ಕಲಬುರ್ಗಿ ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟಗಳು ಯಶಸ್ವಿ

ಕಲಬುರ್ಗಿ ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟಗಳು ಯಶಸ್ವಿ  Kalaburgi Zone Level Shuttle Badminton Tournaments Successful

ಕೊಪ್ಪಳ 26: ರಾಜೀವಗಾಂಧಿಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕಲಬುರ್ಗಿ ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಗಳು ನಗರದ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಶ್ರೀ ಗವಿಸಿದ್ದೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯಕಾಲೇಜಿನ ಸಹಯೋಗದಲ್ಲಿ ಗವಿಮಠದ ಒಳಾಂಗಣ ಕ್ರೀಡಾಂಗಣದಲ್ಲಿಅತ್ಯಂತ ಯಶಸ್ವಿಯಾಗಿ ಜರುಗಿದವು.   

ಕಾಯಕ್ರಮವನ್ನು ಮುಖ್ಯ ಅತಿಥಿಗಳಾದ ಮಾಜಿ ಮುಖ್ಯ ಆಡಳಿತಾಧಿಕಾರಿ ವೀರಣ್ಣಕಮತರ್ ಹಾಗೂ ರಾಜೀವಗಾಂಧಿಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕಲಬುರ್ಗಿ ವಲಯ ಮಟ್ಟದಕ್ರೀಡಾ ನೀರೀಕ್ಷಕರಾದ ನತಾನಿಯಲ್ ವಿ.ಜ್ಯೋತಿ ಬೆಳಗಿಸುವುದರ ಮುಖಾಂತರ ಉದ್ಘಾಟಿಸಿದರು.   

ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ನವೋದಯ ವೈದ್ಯಕೀಯ ಮಹಾವಿದ್ಯಾಲಯರಾಯಚೂರು, ದ್ವಿತೀಯ ಸ್ಥಾನವನ್ನು ಕೊಪ್ಪಳ ವೈದ್ಯಕೀಯ ಮಹಾವಿದ್ಯಾಲಯ ಕೊಪ್ಪಳ, ಮೂರನೇಯ ಸ್ಥಾನವನ್ನು ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯ ಕೊಪ್ಪಳ ಹಾಗೂ ನಾಲ್ಕನೇಯ  ಸ್ಥಾನವನ್ನುಅಲ್ ಅಮಿನ  ವೈದ್ಯಕೀಯ ಮಹಾವಿದ್ಯಾಲಯ  ವಿಜಯಪುರ ಇವರುಗಳು ಪಡೆದುಕೊಂಡರು.  

ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ನವೋದಯಕಾಲೇಜ್‌ಅಫ್ ನರ್ಸಿಂಗ್ ರಾಯಚೂರು, ದ್ವಿತೀಯ ಸ್ಥಾನವನ್ನು ಬಿವಿವಿಎಸ್ ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಬಾಗಲಕೋಟೆ, ಮೂರನೇಯ ಸ್ಥಾನವನ್ನು ವಿಜಯಮಹಾಂತೇಶಆಯುರ್ವೇದ ಮಹಾವಿದ್ಯಾಲಯ ಇಳಕಲ್ ಹಾಗೂ ನಾಲ್ಕನೇಯ  ಸ್ಥಾನವನ್ನು ಸಜ್ಜಲ ಶ್ರೀ ಇನಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್‌ ಬಾಗಲಕೋಟೆ ಇವರುಗಳು ಪಡೆದುಕೊಂಡರು.  

ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ  ಮಹಾವಿದ್ಯಾಲಯದ ಪ್ರಾಚಾರ್ಯರಾದಡಾ. ಎಮ್‌ಎಮ್ ಸಾಲಿಮಠಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿ ಪ್ರಶಸ್ತಿವಿಜೇತ ತಂಡಗಳಿಗೆ ಹಾರ್ದಿಕ ಶುಭಾಶಯಕೋರಿದರು.ಪ್ರಶಸ್ತಿ ಪಧಾನಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ಆನಂದ ಬುಳ್ಳಾ,    ಪ್ರದೀಪ ,ಆಯುವೇದ ಮಹಾವಿದ್ಯಾಲಯದಅಧ್ಯಕ್ಷರಾದ  ಸಂಜಯ ಕೊತಬಾಳ ಮತ್ತಿತರಗಣ್ಯರು ನೆರವೇರಿಸಿದರು. ಎರಡು ದಿನಗಳ ಈ ಕ್ರೀಡಾಕೂಟವನ್ನುಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಡಾಎಸ್‌ಎಸ್ ಶಿರೂರಮಠ,   ಡಾ ಪ್ರಭು ನಾಗಲಾಪೂರ, ಡಾ ಸೂರ್ಯನಾರಾಯಣ, ಡಾರಾಜಶೇಖರ್,   ಡಾಅಕ್ಷತಾ ,ಡಾ ಭವಾನಿ. ಪೂಜಾರ, ವಿನೋದ ಮುದಿಬಸನಗೌಡರ,     ಈಶಪ್ಪ ಮತ್ತು ಶ್ರೀ ರಂಜನ್  ನಡೆಸಿಕೊಟ್ಟರು.