ಗ್ಯಾರಂಟಿ ಯೋಜನೆಗಳ ಸಮರ​‍್ಕ ಅನುಷ್ಠಾನಕ್ಕಾಗಿ ಗ್ರಾಮ ಪಂಚಾಯತ ಮಟ್ಟದಲ್ಲಿ ಜನತಾ ಸದನ : ಬಿ ಬಿ ಅಸೂಟಿ.

Janata Sadan at Gram Panchayat level for effective implementation of guarantee schemes: B.B. Asuti.

ಗ್ಯಾರಂಟಿ ಯೋಜನೆಗಳ ಸಮರ​‍್ಕ ಅನುಷ್ಠಾನಕ್ಕಾಗಿ ಗ್ರಾಮ ಪಂಚಾಯತ ಮಟ್ಟದಲ್ಲಿ ಜನತಾ ಸದನ : ಬಿ ಬಿ ಅಸೂಟಿ. 

ಗದಗ 5:- ಘನವ್ಯೆತ್ ರಾಜ್ಯ ಸರಕಾರದ ಮಹಾತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಾದ ಗ್ರಹಲಕ್ಷ್ಮೀ ಯೋಜನೆ, ಗ್ರಹಜ್ಯೋತಿ ಯೋಜನೆ, ಯುವ ನಿಧಿ ಯೋಜನೆ,   ಸ್ತ್ರೀ ಶಕ್ತಿ ಯೋಜನೆ, ಅನ್ನಭಾಗ್ಯ ಯೋಜನೆಯಂತಹ ಮಹತ್ವದ ಯೋಜನೆಗಳನ್ನು ಸಮಸ್ತ ರಾಜ್ಯವ್ಯಾಪಿ ರಹವಾಸಿಯಾಗಿರುವ ನಾಗರಿಕರ ಸಾಮಾಜಿಕ, ಆರ್ಥಿಕ, ಸೈಕ್ಷಣಿಕ, ಮತ್ತು ನೈತಿಕ ಶ್ರೇಯೋಭಿವೃದ್ಧಿಗಾಗಿ ಜಾರಿಗೊಳಿಸಲಾಗಿರುತ್ತದೆ.  

ಸದರಿ ಪಂಚ ಗ್ಯಾರಂಟಿ ಯೋಜನೆಗಳ ಸಮರ​‍್ಕ ಸುರಳಿತ ಅನುಷ್ಠಾನಕ್ಕಾಗಿ ಈಗಾಗಲೇ ಘನ ರಾಜ್ಯ ಸರಕಾರದಿಂದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರವನ್ನು ರಚಿಸಲಾಗಿರುತ್ತದೆ.ಆ ಪ್ರಯುಕ್ತ ಗದಗ ಜಿಲ್ಲೆಯ ಸಮಸ್ತ ನಾಗರಿಕರಿಗೆ ಈ ಒಂದು ಮಹತ್ವಪೂರ್ಣ ಪಂಚ ಗ್ಯಾರಂಟಿ ಯೋಜನೆಗಳನ್ನು ಪಡೆಯುವುದರಲ್ಲಿ ಉಂಟಾಗುತ್ತಿರುವ ತಾಂತ್ರಿಕ ತೊಂದರೆ, ಮತ್ತು ಇನ್ನಿತರ ಸಮಸ್ಯೆಗಳಿಂದ ವಂಚಿತರಾಗುತ್ತಿರುವರು.ಸದರಿ ಪಂಚ ಗ್ಯಾರಂಟಿ ಯೋಜನೆಗಳ ಸಮರ​‍್ಕ ಸುರಳಿತ ಅನುಷ್ಠಾನಕ್ಕಾಗಿ ಈಗಾಗಲೇ ಘನ ರಾಜ್ಯ ಸರಕಾರದಿಂದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರವನ್ನು ರಚಿಸಲಾಗಿರುತ್ತದೆ.ಆ ಪ್ರಯುಕ್ತ ಗದಗ ಜಿಲ್ಲೆಯ ಸಮಸ್ತ ನಾಗರಿಕರಿಗೆ ಈ ಒಂದು ಮಹತ್ವಪೂರ್ಣ ಪಂಚ ಗ್ಯಾರಂಟಿ ಯೋಜನೆಗಳನ್ನು ಪಡೆಯುವುದರಲ್ಲಿ ಉಂಟಾಗುತ್ತಿರುವ ತಾಂತ್ರಿಕ ತೊಂದರೆ, ಮತ್ತು ಇನ್ನಿತರ ಸಮಸ್ಯೆಗಳಿಂದ 

