ನವದೆಹಲಿ, ಜ 27: ದೇಶವನ್ನು ಇಬ್ಬಾಗ ಮಾಡುವವರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕುಮ್ಮಕ್ಕು, ಬೆಂಬಲ ನೀಡುತ್ತಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ನಡ್ಡಾ ಆರೋಪಿಸಿದ್ದಾರೆ.
ಜೆಎನ್ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಮತ್ತು ಇತರರ ವಿರುದ್ಧ ದಾಖಲಿಸಿದ ದೇಶದ್ರೋಹ ಪ್ರಕರಣದ ವಿಚಾರಣೆ ನಡೆಸಲು ಎಎಪಿ ಸರ್ಕಾರ ಪೊಲೀಸರಿಗೆ ಅನುಮತಿ ನೀಡುತ್ತಿಲ್ಲ ಎಂದೂ ದೂರಿದ್ದಾರೆ .
ದೇಶದ್ರೋಹಿಗಳ ವಿರುದ್ಧ ಕ್ರಮ ಕೈಗೊಂಡರೆ ಅದು ಮತ ಬ್ಯಾಂಕ್ ಮೇಲೆ ಕುಸಿದು ಹೋಗಿ ಮತ್ತೆ ಅವರಿಗೆ ಅಧಿಕಾರ ಕೈತಪ್ಪಲಿದೆ ಎಂಬ ಆತಂಕ ಕಾಡುತ್ತಿಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಭಾರತವನ್ನು ನಾವು ವಿಭಜಿಸುತ್ತೇವೆ( ಭಾರತ್ ತೇರೇ ತುಕ್ಡೇ ಹೋಂಗೇ ) ಎಂದು ಕನ್ಹಯ್ಯಾ ಕುಮಾರ್, ಉಮರ್ ಖಾಲೀದ್ ಮತ್ತು ಇತರರು ಘೋಷಣೆ ಕೂಗಿದ್ದರು.
ಪ್ರಜಾಪ್ರಭುತ್ವಕ್ಕೆ ಸವಾಲು ಹಾಕುವ ಬೆದರಿಕೆ ಒಡ್ಡುತ್ತಿದ್ದಾರೆ. ಕಾನೂನು ಸಂಸ್ಥೆಗಳು ಈ ಬಗ್ಗೆ ತನಿಖೆ ನಡೆಸಿದ್ದು ಸದ್ಯವೇ ಆರೋಪಪಟ್ಟಿ ಸಲ್ಲಿಸಲಾಗುವುದು ಎಂದೂ ಅವರು ಹೇಳಿದರು.
ದೇಶವನ್ನು ವಿಭಜನೆ ಮಾಡುವವರಿಗೆ ಬೆಂಬಲ ಯಾಕೆ ಎಂಬ ಸತ್ಯಸಂಗತಿಯನ್ನು ಕೇಜ್ರಿವಾಲ್ ಬಹಿರಂಪಡಿಸಲಿ ಎಂದೂ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಸಾಮಾಜಿಕ ಜಾಲತಾಣದಲ್ಲಿ ಸವಾಲು ಹಾಕಿದ್ದಾರೆ.