ಕು.ಎಸ್.ಕೃತಿ ಕರಾಟೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ
K.S.Kriti selected for national level in karate
ದೇವರಹಿಪ್ಪರಗಿ 20: ಪಟ್ಟಣದ ಸಿದ್ದಪ್ಪ ಭೈರವಾಡಗಿ ಅವರ ಪುತ್ರಿ ಕುಮಾರಿ ಎಸ್. ಕೃತಿ, 07 ವಯೋಮಿತಿಯ ಬಾಲಕಿಯರ 20 ಕೆ.ಜಿ ಕರಾಟೆ (ಫೈಟ್) ವಿಭಾಗದಲ್ಲಿ ರಾಜ್ಯದ ಪರವಾಗಿ ಆಡಿ ಪ್ರಥಮ ಸ್ಥಾನ (ಬಂಗಾರ ಪದಕ) ಪಡೆಯುವ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.ಅಖಿಲ ಕರ್ನಾಟಕ ಸ್ಪೋರ್ಟ್ಸ ಕರಾಟೆ ಅಸೋಸಿಯೇಷನ್, ಆಯೋಜಿಸಲಾದ 17ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್ ಬೆಂಗಳೂರು ನಗರದ ಕೋರಮಂಗಲ ಒಳಾಂಗಣದ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಕರಾಟೆಯಲ್ಲಿ ಭಾಗವಹಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗುವ ಮೂಲಕ ಪ್ರತಿಭೆಯನ್ನು ಹೊರ ಹಾಕಿದ್ದಾರೆ.ಕುಮಾರಿಯ ಈ ಸಾಧನೆಗೆ ಸಂಸ್ಥೆಯ ಮುಖ್ಯ ತರಬೇತಿದಾರರಾದ ಪ್ರೇಮಾನಂದ ನಾಗರೇಶಿ, ತರಬೇತಿದಾರರಾದ ಅಕ್ಷಯ ಕುಮಾರ ಹಿರೇಮಠ, ಸಾಗರ.ಎಸ್.ಆರ್ ಹಾಗೂ ಎಲ್ಲಾ ಕರಾಟೆ ಪಟುಗಳು ಪಾಲಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 