ಬೆಳಗಾವಿ 09: ಜೈನ್ ಸಮಾಜದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಜೈನ ಮುನಿ ಗುಣಧರನಂದಿ ಮಹಾರಾಜರ ನೇತೃತ್ವದಲ್ಲಿ ಬೆಳಗಾವಿಯ ಬಸ್ತವಾಡ ಗ್ರಾಮದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜೈನ ಸಮುದಯಕ್ಕೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪನೆ ಮಾಡಬೇಕು. ಪ್ರತಿವರ್ಷ 200 ಕೋಟಿ ಅನುದಾನ ನೀಡಬೇಕು. ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೆ ಜೈನರ ನೇಮಕ ಆಗಬೇಕು. ಜೈನ ಸಮುದಾಯಕ್ಕೆ ಶೇ 20ಅ ಮೀಸಲಾತಿ ನೀಡಬೇಕು. ಜೈನ ಸಮುದಾಯದ ಶಿಕ್ಷಣ ಸಂಸ್ಥೆಗಳಲ್ಲಿ ಸರಕಾರ ಮೊಟ್ಟೆ ಕೊಡುವ ನಿರ್ಧಾರ ವಾಪಸ್ ಪಡೆಯಬೇಕು ಎಂದು ಜೈನ್ ಸಮುದಾಯದವರು ಬೇಡಿಕೆ ಇಟ್ಟಿದ್ದಾರೆ. ಸಮಾವೇಶದಲ್ಲಿ ಜೈನ್ ಮುಖಂಡರು, ಸ್ವಾಮೀಜಿಗಳು ಭಾ್ಯಾಗಿದ್ದರು.