ಟಾಟಾ ಕಂಪನಿಯಲ್ಲಿ 6 ಬಿಸಿಎ ವಿದ್ಯಾರ್ಥಿಗಳಿಗೆ ನೌಕರಿ : 46 ವಿದ್ಯಾರ್ಥಿಗಳಿಗೆ ಖಾತರಿ !
Jobs for 6 BCA students in Tata company: Guaranteed for 46 students!
ಮಹಾಲಿಂಗಪುರ 16: ಸ್ಥಳೀಯ ಕೆಎಲ್‌ಇ ಸಂಸ್ಥೆಯ ಬಿಸಿಎ ಕಾಲೇಜಿನ 2ನೇ ಬ್ಯಾಚ್ ವಿದ್ಯಾರ್ಥಿಗಳು ಟಾಟಾ ಕಂಪನಿಗೆ ಸಾಫ್ಟ್‌ವೇರ್ ಟ್ರೇನಿ ಆಗಿ ಆಯ್ಕೆಯಾಗಿದ್ದಾರೆ. ಸಂದರ್ಶನದಲ್ಲಿ ಪಾಲ್ಗೊಂಡ 51 ವಿದ್ಯಾರ್ಥಿಗಳ ಪೈಕಿ 6 ವಿದ್ಯಾರ್ಥಿಗಳಿಗೆ ನೌಕರಿ ಆದೇಶ ಪತ್ರ ಬಂದಿದ್ದು, 46 ವಿದ್ಯಾರ್ಥಿಗಳು ಫೈನಲ್ ರೌಂಡ್‌ನಲ್ಲಿದ್ದು ನೌಕರಿ ಖಾತ್ರಿಯಲ್ಲಿದ್ದಾರೆ. ಆಯ್ಕೆಯಾದ 6 ವಿದ್ಯಾರ್ಥಿಗಳು 2.30 ಲಕ್ಷ ಪ್ಯಾಕೇಜ್ ವೇತನಕ್ಕೆ ಅರ್ಹರಾಗಿದ್ದಾರೆ.
ಗ್ರಾಮೀಣ ಭಾಗದಲ್ಲೂ ಈ ಕಾಲೇಜಿನ ಮೊದಲ ಬ್ಯಾಚ್‌ನ ಎಲ್ಲಾ 34 ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗುವ ಮೂಲಕ ಶೇ.100 ಉದ್ಯೋಗವಕಾಶ ಪಡೆದಿದ್ದರು. ಇದೀಗ 2ನೇ ಬ್ಯಾಚ್‌ನ ವೈಷ್ಣವಿ ಉಳ್ಳಾಗಡ್ಡಿ, ಲಕ್ಷ್ಮೀ ಹಿಟ್ಟಿನಮಠ, ಐಶ್ವರ್ಯ ಅಳ್ಳಿಚಂಡಿ, ಶಾಂಭವಿ ಯಾದವಾಡ, ವಿಶಾಖಾ ಬದಿ, ವಿಜಯಲಕ್ಷ್ಮೀ ಬುರುಡ ಟಾಟಾ ಕಂಪನಿಗೆ ಆಯ್ಕೆಯಾಗಿದ್ದು, ಉಳಿದ 46 ವಿದ್ಯಾರ್ಥಿಗಳು ಫೈನಲ್ ರೌಂಡ್‌ನಲ್ಲಿ ಆಯ್ಕೆಯಾದರೆ ಮತ್ತೆ ಶೇ.100 ಉದ್ಯೋಗವಕಾಶ ಪಡೆದ ಹೆಮ್ಮೆ ನಮ್ಮದಾಗುತ್ತದೆ ಎಂದು ಮಹಾಲಿಂಗಪುರ ಕೆಎಲ್‌ಇ ಬಿಸಿಎ ಕಾಲೇಜಿನ ಸಂಯೋಜಕ ಎಸ್.ಐ.ಪಾಟೀಲ ಹರ್ಷ ವ್ಯಕ್ತಪಡಿಸಿದ್ದಾರೆ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 