ಆರ್ಥಿ ಕ ಗಣತಿಗೆ ಎಲ್ಲರ ಸಹಕಾರ ಅಗತ್ಯ: ಜಯಶ್ರೀ ಮೊಗೇರ

ಕಾರವಾರ, 18: ಏಳನೆ ಆರ್ಥಿ ಕ ಗಣತಿಯ ಲಾಭಾಂಶ ಸಾರ್ವಜನಿಕರಿಗೇ ಆಗಲಿದ್ದು ಗಣತಿ ಸಂದರ್ಭದಲ್ಲಿ ಎಲ್ಲರ ಸಹಕಾರ ಮುಖ್ಯ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೊಗೇರ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯತಿಯಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ಏಳನೇ ಆರ್ಥಿ ಕ ಗಣತಿ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು  ಉದ್ಘಾಟಿಸಿ ಅವರು ಮಾತನಾಡಿದರು.

ಗಣತಿ ಆಧಾರದ ಮೇಲೆಯೇ ಸರ್ಕಾ ರದ ಯೋಜನೆಗಳನ್ನು ರೂಪಿಸಲು ಸಾಧ್ಯವಿದ್ದು ಅದರ ಪ್ರಯೋಜನ ಅಂತಿಮವಾಗಿ ಸಾರ್ವಜನಿಕರಿಗೇ ಆಗಿದೆ. ಆದ್ದರಿಂದ ಗಣತಿ ಸಂದರ್ಭದಲ್ಲಿ ಸಂಬಂಧಿಸಿದರು ಗಣತಿದಾರರಿಗೆ ಪೂರಕವಾಗಿ ಸ್ಪಂದಿಸಬೇಕು ಎಂದು ಅವರು ತಿಳಿಸಿದರು.

ಗಣತಿದಾರರು ಮಾಹಿತಿ ಸಂಗ್ರಹಿಸುವ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ವಿಶ್ವಾಸಾರ್ಹತೆಯನ್ನು ಸಾಧಿಸಬೇಕು ಹಾಗೂ ವಾಸ್ತವ ಮಾಹಿತಿಯನ್ನು ನಮೂದಿಸಿಕೊಳ್ಳಬೇಕು. ಜಿಲ್ಲಾ ಸಾಂಖ್ಯಿಕ ಇಲಾಖೆ ಈ ಇದರ ಮೇಲ್ವಿಚಾರಣೆಯನ್ನು ಉತ್ತಮವಾಗಿಯೇ ವಹಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿಗಳು ವಿ. ಎಂ ಹೆಗಡೆ ರವರು,6ನೇ ಆಥರ್ಿಕ ಗಣತಿಯನ್ನಾ 2012-13 ನೇ ಸಾಲಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಶಿಕ್ಷಕರ ಸಹಾಯದಿಂದ ಕೈಗೊಂಡಿದ್ದು ಅದಕ್ಕೂ ಹಿಂದಿನ 5 ಗಣತಿಗಳನ್ನು ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಪ್ರಾಥಮಿಕ/ಪ್ರೌಡ ಶಾಲಾ ಶಿಕ್ಷಕರಿಂದ ಗಣತಿಯನ್ನು ಕೈಗೊಳ್ಳಲಾಗಿತ್ತು. ಈ 7 ನೇ ಆಥರ್ಿಕ ಗಣತಿಯನ್ನು  ಸಂಸ್ಥೆಯ ಪಾಲುಗಾರಿಕೆಯೊಂದಿಗೆ ಕೈಗೊಳ್ಳಲಾಗುವುದೆಂದು ಹಾಗೂ ವಿಶéೇಷವಾಗಿ ಈ ಗಣತಿ ಕಾರ್ಯವನ್ನು ಜಿ.ಪಿ.ಎಸ್ ಆಧಾರಿತ ಮೋಬೈಲ್ ಆಪ್ ಮೂಲಕ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ವಿನೋದ ವಾಮನ್ ಅಣ್ವೇಕರ ಇವರು, ಆಥರ್ಿಕ ಗಣತಿಯ ಹಿನ್ನೆಲೆ ಹಾಗೂ ಉದ್ದೇಶವನ್ನು ವಿವರಿಸುತ್ತಾ ಆಥರ್ಿಕ ಗಣತಿಯು ದೇಶದ ಭೌಗೋಳಿಕ ಗಡಿಯೊಳಗೆ ನೆಲಗೊಂಡು ಸ್ವಂತ ಉಪಯೋಗಕ್ಕಲ್ಲದ ಸರಕುಗಳ ಉತ್ಪಾದನೆ ಅಥವಾ ಅವುಗಳ ವಿತರಣೆ/ಮಾರಾಟ ಅಥವಾ ಸೇವೆ ಇತ್ಯಾದಿ ಆಥರ್ಿಕ ಚಟುವಟಿಕೆಗಳಲ್ಲಿ ತೊಡಗಿರುವ ಉದ್ಯಮಗಳ/ ಘಟಕಗಳ ಪೂರ್ಣ ಎಣಿಕೆಯಾಗಿರುತ್ತದೆ. ಈ ಗಣತಿಯಲ್ಲಿ ಸಂಘಟಿತ ಮತ್ತು ಅಸಂಘಟಿತ ವಲಯಗಳ ಎಲ್ಲಾ ಉದ್ಯಮಗಳ ಗಣತಿಯನ್ನು ಮಾಡಲಾಗುತ್ತದೆ ಎಂದರು.

