ಕಬಡ್ಡಿ ಪಂದ್ಯಾವಳಿ
Kabaddi tournament
ಕೊಪ್ಪಳ 07: ಶ್ರೀ ಗವಿಸಿದ್ದೇಶ್ವರ ಜಾತ್ರೆ ಕೇವಲ ಧಾರ್ಮಿಕ ಜಾತ್ರೆಯಾಗಿರದೇ ಹಲವು ಸಾಂಸ್ಕೃತಿಕ ಸಾಮಾಜಿಕ ಮತ್ತು ಕ್ರೀಡೆಗಳನ್ನು ಆಯೋಜನೆ ಮಾಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ, ಕ್ರೀಡಾಸಕ್ತರಲ್ಲಿ, ಜಾತ್ರೆಗೆ ಬಂದ ಭಕ್ತಾಧಿಗಳಲ್ಲಿ ಮನರಂಜನೆ ನೀಡುತ್ತಿದೆ. ಇಂದು ದಿನಾಂಕ 07.01.2026 ರಂದು ಗವಿಮಠದ ಆವರಣದಲ್ಲಿ ಆಹ್ವಾನಿತ ಪುರುಷ ಹಾಗೂ ಮಹಿಳಾ ಕಬ್ಬಡ್ಡಿ ಪಂದ್ಯಾವಳಿಗಳನ್ನು ಏರಿ್ಡಸಲಾಗಿತ್ತು. ಕಬ್ಬಡ್ಡಿ ಪಂದ್ಯಾವಳಿಗಳನ್ನು ಉದ್ಘಾಟಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕರ್ಣಕುಮಾರ ಮಾತನಾಡಿ ಕಬಡ್ಡಿ ಕ್ರೀಡೆಯು ಪುರಾತನ ಕ್ರೀಡೆಯಾಗಿದ್ದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ; ಇದು ಏಕಾಗ್ರತೆ, ಚುರುಕುತನ ಗುಣಗಳನ್ನು ಬೆಳೆಸುತ್ತದೆ, ಜೊತೆಗೆ ಶಕ್ತಿ, ಸಹನಶಕ್ತಿ ಮತ್ತು ದೈಹಿಕ ಫಿಟ್‌ನೆಸ್ ಅನ್ನು ಸುಧಾರಿಸುತ್ತದೆ, ಇದು ಭಾರತದಾದ್ಯಂತ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಜನಪ್ರಿಯವಾಗಿದೆ. ಕಬಡ್ಡಿ ಭಾರತದ ಪ್ರಾಚೀನ ಕ್ರೀಡೆಯಾಗಿದ್ದು, ಇದು ಮನಸ್ಸು ಮತ್ತು ದೇಹದ ಸಂಪೂರ್ಣ ವ್ಯಾಯಾಮ ನೀಡುತ್ತದೆ ಮತ್ತು ಕ್ರೀಡಾ ಮನೋಭಾವವನ್ನು ಬೆಳೆಸುತ್ತದೆ ಎಂದು ಹೇಳಿದರು,
ಭಾಗವಹಿಸಿದ ಪುರುಷರ ವಿಭಾಗದಲ್ಲಿ ಆಹ್ವಾನಿತ 20 ತಂಡಗಳಲ್ಲಿ ಪ್ರಥಮ ಸ್ಥಾನವನ್ನು ಹಾಲಕೇರಿ ತಂಡ, ದ್ವಿತೀಯ ಸ್ಥಾನ ಚಳಗೇರಿ ತಂಡ, ತೃತೀಯ ಲಕ್ಕುಂಡಿ ತಂಡ, ಚತುರ್ಥ ಪಡೆದರು. ಭಾಗವಹಿಸಿದ ಮಹಿಳಾ ವಿಭಾಗದಲ್ಲಿ ಆಹ್ವಾನಿತ 8 ತಂಡಗಳಲ್ಲಿ ಪ್ರಥಮ ಸ್ಥಾನವನ್ನು ಭಾಗ್ಯನಗರದ ನವಚೇತನ ಕಾಲೇಜು, ದ್ವಿತೀಯ ಸ್ಥಾನ ಸರ್ಕಾರಿ ಪ್ರೌಢಶಾಲೆ ಗಿಣಗೇರಿ , ತೃತೀಯ ಮಹಿಳಾ ಇಂಡಿಯನ್ ಆರ್ಮಿ ಬಿಸರಳ್ಳಿ ಪಡೆದರು. ಗದಿಗೆಪ್ಪ ಬಿಸರಳ್ಳಿ ಗವಿಸಿದಪ್ಪ ಆನೆಗುಂದಿ,ಆನಂದ್ ಕಟ್ಟಿಮನಿ,ಶಂಕರ ಕಿನ್ನಾಳ,ರಮೇಶ್ ಗಿಣಿಗೇರಿ,ಶಿವಕುಮಾರ್ ಹೂಗಾರ್,ಯಮನೂರು ಸಾಬ್ ಪಂದ್ಯಗಳ ನಿರ್ಣಯಕರಾಗಿ ಕಾರ್ಯನಿರ್ವಹಿಸಿದರು. ಪಂದ್ಯಾವಳಿಯಲ್ಲಿ ದೈಹಿಕ ನಿರ್ದೇಶಕರಾದ ಜಯರಾಮ ಮರಡಿತೋಟದ,ಮಂಜುನಾಥ ಆರೆಂಟನೂರ, ಈಶಪ್ಪ ದೊಡ್ಡಮನಿ.ವಿನೋದ ಮುದಿಬಸನಗೌಡ್ರ, ದೈಹಿಕ ಶಿಕ್ಷಕರಾದ ರಾಜು.ಮಗಿಮಾವಿನಹಳ್ಳಿ ಹಾಗೂ ರಾಜು.ಎಸ್ ದೈಹಿಕ ಶಿಕ್ಷಕರು ಹಾಜರಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 