ಕಾರ್ನಾಡ್ ನಿಧನಕ್ಕೆ ಜೋಶಿ ಸಂತಾಪ

ಹುಬ್ಬಳ್ಳಿ: ಭಾರತ ರಂಗಭೂಮಿಯ ಇತಿಹಾಸದಲ್ಲಿಯೇ ಅಗ್ರ ಸ್ಥಾನದಲ್ಲಿದ್ದ ನಾಟಕಕಾರ ಗಿರೀಶ್ ಕಾನರ್ಾಡರ ನಿಧನಕ್ಕೆ ಕೇಂದ್ರ ಸಂಸದೀಯ, ಗಣಿ ಮತ್ತು ಕಲ್ಲಿದ್ದಲು ಖಾತೆ ಮಂತ್ರಿ ಶ್ರೀ ಪ್ರಲ್ಹಾದ ಜೋಶಿ ಕಂಬನಿ ಮಿಡಿದಿದ್ದಾರೆ.

ಕನ್ನಡಕ್ಕೆ 7ನೇ ಜ್ಞಾನಪಿಠ ಪ್ರಶಸ್ತಿ ತಂದುಕೊಟ್ಟ ಹಿರಿಯ ಸಾಹಿತಿ ಡಾ. ಗಿರೀಶ್ ಕಾನರ್ಾಡರು ವಿಧಿವಶರಗಿರುವುದು ಸಾಂಸ್ಕೃತಿಕ ಲೋಕಕ್ಕೆ ತುಂಬಾಲಾರದ ನಷ್ಟ ಎಂದಿರುವ ಜೋಶಿ, ಕಾರ್ನಾಡ್ರು ತಮ್ಮ ಸಾಹಿತ್ಯದ ಮೂಲಕ ಬಣ್ಣದ ಬದುಕು ಹಾಗು ಸೈದ್ಧಾಂತಿಕ ನಿಲುವುಗಳ ಮೂಲಕ ದೇಶದ ಮೂಲೆ ಮೂಲೆಯಲ್ಲಿಯೂ ತಮ್ಮದೇ ಛಾಪನ್ನು ಮೂಡಿಸಿದ್ದರು ಎಂದು ಸ್ಮರಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದೂ ಪ್ರಾಥರ್ಿಸಿದ್ದಾರೆ.