ಟೆನ್ನಿಸ್ ಟೂರ್ನಮೆಂಟ್ ನಲ್ಲಿ ಜೆ.ಎಸ್‌.ಎಸ್ ವಿದ್ಯಾರ್ಥಿಗಳ ಸಾಧನೆ

ಟೆನ್ನಿಸ್ ಟೂರ್ನಮೆಂಟ್ ನಲ್ಲಿ ಜೆ.ಎಸ್‌.ಎಸ್ ವಿದ್ಯಾರ್ಥಿಗಳ ಸಾಧನೆ JSS students' achievement in the tennis tournament

ಲೋಕದರ್ಶನ ವರದಿ 

ಧಾರವಾಡ 27: ಜೆ.ಎಸ್‌.ಎಸ್ ಶ್ರೀ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್, ಉಣಕಲ್ಲ, ಹುಬ್ಬಳ್ಳಿ ಶಾಲೆಯ ವಿದ್ಯಾರ್ಥಿಗಳಾದ ಸುಚಿ ಮಷಾಲ್ ಮತ್ತು ರುಚಿತ್ ಮಷಾಲ್ ಅವರು ಕರ್ನಾಟಕ ಟೇಬಲ್ ಟೆನ್ನಿಸ್ ಅಸೋಸಿಯೇಷನ್, ಬೆಳಗಾವಿ ಅವರು ಆಯೋಜಿಸಿರುವ 'ಟೇಬಲ್ ಟೆನ್ನಿಸ್ ಟೂರ್ನಮೆಂಟ್' ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಸುಚಿ ಮಷಾಲ್ ಹಿ ಬಾಲಕಿಯರ ವಿಭಾಗದಲ್ಲಿ ಅಂಡರ್‌-11 ನಲ್ಲಿ ಪ್ರಥಮ ಸ್ಥಾನ ಮತ್ತು ಅಂಡರ್‌-13 ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ರುಚಿತ್ ಮಷಾಲ್ ಹಿ ಅಂಡರ್‌-15 ಬಾಲಕರ ವಿಭಾಗದಲ್ಲಿ ಕರ್ನಾಟಕ ರಾಜ್ಯ ಮಟ್ಟದ ಅಂಡರ್‌-15 ಬಾಲಕರ ವಿಭಾಗದಲ್ಲಿ 6ನೇ ಶ್ರೇಯಾಂಕ ಪಡೆದುಕೊಂಡಿದ್ದಾರೆ. ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸುಚಿ ಮಷಾಲ್ ಮತ್ತು ರುಚಿತ್ ಮಷಾಲ್ ಇದೀಗ ಉತ್ತರ ಪ್ರದೇಶದ ಭಾರತೀಯ ಟೇಬಲ್ ಟೆನಿಸ್ ಫೆಡರೇಷನ್ ವತಿಯಿಂದ ಕಾನ್ಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. ಸಾಧನೆಗೈದ ಮಕ್ಕಳನ್ನು ಜೆ.ಎಸ್‌.ಎಸ್ ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ, ಶ್ರೀ ಮಹಾವೀರ ಉಪಾದ್ಯೆ, ಪ್ರಾಚಾರ್ಯೆ ಶ್ರೀಮತಿ ಪ್ರೇರಣಾ ಪಾತ್ರ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.