ದಿ.28 ರಂದು ಡಿ.ಬಿ.ಹೆಬ್ಬಾಳಿ ಸರಕಾರಿ ಕಾಲೇಜಿನಲ್ಲಿ ಉದ್ಯೋಗ ಮೇಳ
Job fair at D.B. Hebbali Government College on the 28th
ಉಳ್ಳಾಗಡ್ಡಿ-ಖಾನಾಪೂರ 26: ಸ್ಥಳಿಯ ಡಿ. ಬಿ ಹೆಬ್ಬಾಳಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ದಿ.28 ರಂದು ಡಿ.ಬಿ.ಹೆಬ್ಬಾಳಿ ಸರಕಾರಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ, ಸತೀಶ ಜಾರಕಿಹೊಳಿ ಫೌಂಡೇಶನ ಗೋಕಾಕ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಬೆಳಗಾವಿ ಸಂಯುಕ್ತಾಶ್ರಯದಲ್ಲಿ ಬೃಹತ್ ಉದ್ಯೋಗ ಮೇಳ ನಡೆಯಲಿದೆ ಎಂದು ಕಾಲೇಜಿನ ಪ್ರಾಚಾರ್ಯ ಎಮ್.ಎಮ್. ಮಗದುಮ್ಮ ಹೇಳಿದರು.
ಅವರು ಡಿ.ಬಿ.ಹೆಬ್ಬಾಳಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಬುಧವಾರ ದಿ.25 ರಂದು ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಗ್ರಾಮೀಣ ವಲಯದ ವಿದ್ಯಾರ್ಥಿಗಳ ಅಗತ್ಯತೆಯನ್ನು ಅರಿತು ಸಚಿವ ಸತೀಶ ಜಾರಕಿಹೊಳಿಯವರ ಸಹಕಾರದಲ್ಲಿ ಸುಮಾರು 30 ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿವೆ. ಈ ಬೃಹತ್ ಉದ್ಯೋಗ ಮೇಳದಲ್ಲಿ ಉಚಿತ ಪ್ರವೇಶದೊಂದಿಗೆ ಪಾಲ್ಗೊಳ್ಳಲು ಆನ್ ಲೈನ್ ಸಂಪರ್ಕ ಕಲ್ಪಿಸಲಾಗಿದೆ, ಈ ವಲಯದ ಯುವಕ-ಯುವತಿಯರ ಅನುಕೂಲಕ್ಕಾಗಿ ನಡೆಸಲಾಗುತ್ತಿದ್ದು ಬಹುತೇಕ ಸರಕಾರಿ ಕಾಲೇಜಿನಲ್ಲಿ ಇದೇ ಪ್ರಥಮ ಬಾರಿ ಬೃಹತ್ ಉದ್ಯೋಗ ಮೇಳ ನಡೆಸಲಾಗಿದ್ದು ಬೆಂಗಳೂರು ಮುಂಬೈ ಪೂನಾ ಸೇರಿದಂತೆ ವಿವಿದ ನಗರ ಪ್ರದೇಶಗಳಂತೆ ಗ್ರಾಮೀಣ ಹಾಗೂ ಸುತ್ತಲಿನ ಪ್ರದೇಶಗಳ ಯುವಕರಿಗೆ ಅಗತ್ಯವಿದ್ದು, ಉದ್ಯೋಗ ಅವಕಾಶಗಳನ್ನು ನೀಡುವ ಪ್ರಯತ್ನದೊಂದಿಗೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತಮ್ಮ ವಲಯದಲ್ಲೆ ಉದ್ಯೋಗಾವಕಾಶ ಗಿಟ್ಟಿಸಿಕೊಳ್ಳುವ ಸದುದ್ದೇಶ ಇದಾಗಿದೆ ಎಂದ ಅವರು ದಿ 25 ರಂದು ಮುಂಜಾನೆ 9.30 ರಿಂದ ಸಂಜೆ 4 ಗಂಟೆಯ ವರೆಗೆ ನಡೆಯಲಿರುವ ಈ ಉದ್ಯೋಗ ಮೇಳವನ್ನು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಉದ್ಘಾಟಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಚಿಕ್ಕೋಡಿ ಸಂಸದೆ ಪ್ರೀಯಂಕಾ ಜಾರಕಿಹೊಳಿ, ಅಧ್ಯಕ್ಷತೆಯನ್ನು ಗ್ರಾ, ಪಂ, ಅಧ್ಯಕ್ಷ ಚಂದ್ರಕಂತ ದೇ ಪಾಟೀಲ, ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ಉಪನಿರ್ದೇಶಕ ಗುರುಪಾದಯ್ಯಾ ಹಿರೇಮಠ, ಚಿಕ್ಕೋಡಿಯ ಉಪನಿರ್ದೇಶಕರಾದ ಪಾಂಡುರಂಗ ಭಂಡಾರಿ, ಜಿಲ್ಲಾ ಸಂಯೋಜಕರಾದ ಸಂತೋಷ ನಾವಲಗಿ, ತಾಲೂಕಾ ದಂಡಾಧಿಕಾರಿ ಮಂಜುಳಾ ನಾಯಿಕ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ,
ಪ್ರಾಚಾರ್ಯ ಎಮ್,ಎಮ್,ಮಗದುಮ್ಮ, ಉಪಪ್ರಾಂಶುಪಾಲ ಸುನೀತಾ ನಲವಡೆ, ಎಸ್‌ಡಿಎಮ್‌ಸಿ ಉಪಾಧ್ಯಕ್ಷ ಮಹಾವೀರ ಸನಕಿ, ಸುಭಾಷ ಹೆಬ್ಬಾಳಿ, ಸಂಯೋಜಕಿ ಫಾತಿಮಾ ಜಕಾತಿ, ಉಪಸ್ಥಿತರಿರುವರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 