ಜೆಇಇ ಮೇನ್ಸ್ ಪರೀಕ್ಷೆ: ಬಸವಜ್ಯೋತಿ ಪಪೂ ಕಾಲೇಜಿನ 9 ಜನ ವಿದ್ಯಾರ್ಥಿಗಳು ಉತ್ತೀರ್ಣ
JEE Mains exam: 9 students from Basavajyothi Papu College pass
ಲೋಕದರ್ಶನ ವರದಿ
ಜಮಖಂಡಿ 20: ರಾಷ್ಟ್ರಮಟ್ಟದ ಎಂಜಿನಿಯರಿಂಗ್ ಕಾಲೇಜುಗಳ ಬಿಇ, ಬಿ.ಟೆಕ್ ಕೋರ್ಸ್‌ಗಳ ಪ್ರವೇಶಕ್ಕಾಗಿ ನ್ಯಾಷನಲ್ ಟೆಸ್ಟಿಂಗ್ ಏಜನ್ಸಿ ನಡೆಸಿದ್ದ ಜೆಇಇ ಮೇನ್ಸ್ ಪರೀಕ್ಷೆಗೆ ಮೂಡಬಿದರಿಯ ವಿದ್ಯಾಶಾರದ ಅಕಾಡೆಮಿ ಸಹಯೋಗದ ಬಸವಜ್ಯೋತಿ ಪದವಿಪೂರ್ವ ಕಾಲೇಜಿನ 9 ಜನ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ತಿಳಿಸಿದ್ದಾರೆ. ಪರೀಕ್ಷೆಗೆ ಹಾಜರಾಗಿದ್ದ 36 ಜನ ವಿದ್ಯಾರ್ಥಿಗಳಲ್ಲಿ 9 ಜನ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಅತ್ಯುತ್ತಮ ಫಲಿತಾಂಶ ನೀಡಿದ್ದಾರೆ. ಉತ್ತೀಣರಾದ ವಿದ್ಯಾರ್ಥಿಗಳು ಇಂತಿದ್ದಾರೆ. ಕೀರ್ತಿ ತೇಲಿ(92.19ಅ), ಅಭಯ ಬಸರಕೋಡ(90ಅ), ಸೌಮ್ಯ ಬಳಗಾರ(88.12ಅ), ಸಿದ್ಧಾರ್ಥ ಕುಂಬಾರ(85.13ಅ), ಸೌಂದರ್ಯ ಗೋಳಶೆಟ್ಟಿ(83.12ಅ), ಗಣೇಶ ಹೊಸಟ್ಟಿ(82.79ಅ), ಅಮೃತಾ ಕೊಕಟನೂರ(80.15ಅ), ದಿಶಾ ಮೇಲಿನಮನಿ(70.88ಅ), ಭಾಗ್ಯಶ್ರೀ ತಳವಾರ(68.36ಅ). ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಡಾ.ಗೀರೀಶ ಕಡ್ಡಿ, ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ, ಉಪಪ್ರಾಚಾರ್ಯ ಶ್ರೀಕಾಂತ ಬೆಳ್ಳಿಹಾಳ ತಮ್ಮ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 