ಸೆಂಚೂರಿಯನ್, ಡಿ 26 ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ 150 ಪಂದ್ಯಗಳಾಡಿದ ವಿಶ್ವದ ಮೊದಲ ವೇಗಿ ಎಂಬ ಸಾಧನೆಗೆ ಇಂಗ್ಲೆೆಂಡ್ ತಂಡದ ಹಿರಿಯ ವೇಗಿ ಜೇಮ್ ಅಂಡರ್ಸನ್ ಭಾಜನರಾಗಿದ್ದಾರೆ. ಗುರುವಾರ ಇಲ್ಲಿನ ಸೂಪರ್‌ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಅವರು ಈ ಹಿರಿಮೆಗೆ ಪಾತ್ರರಾದರು. ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡು ತಂಡಕ್ಕೆೆ ಮೊದಲನೇ ಪಂದ್ಯವಾಡಿದ ಅವರು, ಮೊದಲನೇ ಎಸೆತದಲ್ಲೇ ಆಫ್ರಿಕಾದ ಆರಂಭಿಕ ಡೀನ್ ಎಲ್ಗರ್ ಕ್ಲೀನ್ ಬೌಲ್ಡ್ ಮಾಡಿದರು. 135 ಪಂದ್ಯಗಳಾಡಿರುವ ಸಹ ಆಟಗಾರ ಸ್ಟುವರ್ಟ್ ಬ್ರಾಡ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ವೆಸ್ಟ್ ಇಂಡೀಸ್ ಮಾಜಿ ವೇಗಿ ಕೌರ್ಟಿನಿ ವಾಲ್ಷ್ 132 ವಿಕೆಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಭಾರತ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್, ಸ್ಟೀವ್ ವಾ ಹಾಗೂ ಜಾಕ್ ಕಾಲಿಸ್ ಬಳಿಕ 150 ಟೆಸ್ಟ್ ಪಂದ್ಯಗಳಾಡಿದ ವಿಶ್ವದ ಮೂರನೇ ಆಟಗಾರರಾಗಿದ್ದಾರೆ.ಜೇಮ್ಸ್ ಅಂಡರ್ಸನ್ ಅವರು ಆಸ್ಟ್ರೇಲಿಯಾ ವಿರುದ್ಧ ಮೊದಲನೇ ಆ್ಯಷಸ್ ಮೊದಲನೇ ಟೆಸ್ಟ್‌ನಲ್ಲಿ ಕೊನೆಯ ಪಂದ್ಯವಾಡಿದ್ದರು. ಈ ಪಂದ್ಯದಲ್ಲಿ ಅವರು ಕೇವಲ ನಾಲ್ಕು ಓವರ್ ಬೌಲಿಂಗ್ ಮಾಡಿದ್ದರು. ನಂತರ, ಗಾಯಕ್ಕೆೆ ತುತ್ತಾಗಿ ಅಂಗಳ ತೊರೆದಿದ್ದರು. ಇತ್ತೀಚೆಗೆ ಮುಕ್ತಾಯವಾಗಿದ್ದ ನ್ಯೂಜಿಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೂ ಅಲಭ್ಯರಾಗಿದ್ದರು.20ರ ಪ್ರಾಯದಲ್ಲಿ ಅಂಡರ್ಸನ್ ಇಂಗ್ಲೆೆಂಡ್ ತಂಡದ ಪರ ಚೊಚ್ಚಲ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಕ್ಕೆೆ ಪದಾರ್ಪಣೆ ಮಾಡಿದ್ದರು. ಇಂಗ್ಲೆೆಂಡ್ ಮಾಜಿ ನಾಯಕ ಅಲ್‌ಸ್ಟೈರ್ ಕುಕ್ ಅವರು ಇಂಗ್ಲೆೆಂಡ್ ಅತಿ ಹೆಚ್ಚು ಟೆಸ್ಟ್ ಪಂದ್ಯಗಳಾಡಿದ ಮೊದಲ ಆಟಗಾರರಾಗಿದ್ದಾರೆ. 161 ಟೆಸ್ಟ್ ಪಂದ್ಯಗಳಿಂದ 12,472 ರನ್ ಗಳಿಸಿದ್ದಾರೆ. ಇದರಲ್ಲಿ 33 ಶತಕಗಳು ಒಳಗೊಂಡಿವೆ.