ಲೋಕದರ್ಶನ ವರದಿ
ಬೆಳಗಾವಿ 07: ಗ್ರಾಮೀಣ ಹಾಗೂ ಕೃಷಿ ಆಧಾರಿತ ಭಾರತ ದೇಶದಲ್ಲಿ ಜನಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ಅವರಲ್ಲಿ ಬರುವ ಖಾಯಿಲೆಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಸಿಗುತ್ತಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ವೈದ್ಯರು ಲಭಿಸದೇ ಇರುವದರಿಂದ ಜನರು ಸಾಕಷ್ಟು ತೊಂದರೆಯನ್ನು ಅನುಭವಿಸುವಂತಾಗಿದೆ ಎಂದು ನವದೆಹಲಿಯ ನ್ಯಾಶನಲ್ ಬೋರ್ಡ ಆಫ್ ಎಕ್ಸಾಮಿನೇಶನನ ಡಾ. ಅಭಿಜಾತ ಶೇಟ ಅವರು ಹೇಳಿದರು.
ಕೆ.ಎಲ್.ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ ಜೆ.ಎನ್.ಎಂ.ಸಿ ಸೈಂಟಿಫಿಕ್ ಸೊಸೈಟಿಯ 37ನೇ ವಾಷರ್ಿಕ ವೈದ್ಯಕೀಯ ಶಿಕ್ಷಣ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವ ಸಂಸ್ಥೆಯ ಮಾನದಂಡಕ್ಕೆ ಅನುಗುಣವಾಗಿ ಸಾವಿರ ಜನಕ್ಕೆ ಓರ್ವ ವೈದ್ಯರು ಅವಶ್ಯ ಆದರೆ ನಮ್ಮಲ್ಲಿ 2 ಸಾವಿರ ಜನಕ್ಕೆ ಒಬ್ಬರು ವೈದ್ಯರು ಮಾತ್ರ ಇದ್ದಾರೆ. ಆದ್ದರಿಂದ ವೈದ್ಯಕೀಯ ಮಹಾವಿದ್ಯಾಲಯಗಳು ಗುಣಮಟ್ಟದ ಶಿಕ್ಷಣ ನೀಡುವದರೊಂದಿಗೆ ಗ್ರಾಮೀಣ ಸೇವೆಗೆ ವೈದ್ಯರು ಅಣಿಯಾಗುವಂತೆ ಕಾರ್ಯರೂಪಿಸಬೇಕಾಗಿದೆ ಎಂದು ಪ್ರತಿಪಾದಿಸಿದರು.
ಅತ್ಯಂತ ತುತರ್ು ಪರಿಸ್ಥಿಯಲ್ಲಿ ಚಿಕಿತ್ಸೆ ನೀಡುವ ತಜ್ಞ ವೈದ್ಯರು ಲಭಿಸುತ್ತಿಲ್ಲ. ಪ್ರತಿ ವರ್ಷ 60 ಸಾವಿರ ಪದವಿ, 30 ಸಾವಿರ ಸ್ನಾತ್ತಕೋತ್ತರ ಪದವಿ ಪಡೆದ ವೈದ್ಯರು ಹೊರಬೀಳುತ್ತಿದ್ದಾರೆ ಆದರೂ ಕೂಡ ವೈದ್ಯರು ಸೇವೆಗೆ ಲಭಿಸುತ್ತಿಲ್ಲ. ದೇಶದಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ವೈದ್ಯರಿದ್ದರೂ ಕೂಡ ಅವರಲ್ಲಿ ಕೇವಲ 8.18 (ಅಲೋಪತಿ) ಲಕ್ಷ ವೈದ್ಯರು ಮಾತ್ರ ಸೇವೆಗೆ ಲಭ್ಯವಿದ್ದಾರೆ. 2025ಕ್ಕೆ 1.5 ಲಕ್ಷ ವೈದ್ಯರನ್ನು ಪ್ರತಿ ವರ್ಷ ಸೇವೆಗೆ ಅಣಿಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ಅವರು ತಿಳಿಸಿದರು.
ಬೆಂಗಳೂರಿನ ಹಿರಿಯ ಕ್ಯಾನ್ಸರ ಶಸ್ತ್ರಚಿಕಿತ್ಸಕರಾದ ಡಾ. ಕೆ ಎಸ್ ಗೋಪಿನಾಥ ಅವರು ದತ್ತಿ ಉಪನ್ಯಾಸ ನೀಡಿದರು. ಶಸ್ತ್ರಚಿಕಿತ್ಸಾ ವಿಧಾನದಲ್ಲಿ ರೊಬೊಟಿಕ್ ತಂತ್ರಜ್ಞಾನದ ಪ್ರಾತ್ಯಕ್ಷಿತೆಯನ್ನು ಪ್ರದಶರ್ಿಸಲಾಯಿತು. ಜೆ.ಎನ್.ಎಂ ವೈದ್ಯಕೀಯ ಮಾಹಾವಿದ್ಯಾಲಯದ ಪ್ರಾಚಾರ್ಯ ಡಾ. ಎನ್ ಎಸ್ ಮಹಾಂತಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ಸಂಘಟನಾ ಕಾರ್ಯಾಧ್ಯಕ್ಷರಾದ ಡಾ. ಆರ್.ಬಿ ನೇರಲಿ, ಡಾ. ವಿ ಎ ಕೋಟಿವಾಲೆ, ಡಾ. ರೇಷ್ಮಾ ಕರಿಶೆಟ್ಟಿ, ಡಾ. ಶಮಾ ಬೆಲ್ಲದ, ಡಾ. ಆರ್ ಎಸ್ ಮುಧೋಳ, ಡಾ. ಕುಮಾರ ವಿಂಚುರಕರ ಡಾ. ಶಿವಗೌಡಾ ಪಾಟೀಲ ಡಾ. ಎ ಪಿ ಹೊಗಾಡೆ, ಡಾ. ಎನ್ ಆರ್ ಮುನವಳ್ಳಿ ಅವರು ಉಪಸ್ಥಿತರಿದ್ದರು