ಕಾಗವಾಡ ತಾಲೂಕು ಬರಪೀಡಿತ ಎಂದು ಘೋಷಣೆ: ರೈತರ ಹೋರಾಟಕ್ಕೆ ಜಯ

ಕಾಗವಾಡ ತಾಲೂಕು ಬರಪೀಡಿತ ಎಂದು ಘೋಷಣೆ: ರೈತರ ಹೋರಾಟಕ್ಕೆ ಜಯ  Kagwad Taluk declared drought-hit: Victory for farmers' struggle

ಲೋಕದರ್ಶನ ವರದಿ 

ಕಾಗವಾಡ 24: ತಾಲೂಕನ್ನು ಬರಪೀಡಿತ ಪಟ್ಟಿಗೆ ಸೇರಿಸುವಂತೆ ಮಾಜಿ ಸಚಿವ ಶ್ರೀಮಂತ ಪಾಟೀಲ ನೇತೃತ್ವದಲ್ಲಿ ಮಂಗಳವಾರ ನಡೆದ ಹೋರಾಟದ ಫಲವಾಗಿ ಸರ್ಕಾರ ಕಾಗವಾಡ ತಾಲೂಕನ್ನು ಬರಪೀಡಿತ ಎಂದು ಘೋಷಿಸಿದೆ.  

ಈ ಹಿನ್ನೆಲೆಯಲ್ಲಿ ತಾಲೂಕಿನ ರೈತರು, ಬಿಜೆಪಿ ಕಾರ್ಯಕರ್ತರು ಹಾಗೂ ಶ್ರೀಮಂತ ಪಾಟೀಲ ಅಭಿಮಾನಿಗಳು ಗುರುವಾರ ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.  

ಮಾಜಿ ಸಚಿವ ಶ್ರೀಮಂತ ಪಾಟೀಲ, ಮಾಜಿ ಶಾಸಕರಾದ ಪಿ. ರಾಜೀವ್ ಹಾಗೂ ಮಹೇಶ ಕುಮಟಳ್ಳಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ಜಯ ಸಿಕ್ಕಿದೆ. ಬರಪೀಡಿತ ಘೋಷಣೆಗೆ ಶ್ರಮಿಸಿದ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.  

ಇದೇ ವೇಳೆ ಹೆಸ್ಕಾಂ ಕಚೇರಿಗೆ ಭೇಟಿ ನೀಡಿದ ರೈತರು ಹಾಗೂ ಮುಖಂಡರು, ಏಳು ಗಂಟೆ ನಿರಂತರ ವಿದ್ಯುತ್ ಪೂರೈಕೆ ಮಾಡುವ ಕುರಿತು ಅಧಿಕಾರಿಗಳಿಂದ ಲಿಖಿತ ಭರವಸೆ ಪಡೆದುಕೊಂಡರು.  

ಮುಖಂಡರಾದ ದಾದಾ ಪಾಟೀಲ, ಪ್ರಕಾಶ ಚೌಗುಲೆ, ಸಚಿನ್ ಕವಟಗೆ, ಪ್ರವೀಣ ಕೆಂಪವಾಡೆ, ರಾಕೇಶ್ ಪಾಟೀಲ, ಸಚಿನ್ ಜಗತಾಪ, ಅಣ್ಣಾಸಾಬ್ ಡುಗ್ಗನವರ, ವಿನಾಯಕ ಶಿಂಧೆ, ನಿಂಗಪ್ಪ ಚೌಗುಲೆ, ಗುರುಪುತ್ರ ಕುಂಬಾರ, ದೀಪಕ್ ಪಾಟೀಲ, ಕಾಕಾ ಚೌಗುಲೆ, ಜಿತೇಂದ್ರ ಶಿಂಧೆ, ಮುದ್ದು ಮುಲ್ಲಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.