ಕಡಕೋಳ ಗುರು ಮುಗ್ಧ ಸಂಗಮೇಶ್ವರ ಕಾರ್ತಿಕೋತ್ಸವ
,ದೇವರ ಹಿಪ್ಪರಗಿ 19 : ತಾಲೂಕಿನ ಕಡಕೋಳ ಗ್ರಾಮದ ಗುರು ಮುಗ್ಧ ಸಂಗಮೇಶ್ವರ ಕಾರ್ತಿಕೋತ್ಸವ ದಿನಾಂಕ 23-12-2024 ಸೋಮವಾರ ದಂದು ಮುಂಜಾನೆ 9ಗಂಟೆಗೆ ಊರಿನ ಅಗಸಿಯ ಮೇಲಭಾಗದ್ದಲ್ಲಿ ಶಿವ ,ನಂದಿ ಮೂರ್ತಿ ಪ್ರತಿಷ್ಠಾಪನೆಯನ್ನು ರಾಜಗುರು ವೇ ಮೂ ಮಹಾಲಿಂಗ ಸ್ವಾಮಿಗಳು ಅವರ ದಿವ್ಯ ಸಾನಿಧ್ಯದಲ್ಲಿ ನೆರವೇರುವುದು,ಅಂದೆ ರಾತ್ರಿ 9ಗಂಟೆಗೆ ದೇವಸ್ಥಾನದ ಕಳಸರೋಹಣ ಜರಾಗುವದು ನಂತರ ಪ್ರಸಾದ ನೆರವೇರುವುದು,ದಿನಾಂಕ24-12-2024ರಂದು ಮಂಗಳವಾರ ಮುಂಜಾನೆ 9ಗಂಟೆಗೆ ಸುಪ್ರಸಿದ್ಧ ಜಾನಪದ ತಂಡಗಳಿಂದ ಪಲ್ಲಕ್ಕಿ ನಂದಿ ಧ್ವಜ ಸಮೇತ ಭವ್ಯ ಮೆರವಣಿಗೆ ನೆರವೇರುವುದು,ಅಂದೆ ರಾತ್ರಿ 10ಗಂಟೆಗೆ ಕಡಕೋಳ ಗ್ರಾಮದ ಕವಿಗಳಾದ ರಾಘವೇಂದ್ರ ಉಮ್ಮರಗಿ 16ನೆ ವಿರಚಿತ ಸಾಮಾಜಿಕ ನಾಟಕ"ತಂದೆ ನೀಡಿದ ಬಿಕ್ಷೆ,ತಾಯಿಕೊಟ್ಟ ಶಿಕ್ಷೆ ,ಅರ್ಥಾತ್ ಹೆತ್ತವರ ಮಾತು ತಪ್ಪಿದರೆ ದೇವರಾಣೆ ಎಂಬ ನಾಟಕ ಜರಗುವದು ಭಕ್ತಾದಿಗಳು ಪಾಲ್ಗೊಂಡು ಗುರುವಿನ ಕೃಪೆಗೆ ಪಾತ್ರರಾಗಿ ಎಂದು ಸಮಸ್ತ ಕಡಕೋಳ ಸದ್ಭಕ್ತಾದಿಗಳಿಂದ ಸರ್ವರಿಗೂ ಹಾರ್ದಿಕ ಸ್ವಾಗತವನ್ನು ಕೋರಿದ್ದಾರೆ.