ಸರ್ಕಾರಿ ಶಾಲೆಯಲ್ಲಿ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಸರ್ಕಾರಿ ಶಾಲೆಯಲ್ಲಿ ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ Joyful celebration of Sri Krishna Janmashtami at a government school

 

ಯರಗಟ್ಟಿ  4: ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.  ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ರಾಧಾ-ಕೃಷ್ಣರ ವೇಷ ಧರಿಸಿ ಗಮನ ಸೆಳೆದರು. ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು.  

ಈ ಸಂದರ್ಭದಲ್ಲಿ ಮುಖ್ಯಶಿಕ್ಷಕ ಎ.ಎ. ಮಕುತಮನವರ, ಎಸ್‌.ಸಿ. ಮಿಕಲಿ, ಆರ್‌.ಕೆ. ಹುಣಶಿಕಟ್ಟಿ, ಬಿ.ಎಂ. ಸರದಾರ, ಎಂ.ಎಂ. ಚೀಲದ, ವಿ.ಆರ್‌. ಹಲಾರಪುರ, ಬಿ.ಎನ್‌. ಹಲಗಲಿ, ಜಯಶ್ರೀ ಬಡಕಪ್ಪನವರ, ಸೌಮ್ಯಾ ದಾಸರೆಡ್ಡಿ, ಬಿ.ಬಿ. ನಿರವಾಣಿ, ವಿದ್ಯಾ ಹಿರೇಮಠ ಸೇರಿದಂತೆ ಅನೇಕ ಶಿಕ್ಷಕರು, ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.