ಕೆ ಎಮ್ ಎಫ್ ಪ್ರಸಕ್ತ ವರ್ಷ 12.59 ಕೋಟಿ ರೂ. ಲಾಭ: ಬಾಲಚಂದ್ರ ಜಾರಕಿಹೊಳಿ
KMF has a profit of Rs 12.59 crore this year: Balachandra Jarkiholi
ಬೆಳಗಾವಿ 31: ಜಿಲ್ಲೆಯ ಪ್ರತಿಷ್ಠಿತ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘ (ಕೆಎಂಎಫ್) 2025-26 ಆರ್ಥಿಕ ವರ್ಷದಲ್ಲಿ 12 ಕೋಟಿ 59 ಲಕ್ಷ ರೂಪಾಯಿಗಳ ನಿವ್ವಳ ಲಾಭ ಗಳಿಸಿದ್ದು ಮತ್ತು 510 ಕೋಟಿ ರೂ. ವಹಿವಾಟು ಸಾಧಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಬೆಳಗಾವಿಗೆ ಮೆಗಾ ಡೈರಿ ನಿರ್ಮಾಣ ಮಾಡಲು ಈಗಾಗಲೇ ಒಂದು ಯೋಜನೆ ರೂಪಿಸಿದೆ ಎಂದು ಬೆಮುಲ್ ಅಧ್ಯಕ್ಷ,ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಈ ವರ್ಷ ಸಂಘದ ವಿಸ್ತರಣೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, 100 ಹೊಸ ಹಾಲು ಉತ್ಪಾದಕರ ಸಹಕಾರಿ ಸಂಘಗಳನ್ನು ಸ್ಥಾಪಿಸಲಾಗಿದೆ. ಇದರಿಂದ ಒಟ್ಟು ಕಾರ್ಯನಿರ್ವಹಣೆಯಲ್ಲಿರುವ ಸಂಘಗಳ ಸಂಖ್ಯೆ 685ಕ್ಕೆ ಏರಿಕೆಯಾಗಿದೆ ಎಂದರು.ರಾಜ್ಯ ಸರ್ಕಾರದಿಂದ ಹಾಲು ಉತ್ಪಾದಕರಿಗೆ 32 ಕೋಟಿ ರೂ. ಪ್ರೋತ್ಸಾಹ ಧನ ವಿತರಣೆ ಮಾಡಲಾಗಿದೆ.
ಇನ್ನೂ ಸುಮಾರು 7.50 ಕೋಟಿ ರೂ. ಬಾಕಿ ಉಳಿದಿದ್ದು, ಅದನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಹೇಳಿದರು.ಸಂಘವು ಹಾಲು ಸಂಗ್ರಹಣೆಯೊಂದಿಗೆ ತುಪ್ಪ, ಪನೀರ್ ಮತ್ತು ಪೇಡಾ ಉತ್ಪಾದನೆಯಲ್ಲಿ ಸಹ ಗಮನಾರ್ಹ ಬೆಳವಣಿಗೆ ಕಂಡಿದೆ. ಮಾರುಕಟ್ಟೆ ವಿಸ್ತರಣೆಗೆ ಬೆಳಗಾವಿ ಸೇರಿದಂತೆ ಗೋವಾ ಮತ್ತು ಪುಣೆ ನಗರಗಳಲ್ಲಿ ಒಟ್ಟು 55 ಫ್ರಾಂಚೈಸಿಗಳನ್ನು ಆರಂಭಿಸಲಾಗಿದೆ. ವಿದೇಶಿಗೆ ಹಾಲು ವಿಸ್ತರಣೆ ಯಾವುದೇ ಸಮಸ್ಯೆ ಇಲ್ಲ, ಹಾಲನ್ನು ಡೈರಿಯಲ್ಲಿ ಶುದ್ಧಿಕರಿಸಲು ಯಾವುದೇ ರೀತಿ ಸಿಲಿಂಡರ ಕೊರತೆಯೂ ಇಲ್ಲ ಎಂದು ಸ್ಪಷ್ಟನೆ ನೀಡಿದರು.ಹಾಲು ಸಂಗ್ರಹಣೆಯಲ್ಲಿಯೂ ಗಮನಾರ್ಹ ಪ್ರಗತಿ ಕಂಡುಬಂದಿದ್ದು,
ಪ್ರತಿದಿನ ಸರಾಸರಿ 2.50 ಲಕ್ಷ ಕಿಲೋ ಹಾಲು ಸಂಗ್ರಹಿಸಲಾಗುತ್ತಿದೆ. ವರ್ಷಪೂರ್ತಿ ಒಟ್ಟು 8.20 ಕೋಟಿ ಕಿಲೋ ಹಾಲು ಸಂಗ್ರಹವಾಗಿದ್ದು, ಇದರಲ್ಲಿ ಹಸುವಿನ ಹಾಲಿನ ಪ್ರಮಾಣವೇ ಹೆಚ್ಚು ಇದೆ ಎಂದು ಮಾಹಿತಿ ನೀಡಿದರು. ವಿಶೇಷವಾಗಿ ಆಂಧ್ರ ಪ್ರದೇಶದ ‘ಅಕ್ಷರ ದಾಸೋಹ’ ಯೋಜನೆಯಡಿಯಲ್ಲಿ ಶಾಲಾ ಮಕ್ಕಳಿಗೆ ದಿನಕ್ಕೆ 25 ಸಾವಿರ ಲೀಟರ್ ಹಾಲು ಸರಬರಾಜು ಮಾಡಲಾಗುತ್ತಿದ್ದು ಇದು ಸಂಘದ ಮತ್ತೊಂದು ಸಾಧನೆ ಎಂದು ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.
ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷರು, ರಾಯಭಾಗದಲ್ಲಿ ಡೈರಿಗೆ ಉತ್ತಮ ರೈತರಿಂದ ಈಗಾಗಲೇ ಸ್ಪಂದನೆ ದೊರತ್ತಿದೆ. ಅದೇ ರೀತಿ ಮೆಗಾ ಡೈರಿ ಗುರಿಯನ್ನು ಹೊಂದಲಾಗಿದೆ. ಆರ್ಥಿಕ ವ್ಯವಹಾರಗಳ ಕುರಿತು ಮಾಹಿತಿ ನೀಡಿದ ಅವರು, ಸಂಘವು ರೈತರಿಗೆ 331 ರೂ. ಕೋಟಿ ಪಾವತಿಸಿದೆ. ಜೊತೆಗೆ ಲಾಭದ ಹಂಚಿಕೆಯಾಗಿ ಮೇವು ಕಟರ್, ರಬ್ಬರ್ ಮ್ಯಾಟ್ ಮತ್ತು ಹಾಲು ಹೀರುವ ಯಂತ್ರಗಳಿಗೆ ಸುಮಾರು 7 ಕೋಟಿ ರೂ. ಸಹಾಯ ನೀಡಲಾಗಿದೆ.
ಸಂಘದ ಈ ಪ್ರಗತಿ ರೈತರ ಹಿತಾಸಕ್ತಿಗೆ ಸಮರ್ಿತವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಸಾಧಿಸುವತ್ತ ಕ್ರಮ ಕೈಗೊಳ್ಳಲಾಗುವುದು ಎಂದರು.ಹೈನುಗಾರಿಕೆ ರೈತರು ಹೆಚ್ಚಿನ ಒತ್ತು ನೀಡಿ: ದಕ್ಷಿಣ ಬಾಗದಲ್ಲಿ ಹಾಲಿನ ಉತ್ಪಾದನೆ ಬೃಹತ್ ಉದ್ಯೋಗವಾಗಿದೆ. ಅದೇ ರೀತಿ ಉತ್ತರ ಕರ್ನಾಟಕ ರೈತರು ಹೈನುಗಾರಿಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಮುಂದಿನ ದಿನಗಳಲ್ಲಿ ರೈತರು ಹೆಚ್ಚಿನ ಹಾಲು ಉತ್ಪಾದಿಸುವ ಗುರಿಯನ್ನು ಹೊಂದಬೇಕು. ಕಬ್ಬಿನ ಬೆಳೆಗಳ ಆದಾಯ ಜೊತೆ ಹೈನುಗಾರಿಕೆ ಒಳ್ಳೆಯ ಆದಾಯವಿದೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಕೆ ಎಮ್ ಎಫ್ ನಿರ್ದೇಶಕರು, ಅಧಿಕಾರಿಗಳು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 