ಬೆಂಗಳೂರು, ಫೆ. 19, ಸಚಿವ ಅಶೋಕ್ ಅವರ ಪುತ್ರ ಶರತ್ ಅಪಘಾತ ಪ್ರಕರಣವನ್ನು ಸಕರ್ಾರ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಕಾಂಗ್ರೆಸ್ ಸದಸ್ಯೆ ಜಯಮಾಲಾ ಆಗ್ರಹಿಸಿದ್ದಾರೆ. ಮೇಲ್ಮನೆಯಲ್ಲಿ ಕಾನೂನು ಸುವ್ಯವಸ್ಥೆ ಕುರಿತ ನಿಲುವಳಿ ಸೂಚನೆ ಮೇಲಿನ ನಿಯಮ 68ರ ಚಚರ್ೆಯಲ್ಲಿ ಮಾತನಾಡಿದ ಅವರು, ನಲಪಾಡ್ ಹಿಟ್ ಎಂಡ್ ರನ್ ಪ್ರಕರಣದಲ್ಲಿ ಶಾಸಕ ಹ್ಯಾರೀಸ್ ಅವರೇ ತಮ್ಮ ಮಗನನ್ನು ಕರೆದುಕೊಂಡು ಪೊಲೀಸರ ಮುಂದೆ ಹಾಜರುಪಡಿಸಿದ್ದರು. ಆದರೆ ಸಚಿವ ಆರ್.ಅಶೋಕ್ ಅವರು ತಮ್ಮ ಪುತ್ರನ ಅಪಘಾತ ಮರಣ ಪ್ರಕರಣವನ್ನು ಮುಚ್ಚಿ ಹಾಕುತ್ತಿದ್ದಾರೆ. ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪಾಗಲೀ ಗೃಹ ಸಚಿವ ಬಸವರಾಜ ಬೊಮ್ಮಾಯಿಯಾಗಲೀ ಸ್ಪಷ್ಟನೆ ನೀಡುತ್ತಿಲ್ಲ. ರಾತ್ರೋರಾತ್ರಿ ಪ್ರಭಾವಿ ಸಚಿವರ ಒತ್ತಡಕ್ಕೆ ಮಣಿದು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ ಎಂದು ದೂರಿದರು. ಆಗ ಮಧ್ಯಪ್ರವೇಶಿಸಿದ ಜೆಡಿಎಸ್ನ ಬಸವರಾಜ ಹೊರಟ್ಟಿ, ಅಪಘಾತ ಆಕಸ್ಮಿಕವಾಗಿ ಆಗಬಹುದು. ಆದರೆ ಅದನ್ನು ಮುಚ್ಚಿಹಾಕುವ ಪ್ರಮೇಯ ಏನಿತ್ತು? ಕಾರಿನಲ್ಲಿ ಯಾರೇ ಇರಲಿ ಅದನ್ನು ಮುಚ್ಚುಹಾಕಬಾರದಿತ್ತು. ಅಪಘಾತ ಎಲ್ಲಿ ಬೇಕಾದರೂ ಆಗಬಹುದು.ಅದು ಆಕಸ್ಮಿಕ. ಆದರೆ ಸತ್ಯವನ್ನು ಸುಳ್ಳನ್ನಾಗಿ ತಿರುಚುವ ಕೆಲಸ ಸರಕಾರ ಮಾಡುತ್ತಿರುವುದು ಆತಂಕದ ಪ್ರಶ್ನೆ ಎಂದು ಜಯಮಾಲಾ ಹೇಳಿದರು. ರಾಜ್ಯಕ್ಕೆ ಬೇಕಾಗಿರುವುದು ಜನರ ಹಿತವೇ ಹೊರತು ದ್ವೇಷದ ರಾಜಕಾರಣವಲ್ಲ. ಸಚಿವರ ಪುತ್ರನ ಅಪಘಾತ ಪ್ರಕರಣ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ನ ಜಯಮಾಲಾ ಮಂಗಳೂರು ಗಲಭೆ ಪ್ರಸ್ತಾಪಿಸಿ, ಮಾಜಿ ಸಚಿವ ಯು.ಟಿ.ಖಾದರ್ ರಾಜ್ಯಕ್ಕೆ ಬೆಂಕಿ ಹಚ್ಚುವ ಪರಿಸ್ಥಿತಿ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಅವರ ಮೇಲೆ ದೇಶದ್ರೋಹದ ಕೇಸ್ ದಾಖಲು ಮಾಡಲಾಗಿದೆ. ದೇಶದ್ರೋಹದ ಕೆಲಸವನ್ನು ಹಾಕುವುದೇ ಆದರೆ ಮಂಗಳೂರು ಭಾಗದಲ್ಲಿ ಶೇ. 