ಸದುಪಯೋಗ ಪಡೆಯುವದರಿಂದ ವಂಚಿತರಾಗುತ್ತಿರುವ ನಾಗರಿಕರಿಗೆ ನೆರವುದಾಯಕವಾಗಲು ಜಿಲ್ಲಾ ಮತ್ತು ತಾಲೂಕಾ ಮಟ್ಟದಲ್ಲಿ ಜನತಾ ಸದನವನ್ನು ಆಯೋಜಿಸುವ ಮೂಲಕ ನೆರವುದಾಯಕವಾಗಲಿದೆ. ಅದರಂತೆ ಗ್ರಾಮೀಣ ಮಟ್ಟದಲ್ಲಿಯು ಗ್ರಾಮ ಗಳಲ್ಲಿಯೂ ಜನತಾ ಸದನ ಜರುಗಿಸುವ ಮೂಲಕ ಅತ್ಯುತ್ತಮವಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಹಳ್ಳಿ ಪ್ರದೇಶಗಳ ನಾಗರಿಕರಿಗೂ ತಲುಪುವಂತಾಗಲು  ಗ್ರಾಮ ಸಭೆಯ ಮೂಲಕ  ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆ ಸಾರಿಗೆ ಇಲಾಖೆ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಹಾಗೂ ಆಹಾರ ಇಲಾಖೆಯ ಸಹಕಾರ ದೊಂದಿಗೆ ನೆರವು ನೀಡಲಾಗುವದು ಎಂದು ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಬಿ ಬಿ ಅಸೂಟಿಯವರು ತಿಳಿಸಿದರು. 

ಈ ಸಂಧರ್ಭದಲ್ಲಿ ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಶ್ರೀಮತಿ ನೀಲಮ್ಮ ಬೋಳನವರ, ಶಿರಹಟ್ಟಿ ತಾಲೂಕಾ ಗ್ಯಾಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ವೀರಯ್ಯ ಮಠಪತಿ, ತಾಲೂಕಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಅಶೋಕ ಮಂದಾಲಿ, ಯಂಕಣ್ಣ ಯರಾಶಿ, ಈಶ್ವರ ಹುಣಸಿಕಟ್ಟಿ, ದೇವರಡ್ಡಿ ತಿರ್ಲಾಪೂರ, ಶಂಬು ಕಾಳೆ, ಸಾವಿತ್ರಿ ಹೂಗಾರ ಈಶ್ವರ​‍್ಪ ಎಸ್ ಹುಣಶಿಕಟ್ಟಿ, ಗಜೇಂದ್ರಗಡ ತಾಲೂಕಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಶರಣಪ್ಪ ಬೇಲೇರಿ, ಆಹಾರ ಇಲಾಖೆಯ ವಿನೋದ ಹೆಗ್ಗಳಗಿ ಹೆಸ್ಕಾಂ ಇಲಾಖೆಯ ಚೇತನ್ ಎಸ್ ಹಾದಿಮನಿ, ಗದಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಆನಂದ ಹೊಂಬಳ, ಗದಗ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿಗಳಾದ ಶ್ರೀಮತಿ ರಾಧಾ ಮಣ್ಣೂರ, ಗದಗ ಜಿಲ್ಲಾ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಳಾದ ಶ್ರೀಮತಿ ಮಂಜುಳಾ ಕಮತ ಹಾಗೂ ಇನ್ನಿತರರು ಉಪಸ್ಥಿತರಿದ್ದರು.