ಸರಕುಗಳ ಉತ್ಪಾದನೆ, ಅವುಗಳ ವಿತರಣೆ/ಮಾರಾಟ ಅಥವಾ ಸೇವಾ ಚಟುವಟಿಕೆಯಿಂದ ರಾಷ್ಟ್ರೀಯ ಉತ್ಪನ್ನಕ್ಕೆ ಮೌಲ್ಯವನ್ನು ತಂದು ಕೊಡುತ್ತಿದೆಯೋ ಅಂತಹವುಗಳನ್ನು ಆರ್ಥಿ ಕ ಚಟುವಟಿಕೆ ಎಂದು ಪರಿಗಣಿಸಲಾಗುವುದು. ಆಥರ್ಿಕ ಗಣತಿಯು ದೇಶದ ಪ್ರಗತಿಯಲ್ಲಿ, ರಾಷ್ಟ್ರೀಯ ತಲಾದಾಯ ಮತ್ತು ಜಿಡಿಪಿಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.

ಆಥರ್ಿಕ ಗಣತಿಯ ಮೊದಲನೆ ಗಣತಿಯನ್ನು 1977 ರಲ್ಲಿ ಕೈಗೊಂಡು ಈಗ 7 ನೇ ಆಥರ್ೀಕ ಗಣತಿಯನ್ನು ಜೂನ್ -15, 2019 ರಿಂದ ಪ್ರಾರಂಭಿಸಿ ಸಪ್ಟೆಂಬರ್ ಅಂತ್ಯದವರೆಗೆ ನಡೆಯುವುದಾಗಿ ತಿಳಿಸಿ, ಗಣತಿಯನ್ನು ಅಖಅ (ಅಠಟಟಠಟಿ ಖಜಡಿತಛಿಜ ಅಜಟಿಣಡಿಜ) ಜ-ರಠತಜಟಿಚಿಟಿಛಿಜ ಖಜಡಿತಛಿಜ ಟಿಜಚಿ ಐಟಣಜಜ ಮತ್ತು ಓಚಿಣಠಟಿಚಿಟ ಖಚಿಟಠಿಟಜ ಖಣಡಿತಜಥಿ ಔಡಿರಚಿಟಿದಚಿಣಠಟಿ (ಓಖಖಔ) ರವರ ಸಂಪೂರ್ಣ ಜವಾಬ್ದಾರಿ ಹಾಗೂ ನೇತೃತ್ವದಲ್ಲಿ ನಡೆಯುವುದಾಗಿ ಹಾಗೂ ಗಣತಿಯ 2 ನೇ ಹಂತದ ಮೇಲ್ವಿಚಾರಣೆಯನ್ನು ಸಾಂಖ್ಯಿಕ ಇಲಾಖೆಯು ಕೈಗೊಳ್ಳಿದ್ದು ಈ ಇಲಾಖೆಯಿಂದ ಶೇಕಡಾ 10 ರಷ್ಟು  ಮೇಲ್ವಿಚಾರಣೆ ಕೈಗೊಳ್ಳಬೇಕಾಗಿರುತ್ತದೆ ಎಂದು ತಿಳಿಸಿದರು.

