ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಜೊತೆ ಜೈಶಂಕರ್ ಮಾತುಕತೆ

  ವಾಷಿಂಗ್ಟನ್, ಅ 4:  ಪ್ರಸ್ತುತ ಅಮೆರಿಕ ಪ್ರವಾಸದಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ್ ಅವರು ಹೊಸದಾಗಿ ನೇಮಕಗೊಂಡ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒ'ಬ್ರಿಯನ್ರನ್ನು ಗುರುವಾರ   ಭೇಟಿಯಾಗಿ ಮಾತುಕತೆ ಮಾಡಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಒ'ಬ್ರೇನ್ ಅವರನ್ನು ಭೇಟಿಯಾಗಿ  ಪ್ರಮುಖ ವಿಷಯಗಳ ಬಗ್ಗೆ  ಮಾತುಕತೆ ಮಾಡಿರುವುದು ಸಮಾಧಾನ ತಂದಿದೆ ಎಂದು ನಂತರ ಜೈಶಂಕರ್ ಟ್ವೀಟ್ ಮಾಡಿದ್ದಾರೆ. ಅವರೊಂದಿಗೆ ಕೆಲಸ ಮಾಡಲು ಉತ್ಸಕನಾಗಿದ್ದೇನೆ ರಾಬರ್ಟ್ ಒ 'ಬ್ರಿಯಾನ್ ಅವರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರಕಾರದ ನಾಲ್ಕನೇ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದಾರೆ.   ಜೈಶಂಕರ್ ಅವರು  ವಿದೇಶಾಂಗ ಸಚಿವ  ಮೈಕ್ ಪೊಂಪಿಯೊ ಸೇರಿದಂತೆ ಅನೇಕ  ಪ್ರಮುಖ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.