ಜಂಬಗಿ ಸುಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ವಿನೂತನ ಸೌಕರ್ಯ ಹೊಂದಿರುವ ಕಣ್ಣಿನ ಆಸ್ಪತ್ರೆ : ಲಕ್ಷ್ಮೀ ಹೆಬ್ಬಾಳಕರ
Jambagi Super Specialty Eye Hospital is an eye hospital with innovative facilities: Lakshmi Hebbalka
ಬೆಳಗಾವಿ 22 : ನಗರದ ಕೃಷ್ಣ ದೇವರಾಯ ಸರ್ಕಲ್ ಬಳಿ ಡಾ.ಲಕ್ಷ್ಮಣ ಜಂಬಗಿ ಅವರ ನೂತನ ಜಂಬಗಿ ಸುಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಉದ್ಘಾಟಿಸಿದರು.ರವಿವಾರದಂದು ಜಂಬಗಿ ಸುಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿಯೇ ಬೆಳಗಾವಿ ದೊಡ್ಡ ಜಿಲ್ಲಾ ಹಾಗೂ ಎರಡನೇಯ ರಾಜ್ಯಧಾನಿ ಅಗಿದ್ದು, ದಿನನಿತ್ಯ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಪ್ರದ್ಮಶ್ರೀ ಡಾ. ಪ್ರಭಾಕರ ಕೋರೆ ಅವರು ಸಾಕಷ್ಟ್ರು ಅನುಭವದ ಮಾತುಗಳನ್ನು ಹಂಚಿಕೊಂಡು ಮೊದಲು ಬೆಳಗಾವಿ ಯಾವ ರೀತಿ ಇತ್ತು ಇದೀಗ ಯಾರ ರೀತಿಯಲ್ಲಿ ಬೆಳದಿದೆ ಎಂದು ನಮ್ಮ ಮನದಾಳದ ಮಾತುಗಳನ್ನು ಆಡಿದ್ದಾರೆ ಎಂದರು. ಕೆಎಲ್ ಇ ಸಂಸ್ಥೆಯು ಒಂದು ಆಲದ ಮರ ಆ ಮರದ ಕೆಲಗಡೆ ಎಲ್ಲರು ಕುಳಿತು ಕೊಳ್ಳುತ್ತಿದ್ದಾರೆ.
ಗಟ್ಟಿ ಯಾಗಿರುವುದರಿಂದ ಇವತ್ತು ಆರೋಗ್ಯ ದೃಷ್ಟಿ ಹೆಚ್ಚಾಗುತ್ತಿದೆ, ಆರೋಗ್ಯಕ್ಕೆ ವಿಶ್ವಾಸ ಎಂದು ಬೆಳಗಾವಿ ವೈಧ್ಯರು ಹಾಗೂ ವೈಧ್ಯಕೀಯ ಕ್ಷೇತ್ರ ಅದೇ ರೀತಿಯಲ್ಲಿ ಜಂಬಗಿ ಆಸ್ಪತ್ರೆಯು ದೊಡ್ಡ ಮಟ್ಟದಲ್ಲಿ ಬೇಳೆಯಲಿದೆ ಎಂದು ಹೇಳಿ ಶುಭ ಹಾರೈಸಿದರು.ಈ ಆಸ್ಪತ್ರೆಯ ಶಸ್ತ್ರ ಚಿಕಿತ್ಸೆಗೆ ಜರ್ಮನಿ ಜಪಾನ್ ನಿಂದ ಚಿಕಿತ್ಸೆಗೆ ಬೇಕಾಗಿರುವ ಸಲಹಕರಣೆಗಳನ್ನು ತರಿಸಿದ್ದಾರೆ. ಈ ಆಸ್ಪತ್ರೆಯೂ ದೊಡ್ಡ ಮಟ್ಟದಲ್ಲಿ ಬೇಳೆದು ರಾಜ್ಯಾಧ್ಯಾಂತ ವಿಸ್ತರಿಸಬೇಕೆಂದು ಲಕ್ಷ್ಮೀ ಹೆಬ್ಬಾಳಕ್ಕರ್ ಹೇಳಿದರು. ಕೆ ಎಲ್ ಇ ಗೌರವ ಕಾರ್ಯಧ್ಯಕ್ಷರಾದ ಡಾ. ಪ್ರಭಾಕರ್ ಕೋರೆ ಅವರು ಮಾತನಾಡಿ, ಕಳೆದ ನಾಲ್ವತು ವರ್ಷಗಳ ಹಿಂದೆ ಬೆಳಗಾವಿ ಯಾವ ರೀತಿ ಇತ್ತು, ಇದೀಗ ಯಾವ ರೀತಿ ಯಾಗಿ ಬೆಳಗಾವಿ ಬದಲಾವಣೆ ಯಾಗಿದೆಯೂ ಅದೇ ರೀತಿ ನಮ್ಮ ವೈಧ್ಯಕೀಯವೂ ನೂತನ ತಂತ್ರಜ್ಞಾನಗಳೊಂದಿಗೆ ಬದಲಾವಣೆಯಾಗುತ್ತಿದೆ. ಜಂಬಗಿ ಸುಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯನ್ನು ನೋಡಿದರೆ ಒಂದು ಫೈಸ್ಟಾರ್ ಹೋಟೆಲ್ ರೀತಿ ಕಾಣುತ್ತಿದೆ, ಅಷ್ಟು ಸುಂದರವಾಗಿ ಕಟ್ಟದವನ್ನು ನಿರ್ಮಾಣ ಮಾಡಿದ್ದಾರೆ. ಜಂಬಗಿ ಆಸ್ಪತ್ರೆಯು ಜಿಲ್ಲೆಯಲ್ಲಿ ಅಷ್ಟೇ ಅಲ್ಲದೆ ರಾಜ್ಯ ಹಾಗೂ ದೇಶ ವ್ಯಾಪ್ತಿಯಲ್ಲಿ ಬೆಳದು ಜನತೆಯಸೇವೆ ಮಾಡಬೇಕು ಎಂದರು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಂಬಗಿ ಸುಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಸಂಸ್ಥಾಪಕ ಲಕ್ಷ್ಮಣ ಜಂಬಗಿ ಮಾತನಾಡಿದಿ ಕಳೆದ ಮೂವತ್ತು ವರ್ಷಗಳಿಂದ ವೈಧ್ಯಕೀಯ ಕ್ಷೇತ್ರದಲ್ಲಿ ಜನತೆಯ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದೇವೆ, ಮೋದಲು ರಾಯಭಾಗ ತಾಲೂಕಿನ ಹಾರೊಗೇರಿಯಲ್ಲಿ ಸಣ್ಣ ಆಸ್ಪತ್ರೆಯನ್ನು ಪ್ರಾರಂಭ ಮಾಡಿ ಸತತವಾಗಿ ಜನತೆಯ ಸೇವೆ ಮಾಡಿಕೊಂಡು ಬಂದು ಇದೀಗ ಬೆಳಗಾವಿಯ ಕೇಂದ್ರ ಬಿಂದುವಿನಲ್ಲಿ ದೊಡ್ಡ ಮಟ್ಟದಲ್ಲಿ ಜನತೆಯ ಸೇವೆ ಮಾಡಬೇಕೆಂದು ಈ ಆಸ್ಪತ್ರೆಯಲ್ಲಿ ನಿರ್ಮಾಣ ಮಾಡಲಾಗಿದೆ ಎಂದರು. ಇನ್ನು ಈ ಸಂಸ್ಥೆ, ಒಂದೇ ಸೂರಿನಡಿ ಸಂಪೂರ್ಣ ಕಣ್ಣಿನ ಚಿಕಿತ್ಸೆಯನ್ನು ಒದಗಿಸುತ್ತದೆ.
ಇದರಲ್ಲಿ ಕಣ್ಣಿನ ಮೋತಿ ಬಿಂದು, ಕ್ಯಾಟರಾಕ್ಟ್, ಕಾರ್ನಿಯಾ, ರೆಟಿನಾ, ಗ್ಲಕೋಮಾ, ಮಕ್ಕಳ ನೇತ್ರಚಿಕಿತ್ಸೆ, ಒಕ್ಕುಲೋಪ್ಲಾಸ್ಟಿ, ನ್ಯೂರೋ-ಆಫ್ತಾಲ್ಮಾಲಜಿ, ರಿಫ್ರಾಕ್ಟಿವ್ ಶಸ್ತ್ರಚಿಕಿತ್ಸೆ ಸೇರಿದಂತೆ ವಿಶೇಷ ಡ್ರೈ ಐ ಹಾಗೂ ಕಾಂಟ್ಯಾಕ್ಸ್ ಲೆನ್ಸ್ ಕ್ಲಿನಿಕ್ ಕೂಡ ಸೇರಿದೆ, ಮತ್ತು ಬಾರಿಗೆ ರೋಬೋಟಿಕ್ 4) ಫ್ಯಾಕೋ ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆ ಹಾಗೂ ಕನ್ನಡಕ ಮುಕ್ತಿಗಾಗಿ ಜೈಸ್ಟ್ ಒಇಐ 90 ಎಕ್ಸೆಮರ್ ಲೇಸರ್ ತಂತ್ರಜ್ಞಾನವನ್ನು ಹೆಚ್ಚಿನ ನಿಖರತೆ, ಸುರಕ್ಷತೆ ಮತ್ತು ವೇಗವಾದ ಗುಣಮುಖತೆಯನ್ನುಪಡೆದುಕೊಳ್ಳಲಿದೆ ಜನತೆಯು ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದರು. ಸಮಾರಂಭದಲ್ಲಿ ಡಾ. ವರ್ಷಾ ಜಂಬಗಿ, ಡಾ.ಅಮೋಘ ಜಂಬಗಿ, ಡಾ.ಪ್ರೇರಣಾ ಜಂಬಗಿ, ಡಾ. ಹಿತಾ ಮೃನಾಲ್ ಹೆಬ್ಬಾಳ್ಕರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 