ಘನ ಸಕರ್ಾರದ ಆದೇಶದಂತೆ, ಗಣತಿ ಕಾಯರ್ಾಚರಣೆ ಸುಸೂತ್ರವಾಗಿ ಹಾಗೂ ಪರಿಣಾಮಕಾರಿಯಾಗಿ ಕೈಗೊಳ್ಳಲು ಜಿಲ್ಲಾ ಮಟ್ಟದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು ಈ ಸಮಿತಿಯ ಮೊದಲನೇ ಸಭೆ ದಿನಾಂಕ: 10-06-2019 ರಂದು ಮಾನ್ಯ ಜಿಲ್ಲಾಧಿಕಾರಿಗಳ ಕಾಯರ್ಾಲಯದಲ್ಲಿ ಜರುಗಿದ್ದು ಗಣತಿ ಕಾರ್ಯಕ್ಕೆ ಹೆಚ್ಚಿನ ಪ್ರಚಾರ ನೀಡಲು ಹಾಗೂ ಗ್ರಾಮ ಪಂಚಾಯತ, ತಾಲೂಕಾ ಪಂಚಾಯತ ಮಟ್ಟದಲ್ಲಿ ನಡೆಯುವ ಸಭೆಗಳಲ್ಲಿ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿ ವ್ಯಾಪಕ ಪ್ರಚಾರ ಕೈಗೊಳ್ಳಲು ಹಾಗೂ ಶಾಲಾ ಮಟ್ಟದಲ್ಲಿ ಶಿಕ್ಷಕರ ಸಹಕಾರದೊಂದಿಗೆ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಪ್ರಚಾರ ಕೈಗೊಳ್ಳಲು ಮಾನ್ಯ ಅಧ್ಯಕ್ಷರು ನಿರ್ದೇ ಶನ ನೀಡಿರುತ್ತಾರೆಂದು ಸಭೆಯ ಗಮನಕ್ಕೆ ತಂದರು. ಜಿಲ್ಲಾ ಮಟ್ದದ ಸಮಿತಿಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳು ಒಳಗೊಂಡಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕರು, ಜಂಟಿ ನಿದರ್ೇಶಕರು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ರವರು ಪ್ರಮುಖವಾಗಿ ಸಮಿತಿಯ ಸದಸ್ಯರಾಗಿರುತ್ತಾರೆ ಎಂದರು.

ಜಿಲ್ಲಾ ಪಂಚಾಯತಉಪಾಧ್ಯಕ್ಷ ಸಂತೋಷ ಶಂಕರ ರೇಣಕೆ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರರತ್ನಾಕರ ಮಹಾದೇವ ನಾಯಕ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಶಿವಾನಂದ. ಆರ್. ಹೆಗಡೆ ಗಾಯತ್ರಿ ಮಂಜುನಾಥ ಗೌಡ, ಪುಷ್ಪಾ ಗೋವಿಂದ ನಾಯ್ಕ, ದೀಪಕ ಗಣೇಶ ನಾಯ್ಕ ಉಪಸ್ಥಿತರಿದ್ದರು.