ನ್ಯೂಯಾರ್ಕ್, ಫೆ ೨೦, ಜುರಾಸಿಕ್ ಪಾರ್ಕ್ ನಂತಹ ಚಿತ್ರಗಳನ್ನು ಜಗತ್ತಿಗೆ ನೀಡಿದ ಪ್ರಸಿದ್ಧ ಹಾಲಿವುಡ್ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ ಪುತ್ರಿ ಮಿಕೇಲಾ ಸಂಚಲನದ ನಿರ್ಧಾರ ಕೈಗೊಂಡಿದ್ದಾರೆ. ಪೋರ್ನ್ ತಾರೆಯಾಗಿ ವೃತ್ತಿಜೀವನ ಆರಂಭಿಸಲು ನಿರ್ಣಯಿಸಿರುವ ೨೩ ವರ್ಷದ ಮಿಕೇಲಾ ಅವರನ್ನು ಸ್ಪಿಲ್ ಬರ್ಗ್, ಅವರ ಪತ್ನಿ ಕೇಟ್ ಕಾಪ್ಷಾ ದತ್ತು ಪಡೆದುಕೊಂಡಿದ್ದರು. ಮಿಕೇಲಾ ಸ್ವಂತ ಪೋರ್ನ್ ವಿಡಿಯೋಗಳನ್ನು ನಿರ್ಮಿಸುತ್ತಿದ್ದಾಳೆ. ಮತ್ತೊಂದೆಡೆ, ಆಕೆ ತನ್ನ ನೆಚ್ಚಿನ ಸ್ಟ್ರಿಪ್ ಕ್ಲಬ್‌ಗೆ ಪ್ರವೇಶ ಪಡೆಯಲು ಸ್ಟ್ರಿಪ್ಪರ್ ಪರವಾನಗಿ ಪಡೆಯಲು ಪ್ರಯತ್ನಿಸುತ್ತಿದ್ದಾಳೆ. ಮಿಕೇಲಾ ತನ್ನ ಸ್ಟೇಜ್ ಹೆಸರನ್ನು ಶುಗರ್ ಸ್ಟಾರ್ ಎಂದು ಇರಿಸಿಕೊಂಡಿದ್ದಾಳೆ ಎಂದು ಎಂಟರ್ ಟೈನ್ ಮೆಂಟ್ ಪೋರ್ಟಲ್ ಹೇಳಿದೆ.
ಈ ವೃತ್ತಿಯ ಬಗ್ಗೆ ವ್ಯಾಮೋಹ ಹೊಂದುವುದು ನಾಚಿಕೆಗೇಡಿನ ಸಂಗತಿಯಲ್ಲ. ನಾನೀಗ ವಯಸ್ಕರ ಮನರಂಜನೆ ವೃತ್ತಿ ಜೀವನ ಆರಂಭಿಸುತ್ತಿದ್ದೇನೆ. ಇದು ಸಕಾರಾತ್ಮಕ ಮತ್ತು ಸಬಲೀಕರಣಗೊಳಿಸುವ ನಿರ್ಧಾರ ಎಂದು ಆಕೆ ಹೇಳಿದ್ದಾಳೆ. ಸುರಕ್ಷಿತ, ಪರಸ್ಪರ ಅಂಗೀಕರಿಸುವ ಕೆಲಸಗಳನ್ನು ಮಾಡಲು ಬಯಸುತ್ತೇನೆ. ತಮ್ಮ ನಿರ್ಧಾರದಿಂದ ತಂದೆ ತಾಯಿಗೆ ಯಾವುದೇ ಆಶ್ಚರ್ಯವಾಗಲಿಲ್ಲ. ನನ್ನ ಬಾವಿ ಪತಿಯಾಗಲಿರುವ ಚಕ್ ಪ್ಯಾಂಕೊ( ೪೭), ಕೂಡಾ ತಮ್ಮ ನಿರ್ಧಾರವನ್ನು ಬೆಂಬಲಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ತನ್ನ ಅಭಿಮಾನಿಗಳಲ್ಲಿ ಹೆಚ್ಚು ವಯಸ್ಸಾದ ಪುರುಷರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ, ಪ್ಯಾಂಕೊ ಮೇಲಿನ ಗೌರವದಿಂದ ಕೇವಲ ಸೋಲೋ ವೀಡಿಯೊಗಳನ್ನು ಕಾಣಿಸಿಕೊಳ್ಳುತ್ತೇನೆ. ಕ್ಯಾಮರಾ ಮುಂದೆ ಇತರರೊಂದಿಗೆ ಲೈಂಗಿಕ ಕಾರ್ಯಕಲಾಪದಲ್ಲಿ ಪಾಲ್ಗೊಳ್ಳುವ ವಿಡಿಯೋಗಳು ಇರುವುದಿಲ್ಲ, ಬಾಲ್ಯದಲ್ಲಿ ತಾನೂ ಸಹ ನಿಂದನೆ ಹಾಗೂ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಗಿ ಆಕೆ “ದಿ ಸನ್” ಜೊತೆ ಮಾತನಾಡುತ್ತಾ ಬಹಿರಂಗಪಡಿಸಿದ್ದಾರೆ.