ಜೆಡಿಎಸ್ ಪಕ್ಷ 25 ವರ್ಷಗಳ ಕಾಲ ಜನರಿಗೆ ಅಪಾರ ಕೊಡುಗೆ ನೀಡಿದೆ.: ಕೃಷ್ಣಾರೆಡ್ಡಿ
JDS party has made immense contributions to the people for 25 years: Krishna Reddy
ಬೆಳಗಾವಿ 22 : ಜೆಡಿಎಸ್ ಪಕ್ಷದ 25 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ರಾಜ್ಯ ಮತ್ತು ದೇಶದ ಜನರಿಗೆ ಅಪಾರ ಕೊಡುಗೆ ನೀಡಿದೆ. ರಾಜ್ಯಕ್ಕೆ ಮುಖ್ಯಮಂತ್ರಿ ಮತ್ತು ದೇಶಕ್ಕೆ ಪ್ರಧಾನಿಗಳನ್ನು ನೀಡಿರುವ ರಾಜ್ಯದ ಏಕೈಕ ಪಕ್ಷ ಜೆಡಿಎಸ್ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ ಅವರು ಹೇಳಿದರು.ಜಾತ್ಯತೀತ ಜನತಾದಳ (ಜೆಡಿಎಸ್) ವತಿಯಿಂದ ನಗರದ ಗಾಂಧಿ ಭವನದಲ್ಲಿ ರವಿವಾರ ಆಯೋಜಿಸಿದ್ದ ಯುವ ಜನತಾದಳ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಹಲವು ನಾಯಕರು ಪ್ರಾದೇಶಿಕ ಪಕ್ಷವನ್ನು ಕಟ್ಟಿದ್ದರು. ಯಾವ ಪಕ್ಷವೂ 5 ವರ್ಷಗಳವರೆಗೆ ಉಳಿಯಲಿಲ್ಲ.
ಆದರೆ, ಜೆಡಿಎಸ್ ಪಕ್ಷ ಸುದೀರ್ಘ 25 ವರ್ಷ ಪೂರೈಸಿರುವುದು ಅವಿಸ್ಮರಣೀಯ. ಇದನ್ನು ಇನ್ನೂ 25 ವರ್ಷಗಳ ವರಗೆ ಕೊಂಡೊಯ್ಯಲು ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು. ಪಕ್ಷದ ನಾಯಕರಾದ ದೇವೇಗೌಡರು, ಕುಮಾರಸ್ವಾಮಿ ಯವರು ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಹಲವು ನೀರಾವರಿ ಯೋಜನೆ, ರೈತರ ಸಾಲ ಮನ್ನಾ, ಲಾಟರಿ ನಿಷೇಧ, ಸೈಕಲ್ ಭಾಗ್ಯ ಸೇರಿದಂತೆ ಹತ್ತಾರು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ರಾಜ್ಯದ ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ಕಾರ್ಯವೈಖರ್ಯ ಜನರ ಮನಸ್ಸಿನಲ್ಲಿ ಆಳವಾಗಿ ಉಳಿದಿದೆ.
ಹೀಗಾಗಿಯೇ ಇಂದಿಗೂ ಪ್ರತಿ ಹಳ್ಳಿಗಳಲ್ಲಿಯೂ ಜೆಡಿಎಸ್ ಪಕ್ಷದ ಮತ್ತು ನಾಯಕರ ಸೇವೆಯನ್ನು ಕೊಂಡಾಡುತ್ತಾರೆ ಎಂದರು. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ. ಆರ್ಥಿಕವಾಗಿ ದಿವಾಳಿಯಾಗಿದೆ. ರಾಜ್ಯದಲ್ಲಿ ಯಾವ ಸರಕಾರವು ಇದುವರೆಗೆ ಮಾಡದಷ್ಟು ಸಾಲ ಈ ಸರಕಾರ ಮಾಡಿದೆ. ಗ್ಯಾರಂಟಿ ಯೋಜನೆಗಳನ್ನು ಸಮರ್ಕವಾಗಿ ಪೂರೈಸುತ್ತಿಲ್ಲ. 10 ತಿಂಗಳ ಗೃಹ ಲಕ್ಷ್ಮಿ ಯೋಜನೆಯ ಹಣ ಬಾಕಿ ಇದೆ. ಜೊತೆಗೆ ಸರಕಾರ ಮೇಲೆ, ಭ್ರಷ್ಟಾಚಾರ, ಕಮಿಷನ್ ಆರೋಪಗಳು ಮೇಲಿಂದ ಮೇಲೆ ಕೇಳಿಬರುತ್ತವೆ. ಇನ್ನೊಂದೆಡೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.
