ನೂತನ 4 ಕಾರ್ಮಿಕ ಸಂಹಿತೆಗಳ ಅಧಿಸೂಚನೆಯನ್ನು ರದ್ದುಗೊಳಿಸಲು ಜೆಸಿಟಿಯು ಆಗ್ರಹ
JCT demands cancellation of notification of 4 new labor codes
ವಿಜಯಪುರ 26: ನವೆಂಬರ್ 2025 ರಂದು 4 ಸಂಹಿತೆಗಳ ಅಧಿಸೂಚನೆಯನ್ನು ರದ್ದುಗೊಳಿಸಬೇಕು. ರಾಜ್ಯ ಸರ್ಕಾರ ಈ ನಿಯಮಗಳನ್ನು ರಚಿಸಬಾರದು. ಶ್ರಮಶಕ್ತಿನೀತಿ-2025 ನ್ನುಕೇಂದ್ರ ಸರ್ಕಾರ ಹಿಂಪಡೆಯಬೇಕು ಮತ್ತುರಾಜ್ಯ ಸರ್ಕಾರಇದನ್ನುತಿರಸ್ಕರಿಸಬೇಕು. ಕನಿಷ್ಠ ವೇತನವನ್ನು ವೈಜ್ಞಾನಿಕವಾಗಿ ಪುನರ್ ವಿಮರ್ಶೆ ಮಾಡಬೇಕು. ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಬೇಡಿಕೆಯಂತೆ ವೇತನ ನಿಗದಿ ಮಾಡಬೇಕು ಹಾಗೂ ಪೂರ್ವಾನ್ವಯಆಗುವಂತೆ ಕೂಡಲೇ ಜಾರಿಗೆತರಬೇಕು. ರಾಜ್ಯದಲ್ಲಿಕಾರ್ಖಾನೆಕಾಯ್ದೆಗೆತಂದಿರುವ ತಿದ್ದುಪಡಿಗಳನ್ನು ವಾಪಸ್ಸು ಪಡೆಯಬೇಕು. 12 ಗಂಟೆಗಳ ಕೆಲಸವನ್ನುಕಡ್ಡಾಯ ಮಾಡಬಾರದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿಜಯಪುರ ಜಿಲ್ಲಾಧಿಕಾರಗಳ ಮೂಲಕ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರಿಗೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಎಅಖಿಗ- ವಿಜಯಪುರ) ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷರಾದ ಮತ್ತು ಜಿಲ್ಲಾ ಅಧ್ಯಕ್ಷರಾದ ಮಲ್ಲಿಕಾರ್ಜುನ ಎಚ್.ಟಿ ಮಾತನಾಡಿ, ಕರ್ನಾಟಕ ಕಾರ್ಮಿಕ ಸಮ್ಮೇಳನವನ್ನು ರಚಿಸಬೇಕು (ಕೆಎಲ್‌ಸಿ), ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ ಅನುದಾನವನ್ನು ಒದಗಿಸಿ, ನಿವೃತ್ತಿ ಸೌಲಭ್ಯಕೊಡಬೇಕು ಮತ್ತು ಸಾಮಾಜಿಕ ಭದ್ರತಾ ಸವಲತ್ತುಗಳನ್ನು ನೀಡಬೇಕು. ಇತ್ತೀಚಿಗೆ ಪ್ರಾರಂಭವಾಗಿರುವಅಸಂಘಟಿತಕಾರ್ಮಿಕರ ವಿವಿಧ ಮಂಡಳಿಗಳಿಗೆ ಬಜೆಟ್‌ನಲ್ಲಿ ಅನುದಾನಗಳನ್ನು ಕಾದಿರಿಸಬೇಕು ಮತ್ತು ಸೆಸ್‌ನ್ನು ಸಂಗ್ರಹಿಸಿ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಕೊಡಬೇಕು. ಎಲ್ಲಾ ಶೆಡ್ಯೂಲ್ ಎಂಪ್ಲಾಯ್‌ಮೆಂಟ್‌ಗಳಿಗೂ ಒಂದೇ ಬಾರಿ ಕನಿಷ್ಠ ವೇತನವನ್ನು ಘೋಷಿಸಬೇಕು. ಗಾರ್ಮೆಂಟ್ಸ್ ಪ್ಲಾಂಟೇಷನ್ ಮತ್ತು ಬೀಡಿಕಾರ್ಮಿಕರಿಗೆ ಕನಿಷ್ಠವೇತನದಲ್ಲಿಆಗಿರುವಅನ್ಯಾಯವನ್ನು ಸರಿಪಡಿಸಬೇಕು. ಕನಿಷ್ಠ ವೇತನದಜಾರಿಗೆ ಸರ್ಕಾರಕಟ್ಟುನಿಟ್ಟಿನ ಕ್ರಮಗಳನ್ನು ತಗೆದುಕೊಳ್ಳಬೇಕು. ಸ್ಕೀಮ್ ಕಾರ್ಮಿಕರಾದ ಅಂಗನವಾಡಿ , ಬಿಸಿಯೂಟ ಮತ್ತು ಆಶಾ ಕಾರ್ಯಕರ್ತೆಯರಿಗೂ ಕನಿಷ್ಠ ವೇತನ ಖಚಿತ ಪಡಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರದ ಜನವಿರೋಧಿ ಕ್ರಮಗಳಾದ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಬಂಡವಾಳ ಹಿಂತೆಗೆತ ಮುಂತಾದವುಗಳ ಜೊತೆಗೆ ಇತ್ತೀಚೆಗೆ ತಂದಿರುವ ಶ್ರಮಶಕ್ತಿ ನೀತಿ ಮತ್ತು ಲೇಬರ್ ಕೋಡ್‌ಗಳನ್ನು ತೀವ್ರವಾಗಿ ವಿರೋಧಿಸುತ್ತೇವೆ. ಜೊತೆಗೆ ರಾಜ್ಯದ ಕಾರ್ಮಿಕ ಸಮುದಾಯ ಎದುರಿಸುತ್ತಿರುವ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಈ ಹಕ್ಕೋತ್ತಾಯ ಪತ್ರಗಳನ್ನು ಸಲ್ಲಿಸಿದ್ದೇವೆ. ಆದಷ್ಟು ಬೇಗ ರಾಜ್ಯದಕಾರ್ಮಿಕ ಮುಖಂಡರ ಸಭೆಯನ್ನು ಕರೆದು ಚರ್ಚಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೋಳ್ಳಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕಾಶಿಬಾಯಿ ಜನಗೊಂಡ, ಮಹಾದೇವಿ ಧರ್ಮಶೆಟ್ಟಿ, ದ್ಯಾಮಣ್ಣ ಬಿರಾದರ, ರಾಜು, ದೊಡಮನಿ, ರಮೇಶ ಅಸ್ಕಿ, ಶಶಿಕಲಾ ಮ್ಯಾಗೇರಿ, ಚನ್ನಮ್ಮ ಪೆಂಟದ, ಪಾರ್ವತಿ ಹಿರೇಮಠ, ಬಾಷಾ ವಾಲಿಕಾರ, ಶರೀಪ್, ಸುವರ್ಣ ಉಕ್ಕಲಿ, ಬಾಳಾಬಾಯಿ ಹೊಗಾರ, ಶೋಭಾ ಬಿಜ್ಜರಗಿ ಇನ್ನಿತರರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 