ಪತ್ರಕರ್ತೆ ಕೀರ್ತಿಶೇಖರ ಕಾಸರಗೋಡು ಅವರಿಗೆ ಮಾತೃವಿಯೋಗ

ಪತ್ರಕರ್ತೆ ಕೀರ್ತಿಶೇಖರ ಕಾಸರಗೋಡು ಅವರಿಗೆ ಮಾತೃವಿಯೋಗ  Journalist Kirtishekhara Kasaragod passes away

ಲೋಕದರ್ಶನ ವರದಿ 

ಬೆಳಗಾವಿ 18: ಕಾಸರಗೋಡಿನ ಕಂಪಾ ಹೌಸಿನ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ನಿವೃತ್ತ ನರ್ಸಿಂಗ್ ಸೂಪರಿಡೆಂಟೆಂಟ್ ಉಮಾಸುಂದರಿ ಸೋಮಶೇಖರ ರಾವ್ ಸೋಮವಾರ ಮೇ 18ರಂದು ಬೆಂಗಳೂರಿನ ಪುತ್ರನ ನಿವಾಸದಲ್ಲಿ ನಿಧನರಾದರು.  ಮೃತರಿಗೆ 89 ವರ್ಷ ವಯಸ್ಸಾಗಿತ್ತು. ಮೃತರಿಗೆ ಓರ್ವ ಪುತ್ರ, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧುಗಳಿದ್ದಾರೆ. ಮೃತರು ಸಂಯುಕ್ತ ಕರ್ನಾಟಕ ಬೆಳಗಾವಿಯ ವರದಿಗಾರರಾದ ಕೀರ್ತನಕುಮಾರಿ ಕಾಸರಗೋಡು ಅವರ ತಾಯಿಯಾಗಿದ್ದಾರೆ.