ಕೆಎಲ್‌ಇ ಸಂಸ್ಥೆಯ ಚುನಾವಣೆ ಅವಿರೋಧ ಆಯ್ಕೆ
KLE election unopposed
ಬೆಳಗಾವಿ 23 : ಬಹು ನೀರೀಕ್ಷಿತ ಕೆಎಲ್‌ಇ ಸಂಸ್ಥೆಯ ಚುನಾವಣೆಯು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಮತ್ತೊಂದು ಇತಿಹಾಸವನ್ನು ಸೃಷ್ಟಿಸಿದೆ. ದಿನಾಂಕ 22 ಜನವರಿ 2026 ರಂದು ನಾಮಪತ್ರ ಹಿಂಪಡೆಯುವ ದಿನದಂದು ಕಣಕ್ಕೆನಿಂತ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆಮಾಡಲಾಗಿದೆ.
ಕೆಎಲ್‌ಇ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಮಹಾಂತೇಶ ಶಿವಾನಂದ ಕೌಜಲಗಿ, ಉಪಾಧ್ಯಕ್ಷರಾಗಿ ಬಸವರಾಜ ಶಿವಲಿಂಗಪ್ಪ ತಟವಟಿಮರು ಆಯ್ಕೆಯಾಗಿದ್ದಾರೆ. ಆಡಳಿತ ಮಂಡಳಿಯನೂತನಸದಸ್ಯರಾಗಿ ಅಮಿತ ಪ್ರಭಾಕರ ಕೋರೆ, ಪ್ರವೀಣ ಅಶೋಕ ಬಾಗೇವಾಡಿ, ಪ್ರೀತಿಕರಣ ದೊಡವಾಡ, ಮಹಾಂತೇಶಮಲ್ಲಿಕಾರ್ಜುನ ಕವಟಗಿಮಠ, ಮಲ್ಲಿಕಾರ್ಜುನ ಚನಬಸಪ್ಪಕೊಳ್ಳಿ, ವಿಜಯ ಶ್ರೀಶೈಲಪ್ಪ ಮೆಟಗುಡ್, ಜಯಾನಂದ ಊರ್ಫ್ರಾಜು ಮಹಾದೇವಪ್ಪಮುನವಳ್ಳಿ, ಮಂಜುನಾಥ ಶಂಕರ್ಪಮುನವಳ್ಳಿ, ಬಸವರಾಜ ರುದ್ರಗೌಡ ಪಾಟೀಲ, ವಿಶ್ವನಾಥ ಈರನಗೌಡ ಪಾಟೀಲ, ಯಲ್ಲನಗೌಡ ಶಿವಮೊಗ್ಗೆಪ್ಪ ಪಾಟೀಲ ಹಾಗೂ ಅನೀಲ ವಿಜಯಬಸಪ್ಪ ಪಟ್ಟೇದ ಆಯ್ಕೆಯಾಗಿದ್ದಾರೆ.
ಆದ್ದರಿಂದ ಸೊಸಾಯಿಟಿಯ ಎಲ್ಲ ಸದಸ್ಯರ ಗಮನಕ್ಕೆ ಈ ಪ್ರಕಟಣೆಯ ಮೂಲಕ ಶನಿವಾರ 7 ಫೆಬ್ರುವರಿ 2026 ರಂದು ಹುಬ್ಬಳ್ಳಿಯ ಬಿ.ವ್ಹಿ.ಭೂಮರಡ್ಡಿ ಅಭಿಯಾಂತ್ರಿಕ ಹಾಗೂ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಹಾಗೂ ರವಿವಾರ 8ನೇ ಫೆಬ್ರುವರಿ 2026 ರಂದು ಬೆಳಗಾವಿಯ ಲಿಂಗರಾಜ ಮಹಾವಿದ್ಯಾಲಯದ ಆವರಣದಲ್ಲಿ ಸೊಸಾಯಿಟಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕಾಗಿದ್ದ ಮತದಾನವನ್ನು ರದ್ದುಪಡಿಸಲಾಗಿದೆ ಎಂದು ಚುನಾವಣಾಧಿಕಾರಿ ಡಾ.ಎಸ್.ಎಸ್.ಜಲಾಲಪುರೆ ಅವರು ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 