ಫುಜೌ,ಮಾರ್ಚ್ 12, ಪೂರ್ವ ಚೀನಾದ ಫುಜಿಯಾನ್ ಪ್ರಾಂತ್ಯದ ಹೋಟೆಲ್ ಕಟ್ಟಡ ಕುಸಿತ ದುರಂತದಲ್ಲಿ ಸಾವಿನ ಸಂಖ್ಯೆ 29 ಕ್ಕೆ ಏರಿದ್ದು, ರಕ್ಷಣಾ ಸಿಬ್ಬಂದಿ ಗುರುವಾರ ಮತ್ತೊಬ್ಬ ನತದೃಷ್ಟನನ್ನು ಅವಶೇಷಗಳಿಂದ ಹೊರಗೆ ತೆಗೆದಿದ್ದಾರೆ. ಸ್ಥಳೀಯ ರಕ್ಷಣಾ ಕೇಂದ್ರ ಕಚೇರಿಯ ವರದಿಯಂತೆ ಕ್ವಾನ್ಜೌ ನಗರದಲ್ಲಿ 11 ಗಂಟೆಗೆ ನತದೃಷ್ಟ ವ್ಯಕ್ತಿಯ ಮೃತ ದೇಹವನ್ನು ರಕ್ಷಣಾ ಸಿಬ್ಬಂದಿ ಪತ್ತೆ ಮಾಡಿದ್ದಾರೆ. ಲಿಚೆಂಗ್ ಜಿಲ್ಲೆಯಲ್ಲಿ ಶನಿವಾರ ರಾತ್ರಿ ಕ್ಸಿನ್ಜಿಯಾ ಹೋಟೆಲ್ ಕಟ್ಟಡ ಕುಸಿದು 71 ಜನರು ಅವಶೇಷಗಳಡಿ ಸಿಕ್ಕಿಬಿದ್ದಿದ್ದರು. ಈ ಪೈಕಿ ಅವಶೇಷಗಳಿಂದ ಹೊರತೆಗೆಯಲಾದ 27 ಮಂದಿ ಆಗಲೇ ಮೃತಪಟ್ಟಿದ್ದರು. ಇನ್ನಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ದು ಪ್ರಾಥಮಿಕ ತನಿಖೆಯಂತೆ ಹೋಟೆಲ್ ನಿರ್ಮಾಣ, ನವೀಕರಣ ಮತ್ತು ಅನುಮತಿ ನೀಡುವಲ್ಲಿ ಗಂಭೀರ ದೋಷಗಳು ಕಂಡುಬಂದಿವೆ. ಅಪಘಾತಕ್ಕೆ ಕಾರಣರಾದವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಕ್ವಾನ್ಜೌ ಕಾರ್ಯನಿರ್ವಾಹಕ ಉಪ ಮೇಯರ್ ಹಾಂಗ್ ಜಿಕಿಯಾಂಗ್ ಹೇಳಿದ್ದಾರೆ.