ಕೆಎಲ್‌ಎಸ್‌ಆರ್.ಎಲ್. ಕಾನೂನು ಮಹಾವಿದ್ಯಾಲಯದಲ್ಲಿ ಕನ್ನಡ ಬಳಗದ ಉದ್ಘಾಟನೆ: ಕನ್ನಡ ಅತ್ಯಂತ ಪ್ರಾಚೀನ, ಶ್ರೀಮಂತ ಭಾಷೆ :ನಿರ್ಮಲಾ ಬಟ್ಟಲ
KLSR.L. Inauguration of Kannada Section in Law College: Kannada is the oldest, richest language: Nir
ಲೋಕದರ್ಶನ ವರದಿ
ಬೆಳಗಾವಿ 08 : ಕನ್ನಡ ಕೇವಲ ಒಂದು ಭಾಷೆಯಲ್ಲ, ಅದು ಕರುನಾಡಿನ ಬಹು ಪ್ರಾಚೀನ ಸಂಸ್ಕೃತಿ, ಪದ್ಧತಿ ಮತ್ತು ಸಂಪ್ರದಾಯಗಳನ್ನು ಪ್ರತಿನಿಧಿಸುತ್ತದೆ. ಪ್ರಪಂಚದಅತ್ಯಂತ ಪುರಾತನ ಭಾಷೆಗಳಲ್ಲಿ ಕನ್ನಡವು ಒಂದಾಗಿದೆ ಎಂದು ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ನಿರ್ಮಲಾ ಬಟ್ಟಲ ಹೇಳಿದರು. ನಗರದ ಕೆಎಲ್‌ಎಸ್ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಸೋಮವಾರ ಕನ್ನಡ ಬಳಗ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಭಾಷೆಯ ಇತಿಹಾಸ ಶತ-ಶತಮಾನಗಳಿಂದ ನೋಡಬಹುದು. ಹಲ್ಮಿಡಿ ಶಾಸನದಿಂದ ಭಾಷೆ ಶಾಸನ ರೂಪದಲ್ಲಿ ಇರುವುದು ಗಮನಿಸಬಹುದು.
ಬಹಳ ಶ್ರೀಮಂತ ಭಾಷೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕನ್ನಡದ ಬಗ್ಗೆ ತಾವೆಲ್ಲರೂ ಅತ್ಯಂತ ಪ್ರೀತಿ ಹಾಗೂ ಅಭಿಮಾನದಿಂದ ಈ ಭಾಷೆಯನ್ನು ಭವಿಷ್ಯದ ಸವಾಲುಗಳಿಗೆ ತಕ್ಕಂತೆ ಬೆಳೆಸುವಲ್ಲಿ ಕೈಜೋಡಿಸಬೇಕು. ಕಾನೂನು ವಿದ್ಯಾರ್ಥಿಗಳು ಭವಿಷ್ಯದ ದಿನಗಳಲ್ಲಿ ಕಾನೂನು ಜಾರಿಗೊಳಿಸುವಾಗ ಹೆಚ್ಚು ಹೆಚ್ಚು ಕನ್ನಡಕ್ಕೆಅಗ್ರಸ್ಥಾನ ನೀಡಬೇಕುಎಂದರು. ಅಧ್ಯಕ್ಷತೆ ವಹಿಸಿದ್ದ ಆರ್.