ಕಾರವಾರ : ಗೋವಾ ಗಡಿ ಚೆಕ್ಪೋಸ್ಟ್ ಜಿಲ್ಲಾಧಿಕಾರಿ ಪರಿಶೀಲನೆ

ಕಾರವಾರ 19 : ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಿಮರ್ಿಸಲಾಗಿರುವ ಗೋವಾ ಗಡಿಭಾಗದ ಚೆಕ್ಪೋಸ್ಟ್ಗಳಿಗೆ ಜಿಲ್ಲಾಧಿಕಾರಿ ಡಾ.ಹರೀಶ್ಕುಮಾರ್ ಹಾಗೂ  ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಎಂ.ರೋಷನ್ ಇಂದು ಭೇಟಿ ನೀಡಿ ಅಲ್ಲಿನ ಕಾರ್ಯ ವೈಖರಿಯನ್ನು ಪರಿಶೀಲಿಸಿದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಸುಮಾರು 30 ಚೆಕ್ಪೋಸ್ಟ್ಗಳನ್ನು ರಚಿಸಲಾಗಿದ್ದು ಅಂತಾರಾಜ್ಯ ಗಡಿ ಪ್ರದೇಶವಾದ ಗೋವಾ ಗಡಿಭಾಗದ ಉತ್ತರ ಕನ್ನಡ ಜಿಲ್ಲೆ ಪ್ರದೇಶಗಳಾದ ಮಾಚಾಳಿ, ಜೋಯಿಡಾ, ಪಾಪೇಲಿ, ದಾಂಡೇಲಿ ಭಾಗದ ಭಾಚರ್ಿ, ಕೈಗಾ ಕ್ರಾಸ್, ಬಾರೆ ಕ್ರಾಸ್ಗಳಿಗೆ ಇಂದು ಜಿಲ್ಲಾಧಿಕಾರಿ ಡಾ.ಹರೀಶ್ಕುಮಾರ್, ಜಿಲ್ಲಾಪಂಚಾಯ್ತಿ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಎಂ.ರೋಷನ್, ಐಎಎಸ್ ಪ್ರೊಬೇಷನರ್ ದಿಲೀಷ್ ಸಸಿ ಭೇಟಿ ನೀಡಿ ಅಲ್ಲಿ ಕಾರ್ಯವೈಖರಿಯನ್ನು ಪರಿಶೀಲಿಸಿದರು.

ಜಿಲ್ಲೆಯಲ್ಲಿ ರಚಿಸಲಾಗಿರುವ 30 ಚೆಕ್ಪೋಸ್ಟ್ಗಳಲ್ಲಿ 174 ತಂಡಗಳು ದಿನದ 24 ಗಂಟೆಯೂ ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿವೆ. ಈ ಎಲ್ಲವೂ ಸಂಯುಕ್ತ ತನಿಖಾ ತಂಡಗಳಾಗಿದ್ದು ಪೊಲೀಸ್, ಅರಣ್ಯಾಧಿಕಾರಿಗಳು, ಅಬಕಾರಿ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಪ್ರತಿ ತಂಡದಲ್ಲಿ ಚೆಕ್ಪೋಸ್ಟ್ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಎಲ್ಲ ಚೆಕ್ಪೋಸ್ಟ್ಗಳಿಗೂ ಸಿಸಿಟಿವಿ ಕಣ್ಗಾವಲು ಅಳವಡಿಸಲಾಗಿದ್ದು, ಜಿಲ್ಲೆಯ 10 ಸೂಕ್ಷ್ಮ ಚೆಕ್ಪೋಸ್ಟ್ಗಳನ್ನು ನೇರವಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವೀಕ್ಷಿಸಿ ನಿಗಾವಹಿಸಲಾಗುತ್ತಿದೆ. ಅಲ್ಲದೆ ವಿಶೇಷವಾಗಿ ಹೆದ್ದಾರಿಗಳಲ್ಲಿ ತನಿಖಾ ತಂಡಗಳನ್ನು ಕರ್ತವ್ಯದಲ್ಲಿರುತ್ತವೆ.  

ಇದೇ ವೇಳೆ ಜಿಲ್ಲಾಧಿಕಾರಿ ಡಾ.ಹರೀಶ್ಕುಮಾರ್ ಚುನಾವಣಾ ಅಕ್ರಮಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ ಕೇಸು ದಾಖಲಿಸುವಂತೆ ತನಿಖಾಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ ಪ್ರವಾಸಿಗರಿಗೆ ಯಾವುದೇ ಕಾರಣಕ್ಕೂ ತೊಂದರೆ ಕೊಡಬಾರದು ಎಂದೂ ಅವರು ಕಿವಿಮಾತು ಹೇಳಿದರು.