ದೇಶದ ರಾಜಕಾರಣಕ್ಕೆ ಜೇಟ್ಲಿ ಕೊಡುಗೆ ಸ್ಮರಣೀಯ : ಮಮತಾ ಸಂತಾಪ

 ಕೋಲ್ಕತಾ, ಆ 24      ಬಿಜೆಪಿ ಹಿರಿಯ ಮುಖಂಡ, ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ನಿಧನಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನಜರ್ಿ ಸಂತಾಪ ವ್ಯಕ್ತಪಡಿಸಿದ್ದಾರೆ   ಅರುಣ್ ಜೇಟ್ಲಿ ನಿಧನದಿಂದ ತೀವ್ರ ದುಃಖವಾಗಿದೆ  ಅತ್ಯುತ್ತಮ ಸಂಸದ, ಅದ್ಭುತ ವಕೀಲರಾಗಿದ್ದ  ಅವರು, ಎಲ್ಲ ಪಕ್ಷಗಳ ನಾಯಕರಿಗೂ ಮೆಚ್ಚಿನವರಾಗಿದ್ದರು.  ದೇಶದ ರಾಜಕಾರಣಕ್ಕೆ ಅವರು ನೀಡಿದ ಕೊಡುಗೆ ಸದಾ ಸ್ಮರಣೀಯ ಎಂದು ಹೇಳಿದ್ದಾರೆ   ಅವರ ಪತ್ನಿ, ಮಕ್ಕಳು, ಸ್ನೇಹಿತರು ಮತ್ತು ಬೆಂಬಲಿಗರಿಗೆ ನನ್ನ ಸಂತಾಪವಿದೆ ಎಂದು ಮಮತಾಬ ಬ್ಯಾನರ್ಜಿ ತಿಳಿಸಿದ್ದಾರೆ   ಉಸಿರಾಟ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಆಗಸ್ಟ್ 9ರಂದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ 66 ವರ್ಷದ ಅರುಣ್ ಜೇಟ್ಲಿ, ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮಧ್ಯಾಹ್ನ 12 ಗಂಟೆ 7 ನಿಮಿಷಕ್ಕೆ ಮೃತಪಟ್ಟಿದ್ದಾರೆ