ಯೋಗದಿಂದ ರೋಗ ಮುಕ್ತ ಭಾರತ ನಿರ್ಮಾಣಕ್ಕೆ ಕೈಜೋಡಿಸಿ: ವಿರೂಪಾಕ್ಷಪ್ಪ ಮಾಮನಿ
Join hands to build a disease-free India through yoga: Virupakshappa Mamani
ಯರಗಟ್ಟಿ, 22 : ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ, ಎಂದು ಭಾರತದ ಪ್ರಧಾನಮಂತ್ರಿಗಳ ಕರೆಯ ಮೆರೆಗೆ ಸಮೀಪದ ಮುನವಳ್ಳಿ ಪಟ್ಟಣದ ಅನ್ನದಾನೇಶ್ವರ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಆಯೋಜಿಸಿದ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸವದತ್ತಿ ಮಂಡಲದ ಬಿಜೆಪಿ ಅಧ್ಯಕ್ಷರು ವಿರೂಪಾಕ್ಷಪ್ಪ ಕ ಮಾಮನಿ ರವರು ಉದ್ಘಾಟಿಸಿರು.
ನಂತರ ಬಿಜೆಪಿ ಮುಖಂಡ ವಿರೂಪಾಕ್ಷ ಮಾಮನಿ ಮಾತನಾಡಿದ ಅವರು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಇಂದು 177ರಾಷ್ಟ್ರಗಳು ಆಚರಿಸುತ್ತಿದ್ದು, ಈ ಯೋಗದ ಮಹತ್ವನ್ನು ಮೋದಿ ಜಿ ರವರು ವಿಶ್ವಕ್ಕೆ ಪರಿಚಯಿಸಿದರು ಆದ್ದರಿಂದ ಯೋಗವನ್ನು ನೀವೆಲ್ಲರು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಯೋಗದಿಂದ ರೋಗ ಮುಕ್ತ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.
ಈ ವೇಳೆ ಬಿಜೆಪಿ ಮುಖಂಡ ಮಹಾದೇವ ಮುರಗೋಡ ಮಾತನಾಡಿ ಯೋಗವು ಸರ್ವ ರೋಗಕ್ಕೂ ಓಷಧಿಯ ಯಾಗಿದೆ, ಮನುಷನ ಮಾನಸಿಕ ಶಾರೀರಕ ಸದೃಢತೆಗೆ ಸಹಕಾರಿಯಾಗಿದೆ,ಯೋಗ ಬಲ್ಲವನಿಗೆ ರೋಗವಿಲ್ಲ ಎಂದರು,
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರು ಅರುಣಗೌಡ ಪಾಟೀಲ, ಕಾರ್ಯದರ್ಶಿ ಮಲ್ಲಿಕಾರ್ಜುನ ಜಮಖಂಡಿ, ನಿರ್ದೇಶಕರು ಶಂಕ್ರಣ್ಣ ಗಯಾಳಿ, ಈರಣ್ಣ ಸಂಕನ್ನವರ, ಮಲ್ಲೇಶ್ವರ ಸೂಳೆಬಾವಿ , ಮಹಾಂತೇಶ ಗೋಕಾಕ, ಮಹಾವಿದ್ಯಾಲಯದ ಪ್ರಾಚಾರ್ಯರು ಕೆ ಭಿ ನಲವಡೆ, ಪದವಿಪೂರ್ವ ಪ್ರಾಚಾರ್ಯರು, ಎಂ ಹೆಚ್ ಪಾಟೀಲ, ಯೋಗ ಶಿಕ್ಷಕರು ಶ್ರೀಧಾನು ಗದಗಿನ, ಅಶೋಕ ಸಂಕಣ್ಣವರ, ಉಪನ್ಯಾಸಕ ವಾಯ್. ಕೆ. ನರಿ, ಎಂ. ಸಿ. ಭಾಂಡೆಕರ, ಈರಣ್ಣ ವೀರಶೆಟಿ, ಆಕಶ ನಡನಳಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು 