ಪತ್ರಕರ್ತರಿಗೆ ಸಮಯ ಪ್ರಜ್ಞೆಯೊಂದಿಗೆ ಸಾಮಾಜಿಕ ಚಿಂತನೆಬೇಕು

ಪತ್ರಕರ್ತರಿಗೆ ಸಮಯ ಪ್ರಜ್ಞೆಯೊಂದಿಗೆ ಸಾಮಾಜಿಕ ಚಿಂತನೆಬೇಕು Journalists need to be socially conscious with a sense of time

ಪತ್ರಕರ್ತರಿಗೆ ಸಮಯ ಪ್ರಜ್ಞೆಯೊಂದಿಗೆ ಸಾಮಾಜಿಕ ಚಿಂತನೆಬೇಕು 

ಯಲಬುರ್ಗಾ 06: ಪತ್ರಕರ್ತರಾದವರು ಸಮಾಜದ ಅಂಕುಡೊಂಕುಗಳನ್ನು ತಿದ್ದುತ್ತಾ ಸಮಾಜಕ್ಕೆ ಮಾದರಿಯಾಗಬೇಕು, ಪತ್ರಕರ್ತರಾದವರಿಗೆ ಸಮಯ ಪ್ರಜ್ಞೆಯಿರಬೇಕುಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಮೂರ್ತಿ ಇಟಗಿ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರಲ್ಲಿ ಜರುಗಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿತಾ ದಿನಾಚರಣೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು, ಇದೇ ತಿಂಗಳು 20ರ ಒಳಗಾಗಿ ಪತ್ರಿಕಾ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶ ಹೊಂದಲಾಗಿದೆ. ಎಲ್ಲಾ ನಮ್ಮ ಸಂಘದ ಸದಸ್ಯರು ಸ್ವ-ಹಿಚ್ಚೆಯಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕೋರಿದರು.   

ನಂತರ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಮಾಟರಂಗಿ ಹಾಗೂ ಗೌರವ ಅಧ್ಯಕ್ಷ ಇಮಾಮಸಾಬ ಸಂಕನೂರ ಅವರು ಮಾತನಾಡಿ ಸಮಾಜದಲ್ಲಿ ಸಾಧನೆ ಮಾಡಿರುವ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಮಾಡಬೇಕು, ಜೋತೆಯಲ್ಲಿ ನಾವು ಇತರರಿಗೆ ಮಾದರಿಯಾಗ ಬೇಕು ಇಂದಿನ ದಿನಗಳಲ್ಲಿ ಪತ್ರಿಕಾರಂಗವು ಸಾರ್ವಜನಿಕರಂಗದಲ್ಲಿ ಕೆಲವು ವಿಷಯಗಳ ಆದಾರದಲ್ಲಿ ಚರ್ಚೆಯಲ್ಲಿದೆ ನಮ್ಮ ವರದಿಗಳು ಸತ್ಯಕ್ಕೆ ಹತ್ತಿರವಿರಬೇಕು ಎಂದು ತಿಳಿಸಿದರು. ಈ ವೇಳೆ ವೀರಣ್ಣ ನಿಂಗೋಜಿ, ಶಿವಪುತ್ರಯ್ಯ ಹಿತ್ತಲಮನಿ ಚಂದ್ರು ಮರದಡ್ಡಿ, ರವಿಕುಮಾರ ಛಲವಾದಿ, ಭೀಮಣ್ಣ ಹವಳಿ,ಸ ಶರಣಪ್ಪ ಪಾಟೀಲ, ಮಹಾಂತೇಶಛಲವಾದಿ, ಸಂತೋಷ ಬಂಡ್ರಿ, ದೇವರಾಜ ದೊಡ್ಡಮನಿ, ಅನಿಲ್ ಕಲ್ಬಾವಿ, ದೊಡ್ಡಬಸಪ್ಪ ಹಕಾರಿ, ಶಿವು ಮ್ಯಾಗೇರಿ, ವಿರೇಶ ಸ್ಟಾಂಪಿನ್ ಸೇರಿ ಮತ್ತಿತರರು ಇದ್ದರು.