50ರಷ್ಟು ಪ್ರಕರಣಗಳು ದಾಖಲಾಗಬಹುದು. ಆದರೆ ಬಿಜೆಪಿಯ ನಾಯಕರೊಬ್ಬರು ಬೆಂಕಿಯನ್ನೇ ಹಚ್ಚುತ್ತೇನೆ ಎಂದಿದ್ದಾರೆ. ಬೆಂಕಿ ಹಚ್ಚುತ್ತೇನೆ ಎನ್ನುವುದಕ್ಕೂ ಬೆಂಕಿ ಹಚ್ಚುವ ಪರಿಸ್ಥಿತಿ ಬರಬಹುದು ಎನ್ನುವುದಕ್ಕೂ ಬಹಳ ವ್ಯತ್ಯಾಸವಿದೆ ಎಂದರು. ಕೇಂದ್ರ ಸಚಿವ ರಾಜನಾಥ್ ಸಿಂಗ್, " ಏ ಖಾದರ್ ನೀನು ಹೀಗೆ ಮಾಡುತ್ತಿದ್ದರೆ ನಿನ್ನ ಕೈಕಾಲು ರುಂಡ ಕತ್ತರಿಸುತ್ತೇವೆ" ಎಂದು ಬಹಿರಂಗವಾಗಿಯೇ ಬೆದರಿಕೆ ಹಾಕಿದ್ದಾರಾದರೂ ಅವರ ವಿರುದ್ಧ ಕ್ರಮ ಏಕಿಲ್ಲ ? ಎಂದು ಪ್ರಶ್ನಿಸಿದಾಗ, ಮಧ್ಯಪ್ರವೇಶಿಸಿದ ಸಭಾನಾಯಕರು ಜಯಮಾಲಾ ಮಾತಿಗೆ ಅಡ್ಡಿಯಾದರು. ಆಗ ಜಯಮಾಲಾ ಮಾತಿಗೆ ಅಡ್ಡಿಮಾಡಬೇಡಿ ಎಂದು ಮನವಿಕೊಂಡಾಗ ಜೆಡಿಎಸ್ನ ಭೋಜೇಗೌಡ ಹಾಗೂ ಕಾಂಗ್ರೆಸ್ನ ನಾರಾಯಣಸ್ವಾಮಿ ಜಯಮಾಲಾ ಬೆನ್ನಿಗೆ ನಿಂತರು. ಮತ್ತೆ ಮಾತು ಮುಂದುವರೆಸಿದ ಜಯಮಾಲಾ, ಬೀದರ್ ಶಾಹೀನ್ ಪ್ರಕರಣ ಪ್ರಸ್ತಾಪಿಸಿ, ತಪ್ಪುಮಾಡದವರು ಎರಡು ಲಕ್ಷ ಬಾಂಡ್ ಕಟ್ಟುವ ದುಃಸ್ಥಿತಿ ಬಂದಿದೆ ಬೇಸರ ವ್ಯಕ್ತಪಡಿಸಿದರು. ಆಗ ಬೀದರ್ ಭಾಗದ ಬಿಜೆಪಿಯ ಸದಸ್ಯ ರಘುನಾಥ್ ಮಲ್ಕಾಪೂರೆ, ಇದು ಮಗು ಮಾಡಿದ ತಪ್ಪಲ್ಲ. ಮಗುವಿನಿಂದ ಪ್ರಚೋದನೆ ಕೊಡಿಸಿದ ಘಟನೆ. ಜಯಮಾಲಾ ಸದನದ ಹಾದಿ ತಪ್ಪಿಸುತ್ತಿದ್ದಾರೆ ಎಂದಾಗ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಮಲ್ಕಾಪೂರೆ ವಿರುದ್ಧ ಮುಗಿಬಿದ್ದರು. ಒಂದು ಕ್ಷಣ ಬೇಸರದಿಂದ ಕುಳಿತಕೊಂಡು ಸುಧಾರಿಸಿಕೊಂಡ ಜಯಮಾಲಾ ಮತ್ತೆ ತಮ್ಮ ಮಾತು ಮುಂದುವರೆಸಿದರು. ಈ ವೇಳೆ ಪಾಯಿಂಟ್ ಆಫ್ ಆರ್ಡರ್ ಗೆ ಬಿಜೆಪಿಗರು ಅಡ್ಡಿಪಡಿಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಹಾಗೂ ವಿಪಕ್ಷದ ಇತರರು ಕಿಡಿಕಾರಿದರು. ಆಗ ಮಧ್ಯಪ್ರವೇಶಿಸಿದ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, ಮಲ್ಕಾಪೂರೆಯವರನ್ನುದ್ದೇಶಿಸಿ ಸದನದಲ್ಲಿ ಭಾಷಣ ಮಾಡಲು ಅವಕಾಶ ಕೊಡುವುದಿಲ್ಲ ಎಂದರು.