ಎಲ್. ಕಾನೂನು ಮಹಾವಿದ್ಯಾಲಯದ ಕಾಲೇಜಿನ ಪ್ರಾಚಾರ್ಯ ಡಾ. ಎ. ಎಚ್. ಹವಾಲ್ದಾರ ಮಾತನಾಡಿ, ವಿದ್ಯಾರ್ಥಿಗಳು ಈ ನಾಡಿನ ಕನ್ನಡ ಭಾಷೆಯನ್ನು ಗೌರವಿಸಬೇಕು. ಈ ಭಾಷೆಯ ಇತಿಹಾಸ ಬಹಳ ದೊಡ್ಡದು. ಕನ್ನಡ ಬಳಗ ಸದಸ್ಯರು ಕಾಲೇಜಿನಲ್ಲಿ ನಿರಂತರವಾಗಿ ಕನ್ನಡ ಬಳಗದ ಕಾರ್ಯಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಿ ಕನ್ನಡ ಬೆಳೆಸಬೇಕು. ಕನ್ನಡ ಸಾಹಿತ್ಯ ಮತ್ತು ಕನ್ನಡದಲ್ಲಿ ಕಾನೂನಿನ ಬಗ್ಗೆ ಮಾಹಿತಿಯನ್ನು ಪ್ರಚಾರ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಸಂಯೋಜಕ ಹಾಗೂ ಕನ್ನಡ ಬಳಗ ವಿಭಾಗದ ಪ್ರೊ. ಚೇತನ್ ಕುಮಾರ್ ಟಿ.ಎಂ. ಬಹುಮಾನ ಮತ್ತು ಬ್ಯಾಡ್ಜ್‌ಗಳನ್ನು ನೀಡಿದರು. ಕನ್ನಡ ಬಳಗದ ವಿದ್ಯಾರ್ಥಿ ಸಂಯೋಜಕ ಯಲ್ಲಪ್ಪ ಬಾಮನಹಳ್ಳಿ, ಸಂಜನಾಇಟಗಿ, ಸ್ನೇಹಾ ಮೇತ್ರಿ, ಸಿದ್ದಲಿಂಗ ಕವಟಕರ, ಅಜಯ ಬೊಮ್ಮನ್ನವರ, ಸುಚಿತ್ರಾ ಶಿಂಗೆ, ವೃಷಭ ಪಾಟೀಲ, ಚರಿತ್ರಮತಿ ಪಾಟೀಲ, ಅಕ್ಷಯ ವಾರದ, ಪ್ರವೀಣ ಕಾಂಬಳೆ, ಶಶಿಧರ ಸಸಾಲಟ್ಟಿ, ಜೈಶ್ರೀ ಕಾಂಬಳೆ, ಪ್ರಜ್ವಲ್ ತಪಶಿ, ಆದಿತ್ಯಅಮಟೆ, ಓಂಕಾರ ಖೋಬ್ರಿ, ಸ್ಪೂರ್ತಿ ಪಾಟೀಲ, ಮುರಘೇಂದ್ರಯ್ಯ ಭಾನ್ವಿ, ಶಿವಪ್ರಸಾದ, ಗಾಯತ್ರಿ ಬಸ್ತವಾಡಿ, ಮಹಾಲಕ್ಷ್ಮೀ, ಪ್ರಸನ್ನಗೌಡ, ಮಂಜುನಾಥ, ಗೌತಮ್ ಹಳಕವಾಡಿ, ವಿಜಯ ಜಂಬೆನಾಳ, ಮಹಾದೇವಪ್ಪ (ಅಪ್ಪು), ಸಿಂಧು ಪಾಟೀಲ, ಮಂಜುನಾಥ ನಾಯಕ, ಓಂಕಾರ ಪಾಟೀಲ, ಶ್ರೇಯಶಕಲಾದಗಿ, ವಿದ್ಯಾ, ವಿನಾಯಕ, ಸಚಿನ್, ಸಂಗಮೇಶ ನಾಯಕ, ರೋಹನ್ ತುಕ್ಕಾನಟ್ಟಿ, ಮಾಳಪ್ಪ ಭಾಗಿ, ಗುರುರಾಜ, ಕಾವೇರಿ ಬಡಿಗೇರ ಉಪಸ್ಥಿತರಿದ್ದರು. ಕಾಲೇಜಿನ ಕನ್ನಡ ಬಳಗ ವಿಭಾಗದ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಕನ್ನಡ ಬಳಗ ಸ್ವಯಂಸೇವಕರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 