ಜಾನಕಿ ಹಳ್ಳ ಒತ್ತುವರಿ: ಮನೆಗಳಿಗೆ ನುಗ್ಗಿದ ನೀರು
Janaki Halla encroachment: Water entered houses
ತಾಳಿಕೋಟೆ 19: ಪಟ್ಟಣದಲ್ಲಿ ಗುರುವಾರ ಸಂಜೆ ಸುರಿದ ಅಬ್ಬರದ ಮಳೆಗೆ ವಿದ್ಯಾಭಾರತಿ ಪ್ರೌಢಶಾಲೆಯ ಬಳಿ ದೇವರಹಿಪ್ಪರಗಿ ರಸ್ತೆಯಲ್ಲಿ ಅಡ್ಡಲಾಗಿ ಹರಿಯುವ ಐತಿಹಾಸಿಕ ಜಾನಕಿ ಹಳ್ಳದ ಅಕ್ಕ ಪಕ್ಕದ ಜಾಗವನ್ನು ಕೆಲವು ಪ್ರಭಾವಿಗಳು ಒತ್ತೂವರೆ ಮಾಡಿಕೊಂಡಿರುವುದರಿಂದ ಹಳ್ಳಕ್ಕೆ ಪ್ರವಾಹ ಬಂದು ನೀರು ಕೆಲವು ಮನೆಗಳಿಗೆ ನುಗ್ಗಿರುವುದರ ಜೊತೆಗೆ ರಸ್ತೆಯ ಮೇಲೆ ತುಂಬಿ ಹರಿದು ರಸ್ತೆ ಸಂಚಾರ ಸ್ಥಗಿತವಾಗಿತ್ತು.ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮೋರ್ ಶಾಪ್ ಮುಂದೆ ನೀರು ಹಳ್ಳದೋಪಾದಿಯಲ್ಲಿ ಹರಿಯಿತು. ಇದರಿಂದ ದೇವರ ಹಿಪ್ಪರಗಿಯತ್ತ ಹೋಗುವ ವಾಹನಗಳು, ಆಶ್ರಯ ಬಡಾವಣೆ, ಅಂಬಿಗರ ಚೌಡಯ್ಯ ವೃತ್ತ, ಬಸ್ ಡಿಪೋದತ್ತ ಹೋಗುವ ಜನರು ವಾಹನಗಳಿಗೆ ಗಂಟೆಗೂ ಅಧಿಕ ಕಾಲ ನಿಲ್ಲಬೇಕಾಯಿತು.ಹಳ್ಳದ ಪ್ರವಾಹದ ನೀರು ವಿದ್ಯಾಭಾರತಿ ಶಾಲೆಯ ಹಿಂದೆ ಆವರಣದಲ್ಲಿನ ಮನೆಗಳಿಗೂ ನುಗ್ಗಿದೆ. ಹಳ್ಳದ ನೀರು ಎಸ್.ಕೆ.ಕಾಲೇಜಿನ ಹಿಂದುಗಡೆಯಿಂದ ಹರಿಯುತ್ತಿದ್ದು, ಅಲ್ಲಿ ಆಶ್ರಯ ಬಡಾವಣೆಗೆ ಹೋಗುವ ರಸ್ತೆ ಪ್ರವಾಹದಿಂದ ಬಂದ್ ಆಗಿದೆ. ಜೋರು ಮಳೆ,
ಪ್ರವಾಹದಲ್ಲಿ ವ್ಯಕ್ತಿಯೊಬ್ಬ ಸಿಲುಕಿದ್ದು ಚೀರಾಡುತ್ತಿದ್ದನು. ವಿದ್ಯುತ್ ಸಂಪರ್ಕ ಇಲ್ಲದಿರುವುದರಿಂದ ಕತ್ತಲೆಯಲ್ಲಿ ಆತನ ಇರುವಿಕೆ ಗುರುತಿಸಲಾಗಲಿಲ್ಲ ಎಂದು ತಿಳಿಸಲಾಗಿದೆ.ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹರಸಾಹಸಪಟ್ಟು ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ.ಜಾನಕಿ ಹಳ್ಳದ ಒತ್ತುವರಿಯಾಗಿದ್ದು ಈ ಎಲ್ಲ ಅವಘಡಗಳಿಗೆ ಕಾರಣವಾಗುತ್ತಿದೆ ಕೆಲವು ಸಾಮಾಜಿಕ ಹೋರಾಟಗಾರರು ಜಾನಕಿ ಹಳ್ಳದ ರಕ್ಷಣೆಗಾಗಿ ಹೋರಾಟವನ್ನು ನಡೆಸುತ್ತಿದ್ದು ಒತ್ತುವರಿ ಮಾಡಿದವರಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳು ಇರುವುದರಿಂದ ಅವರನ್ನು ರಕ್ಷಿಸುವ ಕಾರ್ಯ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಅವರ ಆರೋಪವಾಗಿದೆ ಈಗಾಗಲೇ ಸದರಿ ಹಳ್ಳದ ಒತ್ತೂವರೆ ಪ್ರಕರಣ ನ್ಯಾಯಲಯದಲ್ಲಿದೆ ವಿಷಯ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು ಅವರು ಅಧಿಕಾರಿಗಳಿಗೆ ವರದಿ ಕೇಳಿದ್ದಾರೆ ಸಮಸ್ಯೆ ಆದಷ್ಟು ಬೇಗ ಪರಿಹರಿಸದೇ ಹೋದಲ್ಲಿ ಇದಕ್ಕಾಗಿ ದೊಡ್ಡ ಮಟ್ಟದ ಹೋರಾಟ ನಡೆಸುವ ಮಾತುಗಳು ಕೇಳಿ ಬರುತ್ತಿವೆ. ಸ್ಥಳಿಯ ಆಡಳಿತಗಳು ಈ ಕುರಿತು ಗಂಭೀರವಾಗುವ ಅಗತ್ಯವಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 