ಪತ್ರಕರ್ತರಿಗೆ ಕೌಶಲ, ಜ್ಞಾನ ಅಗತ್ಯ : ಬಂಡು ಕುಲಕರ್ಣಿ
Journalists need skills and knowledge: Bandu Kulkarni
ಲೋಕದರ್ಶನ ವರದಿ
ಬಾಗಲಕೋಟೆ 21: ಪತ್ರಿಕೋದ್ಯಮದಲ್ಲಿ ಎಐ ಮುಂದಿನ ದಿನಮಾನಗಳಲ್ಲಿ ಪ್ರಭಾವ ಬೀರಬಹುದು ಆದರೆ ಕೌಶಲ ಮತ್ತು ಜ್ಞಾನ ಇದ್ದವನು ಉತ್ತಮ ಪತ್ರಕರ್ತನಾಗಬಲ್ಲ ಎಂದು ಪತ್ರಕರ್ತ ಬಂಡು ಕುಲಕರ್ಣಿ ಹೇಳಿದರು. ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಭವಿಷ್ಯದ ಪತ್ರಿಕೋದ್ಯಮದಲ್ಲಿ ಎಐ ಬಳಕೆ ವಿಷಯದ ಕುರಿತು ಮಾತನಾಡಿದ ಅವರು ಎಐ ಬಾಹ್ಯ ಪ್ರಭಾವದಿಂದ ಮಾರುಕಟ್ಟೆಯು ತನ್ನ ಮೂಲ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಎಐ ಎಂಬ ಮಹಾಸಾಗರದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಅರಿಯಬೇಕು ತಂತ್ರಜ್ಞಾನ ಯುಗದಲ್ಲಿ ಎಐ ಮನುಷ್ಯನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದರು.
ಓದುಗರ ನಾಡಿಮಿಡಿತವನ್ನು ಗಮನದಲ್ಲಿಟ್ಟುಕೊಂಡು ಸರಳವಾದ ಶೈಲಿಯಲ್ಲಿ ಸುದ್ದಿ ಬರವಣಿಗೆಯನ್ನು ರೂಢಿಸಿಕೊಳ್ಳಿ. ಪತ್ರಕರ್ತನಿಗೆ ಸವಾಲು ಸರ್ವೇ ಸಾಮಾನ್ಯ. ಗೆಲ್ಲಬಲ್ಲೆ ಎಂಬ ಧೈರ್ಯದಿಂದ ಸಮಾಜಕ್ಕೆ ಕನ್ನಡಿಯಾಗಿ ಕಾರ್ಯನಿರ್ವಹಿಸಿ ಎಂದರು. ಬಾಗಲಕೋಟೆಯ ಹಿರಿಯ ಪತ್ರಕರ್ತ ಸುಶೀಲೆಂದ್ರ ಕುಂದರಗಿ ಅವರು ಪತ್ರಿಕೋದ್ಯಮದಲ್ಲಿ ಮಹಿಳೆಯರು ಮತ್ತು ವ್ಯಾಕರಣ ವಿಷಯದ ಕುರಿತು ಮಾತನಾಡಿದ ಅವರು ಜಗತ್ತು ಬದಲಾದಂತೆ ನಾವು ಬದಲಾಗಬೇಕು. ಪತ್ರಿಕೋದ್ಯಮದಲ್ಲಿ ಮಹಿಳೆಯರ ಪಾತ್ರ ಶ್ಲಾಘನೀಯ. ಇತ್ತೀಚಿನ ದಿನಗಳಲ್ಲಿ ಯುದ್ಧದ ಸಂದರ್ಭದಲ್ಲಿ ಮಹಿಳೆಯರು ಜನರಿಗೆ ಇಂಚಿಂಚು ಮಾಹಿತಿಯನ್ನು ಜನರಿಗೆ ತಲುಪಿಸುತ್ತಿರುವುದು ಸಂತೋಷ. ಜೊತೆಗೆ ಪತ್ರಿಕೋದ್ಯಮದಲ್ಲಿ ಭಾಷೆ, ವಾಕ್ಯ, ವಿಷಯ ಪ್ರಸ್ತುತತೆ ಮುಖ್ಯ. ಪತ್ರಿಕೆಯಲ್ಲಿ ವಿಭಕ್ತಿ ಪ್ರತ್ಯಯ, ಹೃಸ್ವಸ್ವರ, ದೀರ್ಘಸ್ವರದ ಬಳಕೆ ಅವಶ್ಯಕ. ವರದಿಗಾರ ಇದ್ದ ಪದಗಳಿಂದ ವರದಿ ಮಾಡದೆ ಹೊಸ ಪದಗಳನ್ನು ಹುಟ್ಟುಹಾಕಬೇಕು. ಸರಳವಾದ ಶೀರ್ಷಿಕೆಯ ಮೂಲಕ ಓದುಗರನ್ನು ನಿಮ್ಮತ್ತ ಸೆಳೆಯಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅದ್ದೂರಿಯಿಂದ ಜರುಗಿದ ಕೋಣ ಬಿಡುವ ಸಂಪ್ರದಾಯ ಕಾರ್ಯಕ್ರಮ : ಸಂಕೇಶ್ವರ ಮಹಾಲಕ್ಷ್ಮೀ ಜಾತ್ರೆಯ ಚೊಚ್ವಲು ಕಾರ್ಯಕ್ಕೆ ಚಾಲನೆ
ನಂದು ಮುಡಶಿ ಬೆವರು ಸುರಿಸಿ ಸ್ವಂತ ಜಮೀನಿನಲ್ಲಿ ಬೆಳೆದ ಅಕ್ಕಿ, ಜೋಳ ತಂದು ಕೊಟ್ಟಿಲ್ಲ. ಎಲ್ಲಿಂದ ಬಂದಿವೆ, ಆತನ ಸಾತಭಾರ ನನಗೆ ಗೊತ್ತಿದೆ : ಬಸನಗೌಡಾ
ಮಾಹಾಲಕ್ಷ್ಮೀ ಜಾತ್ರೆ ಲೆಕ್ಕ ಸಭೆಯಲ್ಲಿ ರಾಜಕೀಯ ಹಗ್ಗ ಜಗ್ಗಾಟದಿಂದ ಗಲಾಟೆ, ಆನೆ, ಪ್ರಮಾಣದಿಂದ ಜನರ ಛೀಮಾರಿ
ಸ್ಕೈರೂಟ್ ಏರೋಸ್ಪೇಸ್ನ ವಿಕ್ರಮ್-1 ಉಡಾವಣೆ ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಮಹತ್ವದ ಮೈಲುಗಲ್ಲು: ಪ್ರಧಾನಿ ಮೋದಿ
ಜೊಡಿ ಹತ್ಯೆಗೆ ತಿರುವು: ಆಸ್ತಿಗಾಗಿ ಇಬ್ಬರು ಮೈದುನರ ಹತ್ಯೆ ಮಾಡಿಸಿದ ಅತ್ತಿಗೆ : ಪೊಲೀಸ ತನಿಖೆಯಲ್ಲಿ ಬಹಿರಂಗ
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು 