ಲಸಿಕೆಗಳ ಮಹತ್ವ ಕುರಿತು ಕೆಎಲ್‌ಇ ವೇಣುಧ್ವನಿ 90.4 ಎಫ್. ಎಮ್. ಕೇಂದ್ರ
KLE Venudhvani 90.4 F. M. Kendra on the importance of vaccines
ಲೋಕದರ್ಶನ ವರದಿ
ಬೆಳಗಾವಿ 20: ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಬೆಳಗಾವಿ ಹಾಗೂ ಕೆಎಲ್‌ಇ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯ ಬೆಳಗಾವಿ ಇವರ ಸಹಯೋಗದಲ್ಲಿ ಶುಕ್ರವಾರ ದಿನಾಂಕ 20ನೆ ಮಾರ್ಚ್ 2026 ರಂದು ಬೆಳಿಗ್ಗೆ 10 ರಿಂದ 11 ಗಂಟೆ ವರೆಗೆ ಲಸಿಕೆಗಳ ಮಹತ್ವ ಕುರಿತು ನೇರ ಪೋನ್-ಇನ್ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಳಗಾವಿಯ ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಕ್ಲಿನಿಕಲ್ ಸೇವೆಗಳ ನಿರ್ದೇಶಕ ಡಾ. ಮಾಧವ ಪ್ರಭು ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾರಣಾಂತಿಕ ರೋಗಗಳ ವಿರುದ್ದ ಹೋರಾಡಲು ಲಸಿಕೆಗಳ ಮಹತ್ವ ಮುಖ್ಯ ಎಂದರು.
ಲಸಿಕೆ ಬಗ್ಗೆ ನಾವೆಲ್ಲರೂ ಕೇಳಿಯೇ ಇರುತ್ತೇವೆ, ಭಯಂಕರ ರೋಗಗಲು ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ಅವು ಬಾರದಂತೆ ತಡೆಯುವುದೇ ಲಸಿಕೆಗಳ ಮುಖ್ಯ ಉದ್ದೇಶ ಎಂದರು. ದೇಹದ ರೋಗ ನಿರೋಧಕತೆಯನ್ನು ಉತ್ತೇಜಿಸುವ, ನೀರ್ಜೀವ, ನಿರುಪಯುಕ್ತ ನಂಜೀನ ಅಂಶವನ್ನು ದೇಹಕ್ಕೆ ಸೇರಿಸುವ ವಿಧಾನವನ್ನು ಲಸಿಕೆ ಎಂದು ಕರೆಯುತ್ತಾರೆ, ವ್ಯದ್ಯಕೀಯ ವಿಜ್ಞಾನ ಮಾನವ ಕುಲಕ್ಕೆ ನೀಡಿದ ಅತ್ಯಂತ ದೊಡ್ಡ ವರದಾನಗಳಲ್ಲಿ ಒಂದು ವರದಾನ ಲಸಿಕೆಗಳು, ಲಸಿಕೆಗಳು ಮಾನವನ ಜೀವಕ್ಕೆ ಬೇದರಿಕೆಯೊಡ್ಡುವ ಹಲವು ಕಾಯಿಲೆಗಳನ್ನು ಹಾಗೂ ಸೋಂಕುಗಳನ್ನು ತಡಯಲು ಮತ್ತು ನಿರ್ಮೂಲನೆ ಮಾಡಲು ನೆರವಾಗಿವೆ, ಸಿಡಿಬಿನಂತಹ ಕಾಯಿಲೆಗಳನ್ನು ನಿರ್ಮೂಲನೆ ಮಾಡಲು ಹಾಗೂ ಪೊಲಿಯೋದಂತಹ ಇತರ ಕಾಯಿಲೆಗಳನ್ನು ನಾಶದ ಅಂಚಿಗೆ ತಂದು ನಿಲ್ಲಿಸಲು ಲಸಿಕೆಗಳು ಮುಖ್ಯ ಎಂದು ಜಾಗೃತಿ ಮೂಡಿಸಿದರು ಮತ್ತು ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು. ವೇಣುಧ್ವನಿಯ ಕಾರ್ಯಕ್ರಮ ನಿರ್ವಾಹಕಿ ಮನಿಷ ಪಿ. ಎಸ್. ಮತ್ತು ಮಂಜುನಾಥ ಪೈ ಕಾರ್ಯಕ್ರಮ ನಡೆಸಿಕೊಟ್ಟರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 