ಸಾರ್ವಜನಿಕರು, ಅಧಿಕಾರಿಗಳು ಸೇರಿದಂತೆ ಜನಪ್ರತಿನಿಧಿಗಳು ರಕ್ಷಣೆ ಇಲ್ಲದಂತಾಗಿದೆ. ಹೀಗಾಗಿ ರಾಜ್ಯದ ಆಡಳಿತ ಸಂಪೂರ್ಣ ಕುಸಿದಿದೆ ಎಂದು ಆರೋಪಿಸಿದರು.ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಈಗಿನಿಂದಲೇ ಜೆಡಿಎಸ್ ಕಾರ್ಯಕರ್ತರು ಸನ್ನದ್ಧರಾಗಬೇಕು. ನಿಮ್ಮಲ್ಲಿರುವ ತಾರತಮ್ಯ ಮರೆತು ಪಕ್ಷ ಸಂಘಟನೆಗೆ ಮುಂದಾಗಬೇಕು. 2028ರ ರಾಜ್ಯ ಸಭೆ ಚುನಾವಣೆಲ್ಲಿ ಬಿಜೆಪಿ ಮತ್ತು ಜೆಡಿಎಸ್ ನೇತೃತ್ವದ ಎನ್.ಡಿ.ಎ ಮೈತ್ರಿಕೂಟ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.ಮಾಜಿ ಸಚಿವ ಅಲ್ಕೋಡ ಹನುಮಂತ, ಮುಖಂಡ ಪಂಚನಗೌಡ ದ್ಯಾಮನಗೌಡರ ಮಾತನಾಡಿ, ಕಾಂಗ್ರೆಸ್ ಸರಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಹೀಗಾಗಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಇನ್ನೊಂದಡೆ ನಿರುದ್ಯೋಗವು ಹೆಚ್ಚಾಗುತ್ತಿದೆ ಎಂದು ಕಾಂಗ್ರೆಸ್ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸಮಾವೇಶಕ್ಕೂ ಮೊದಲು ಜೆಡಿಎಸ್ ಯುವ ಕಾರ್ಯಕರ್ತರು ನಗರದ ಸಿಪಿಎಡ್ ಮೈದಾನದಿಂದ, ಗಾಂಧಿ ಭವನದವರೆಗೂ ಬೈಕ್ ರ್ಯಾಲಿ ನಡೆಸಿದರು.ಈ ವೇಳೆ ಮಾಜಿ ಶಾಸಕ ವೀರಭ್ರದ್ರ್ಪ ಹಾಲಹರ, ಜಿಲ್ಲಾದ್ಯಕ್ಷ ಶಂಕರ ಮಾಡಲಗಿ, ಸೌರಭ ಚೋಪ್ರಾ, ವಿಠ್ಠಲ ಗಡ್ಡಿ, ಪಂಚನಗೌಡ ದ್ಯಾಮನಗೌಡರ, ಅಶೋಕ ಪಾಟೀಲ, ಯುವ ಘಟಕ ಅಧ್ಯಕ್ಷ ಬಾಳಗೌಡ ಪಾಟೀಲ, ಕಾಡಗೌಡ ಪಾಟೀಲ, ಪ್ರಕಾಶ ಸೋನವಾಲ್ಕರ್ , ಸುನೀಲ್ ವೇರನೇಕರ್, ಜಾಜು ರೊಟ್ಟಿ, ರಾಮು ರಜಪೂತ್, ನಗರದ ಅಧ್ಯಕ್ಷ ಪ್ರಮೋದ್ ಪಾಟೀಲ, ಸೇರಿದಂತೆ ಮುಖಂಡರುಗಳು ಸಾವಿರಾರೂ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 