ಲೀಡ್ಸ್, ಆ 25 ಸತತ ವೈಫಲ್ಯ ಅನುಭವಿಸಿದ್ದ ನಾಯಕ ಜೋ ರೂಟ್ ಮತ್ತೆ ಬ್ಯಾಟಿಂಗ್ ಲಯಕ್ಕೆ ಮರಳಿದ್ದಾರೆ. 189 ಎಸೆತಗಳಲ್ಲಿ ಅಜೇಯ 75 ರನ್ ಗಳಿಸಿರುವ ಅವರು ಆ್ಯಶಸ್ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲುವು ತಂದುಕೊಡುವ ತುಡಿತದಲ್ಲಿದ್ದಾರೆ. ಶನಿವಾರ ಆಸ್ಟ್ರೇಲಿಯಾ ನೀಡಿದ 359 ರನ್ ಗುರಿ ಹಿಂಬಾಲಿಸಿದ ಇಂಗ್ಲೆಂಡ್ ಮೂರನೇ ದಿನದಾಟದ ಮುಕ್ತಾಯಕ್ಕೆ 72 ಓವರ್ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿದೆ. ಇನ್ನೂ ಇಂಗ್ಲೆಂಡ್ ಗೆಲುವಿಗೆ 203 ರನ್ ಅಗತ್ಯವಿದ್ದು, ಕೈ ಯಲ್ಲಿ ಏಳು ವಿಕೆಟ್ ಹಾಗೂ ಎರಡು ದಿನ ಬಾಕಿಯಿದೆ. ಪ್ರಥಮ ಇನಿಂಗ್ಸ್ನಲ್ಲಿ ಕೇವಲ 67 ರನ್ಗಳಿಗೆ ಆಲೌಟ್ ಆಗಿದ್ದ ಇಂಗ್ಲೆಂಡ್ ತಂಡ ದ್ವಿತೀಯ ಇನಿಂಗ್ಸ್ ಆರಂಭದಲ್ಲೇ ಆಘಾತ ಅನುಭವಿಸಿತು. ತಂಡದ ಮೊತ್ತ 15 ರನ್ ಇರುವಾಗಲೇ ರೋರಿ ಬನ್ಸರ್್ (7 ರನ್) ಹಾಗೂ ಜೇಸನ್ ರಾಯ್ (8 ರನ್) ಅವರನ್ನು ಕ್ರಮವಾಗಿ ಹೇಜಲ್ವುಡ್ ಮತ್ತು ಪ್ಯಾಟ್ ಕಮಿನ್ಸ್ ಔಟ್ ಮಾಡಿದರು. ತಂಡಕ್ಕೆ ಆಸರೆಯಾದ ರೂಟ್- ಡೆನ್ಲಿ: ಕೇವಲ 15 ರನ್ ಗಳಿಗೆ ಪ್ರಮುಖ ಎರಡು ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಇಂಗ್ಲೆಂಡ್ ತಂಡಕ್ಕೆ ನಾಯಕ ಜೋ ರೂಟ್ ಹಾಗೂ ಜೋ ಡೆನ್ಲಿ ಭದ್ರ ಅಡಿಪಾಯ ಹಾಕಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿತು. ಈ ಜೋಡಿ ಮುರಿಯದ ಮೂರನೇ ವಿಕೆಟ್ಗೆ 126 ರನ್ ಜತೆಯಾಟವಾಡುವ ಮೂಲಕ ಇಂಗ್ಲೆಂಡ್ ಮೊತ್ತ 150 ರ ಸಮೀಪ ತಂದಿತು. 155 ಎಸೆತಗಳಲ್ಲಿ 50 ರನ್ ಗಳಿಸಿದ ಜೋ ಡೆನ್ಲಿ ಅವರನ್ನು ಹೇಜಲ್ವುಡ್ ಔಟ್ ಮಾಡಿದರು. ಅತ್ಯುತ್ತಮ ಬ್ಯಾಟಿಂಗ್ ಮಾಡಿದ ನಾಯಕ ಜೋ ರೂಟ್ 189 ಎಸೆತಗಳಲ್ಲಿ ಏಳು ಬೌಂಡರಿಯೊಂದಿಗೆ 75 ರನ್ ಗಳಿಸಿ ವಿಕೆಟ್ ಕಾಯ್ದುಕೊಂಡಿದ್ದಾರೆ. ಮತ್ತೊಂದು ತುದಿಯಲ್ಲಿ ಬೆನ್ ಸ್ಟೋಕ್ಸ್ (2) ಇದ್ದಾರೆ. ಇದಕ್ಕೂ ಮುನ್ನ ಆರು ವಿಕೆಟ್ ಕಳೆದುಕೊಂಡು 171 ರನ್ಗಳಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ್ದ ಆಸ್ಟ್ರೇಲಿಯಾ 75.2 ಓವರ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡು 246 ರನ್ ದಾಖಲಿಸಿತು. ಆ ಮೂಲಕ ಇಂಗ್ಲೆಂಡ್ಗೆ 359 ರನ್ ಗುರಿ ನೀಡಿತು. ಕೊನೆಯ ಹಂತದವರೆಗೂ ಹೋರಾಟ ನಡೆಸಿದ ಮಾರ್ನರ್ ಲಬುಸ್ಚಗ್ನೆ 187 ಎಸೆತಗಳಿಗೆ 80 ರನ್ ಗಳಿಸಿದರು. ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್ ಮೂರು ವಿಕೆಟ್ ಪಡೆದರು. ಸಂಕ್ಷಿಪ್ತ ಸ್ಕೋರ್ ಆಸ್ಟ್ರೇಲಿಯಾ ಪ್ರಥಮ ಇನಿಂಗ್ಸ್: 179 ದ್ವಿತೀಯ ಇನಿಂಗ್ಸ್: 75.2 ಓವರ್ಗಳಲ್ಲಿ 75.2 ಓವರ್ಗಳಲ್ಲಿ 246/10 (ಮಾರ್ನಸ್ ಲಬುಸ್ಚಗ್ನೆ 80, ಜೇಮ್ಸ್ ಪ್ಯಾಟಿನ್ಸನ್ 20; ಬೆನ್ ಸ್ಟೋಕ್ಸ್ 56 ಕ್ಕೆ 3, ಜೊಫ್ರಾ ಆರ್ಚರ್ 40 ಕ್ಕೆ 2, ಸ್ಟುವಟರ್್ ಬ್ರಾಡ್ 52 ಕ್ಕೆ 2) ಇಂಗ್ಲೆಂಡ್ ಪ್ರಥಮ ಇನಿಂಗ್ಸ್: 67 ದ್ವಿತೀಯ ಇನಿಂಗ್ಸ್: 72 ಓವರ್ಗಳಲ್ಲಿ 156/3 ( ಜೋ ರೂಟ್ ಔಟಾಗದೆ 75, ಜೋ ಡೆನ್ಲಿ 50; ಹೇಜಲ್ವುಡ್ 35 ಕ್ಕೆ 2, ಪ್ಯಾಟ್ ಕಮಿನ್ಸ್ 33 ಕ್ಕೆ