ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಗೆ ಜಿಂದಾಲ್ ಶಾಲೆಯ ವಿದ್ಯಾರ್ಥಿಗಳ ಆಯ್ಕೆ
Jindal School students selected for national level karate tournament
ಬಳ್ಳಾರಿ 07: ಟ್ರಡಿಷನಲ್ ಶೊಟೋಕಾನ್ ಕರಾಟೆ ಅಕಾಡೆಮಿ ಕರ್ನಾಟಕದ ಕರಾಟೆ ವಿದ್ಯಾರ್ಥಿಗಳು ಅಸ್ಸಾಂ ರಾಜ್ಯದ ಗುಹಾಟಿಯಲ್ಲಿ ಮೇ 16 ಮತ್ತು 17ರಂದು ನಡೆಯಲಿರುವ 24ನೇ ಅಖಿಲ ಭಾರತ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆಎಂದು ಅಕಾಡೆಮಿಯ ಹಿರಿಯ ಕರಾಟೆ ತರಬೇತುದಾರ ಕಟ್ಟೆ ಸ್ವಾಮಿ ತಿಳಿಸಿದ್ದಾರೆ.ಈ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಬಳ್ಳಾರಿಯ ತೋರಣಗಲ್ಲು ಜಿಂದಾಲ್ ಶಾಲೆಯ ಕರಾಟೆ ಪಟುಗಳು ಸೇರಿದಂತೆ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಕರಾಟೆ ಕ್ರೀಡಾಪಟುಗಳು ಕಟಾ ಮತ್ತು ಕುಮಿತೆ ವಿಭಾಗಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.
ವಯೋಮಿತಿ ಹಾಗೂ ತೂಕ ವಿಭಾಗಗಳ ಆಧಾರದ ಮೇಲೆ ಒಟ್ಟು 10 ಬಾಲಕರು, 3 ಬಾಲಕಿಯರು ಮತ್ತು 4 ತರಬೇತುದಾರರು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.ಪಂದ್ಯಾವಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಕಾಡೆಮಿಯ ಹಿರಿಯ ಕರಾಟೆ ತರಬೇತುದಾರರಾದ ಸುಭಾಷ್ ಚಂದ್ರ, ಜಡೇಶ ಹುಲಗಣ್ಣ, ಡಿ. ನಾಗರಾಜ್, ಹನುಮಂತ ಪ್ರಸಾದ್, ನಬೀ ಸಾಹೇಬ, ಆನಂದ್ ಹಾಗೂ ಜಿಂದಾಲ್ ಅಧಿಕಾರಿಗಳು ಮತ್ತು ಕ್ರೀಡಾಭಿಮಾನಿಗಳು ಶುಭ ಹಾರೈಸಿದ್ದಾರೆ ಎಂದು ತಿಳಿಸಿದರು.
ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ, 