರಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಬಸಲಿಂಗಪ್ಪ ನಂದಿ ಅವರು ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಮಾದರಿಯಾಗಿಟ್ಟುಕೊಂಡು ಈ ಸಂಘಟನೆಯನ್ನು ಸ್ಥಾಪಿಸಲಾಗಿದೆ. ಸಮಾಜದ ಹಿತ, ಅವರ ಹಕ್ಕುಗಳ ರಕ್ಷಣೆ, ಅವರ ಮೇಲಾಗುವ ದೌರ್ಜನ್ಯಗಳನ್ನು ತೊಡೆಯುವುದು ಇದರ ಉದ್ದೇಶವಾಗಿದೆ. ನಮ್ಮ ಸಂಘಟನೆ ಯಾರ ವಿರುದ್ಧವೂ ಅಲ್ಲ, ಶಾಂತಿ ಪೂರ್ಣ ಮಾರ್ಗಗಳನ್ನು ಅನುಸರಿಸಿ ಸಂಘಟನೆಯನ್ನು ಬಲಪಡಿಸಿ ಸಮಾಜದ ಹಿತಕ್ಕಾಗಿ ಎಲ್ಲರ ವಿಶ್ವಾಸದೊಂದಿಗೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಸಮಾಜದ ಮುಖಂಡ ಸಾಹಿತಿ ಅಶೋಕ ಟಕ್ಕಳಕಿ ಮಾತನಾಡಿ ಯಾವುದೇ ಒಂದು ಸಮಾಜ, ಸಮುದಾಯ ಅಭಿವೃದ್ಧಿ ಹೊಂದಬೇಕಾದರೆ ಸಂಘಟನೆ ಅಗತ್ಯ ಸಂಘಟನೆ ಮುಂದಾಳತ್ವ ವಹಿಸಿಕೊಂಡವರು ಪ್ರಾಮಾಣಿಕರಿದ್ದರೆ ಎಲ್ಲ ರಂಗದಲ್ಲಿಯೂ ಯಶಸ್ವಿಯಾಗಲು ಸಾಧ್ಯ, ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳದೆ ಸಮಾಜದ ಜನರ ಶ್ರೇಯೋಭಿವೃದ್ಧಿಗಾಗಿ ಬಳಸಬೇಕು ನ್ಯಾಯೋಜಿತವಾದ ಎಲ್ಲ ಹೋರಾಟಗಳಲ್ಲಿ ನಮ್ಮ ಸಂಪೂರ್ಣ ಬೆಂಬಲ ಇರಲಿದೆ ಎಂದರು. ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷ ಕಾಲಪ್ಪಾ ಮಾದರ ಹಾಗೂ ಜಿಲ್ಲಾಧ್ಯಕ್ಷ ಬಸಲಿಂಗಪ್ಪ ನಂದಿ ಇವರನ್ನು ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಮುಖರಾದ ಕಲ್ಲಣ್ಣ ಸೊನ್ನದ, ಹನುಮಂತ ಬಾಗೇವಾಡಿ, ಬಸವರಾಜ, ಕಾಶಿನಾಥ ಮಾದರ,ಯಮನಪ್ಪ ಮ್ಯಾಗೇರಿ, ತಾಯಪ್ಪ ಮ್ಯಾಗೇರಿ, ಮಹಾದೇವಪ್ಪ ನಾಗೂರ,ಅರುಣ್ ಚಲವಾದಿ, ಮಾಂತೇಶ ಮಾದರ,ಅಂಕುಶ್ ದೊಡ್ಡಮನಿ, ಗೌರೀಶ ಕಟ್ಟಿಮನಿ, ಕಾಶಿಪ್ಪ ಮಾದರ, ನಾಗರಾಜ ಕೊಡಗಾನೂರ, ನಾಗು ಮಾದರ, ಕೆ.ಎಸ್.ಮಾದರ, ಲಕ್ಷ್ಮಣ ಮಾದರ ಮತ್ತಿತರರು ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 