ವಿದೇಶಾಂಗ ಸಚಿವ ಡಾ|| ಜೈಶಂಕರ್ ಬೆಲ್ಜಿಯಂ ಭೇಟಿ

ಬೆಲ್ಜಿಯಂ, ಫೆ 18, ವಿದೇಶಾಂಗ ವ್ಯವಹಾರಗಳ ಸಚಿವ ಡಾ|| ಎಸ್ ಜೈಶಂಕರ್ ಬೆಲ್ಜಿಯಂ ತಲುಪಿದ್ದಾರೆ.  ಯೂರೋಪಿಯನ್ ಒಕ್ಕೂಟದ ನಾಯಕರೊಂದಿಗೆ ದ್ವಿಪಕ್ಷೀಯ ವಿಚಾರಗಳ ಮಾತುಕತೆ ಮತ್ತು ಮಾರ್ಚ್ ತಿಂಗಳಲ್ಲಿ ಬ್ರುಸೆಲ್ಸ್ ನಲ್ಲಿ ನಡೆಯಲಿರುವ 15 ನೇ ಭಾರತ – ಯೂರೋಪಿಯನ್ ಒಕ್ಕೂಟದ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದು ಅದರ ಸಿದ್ಧತೆ ಪರಿಶೀಲನೆಗಾಗಿ ಡಾ. ಜೈಶಂಕರ್ ಬ್ರುಸೆಲ್ಸ್ ಗೆ ಭೇಟಿ ನೀಡಿದ್ದಾರೆ.  ಅವರು ಬೆಲ್ಜಿಯಂ ವಿದೇಶಾಂಗ ಸಚಿವ ಫಿಲಿಪ್ಪಿ ಗೋಫಿನ್ ಅವರನ್ನು ಭೇಟಿಯಾಗಿದ್ದಾರೆ.