ಜೆ.ಎಸ್.ಎಸ್. ಬನಶಂಕರಿ ಮಹಾವಿದ್ಯಾಲಯದಲ್ಲಿ ಮಾನವ ಹಕ್ಕುಗಳ ಸಂಘ ಉದ್ಘಾಟನೆ
J.S.S. Human Rights Association inaugurated at Banashankari College
ಧಾರವಾಡ 02: ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮಾನವ ಹಕ್ಕುಗಳ ಸಂಘದ ಉದ್ಘಾಟನಾ ಕಾರ್ಯಕ್ರಮವನ್ನು ಇಂದು ಭವ್ಯವಾಗಿ ಆಯೋಜಿಸಲಾಯಿತು. ಪದ್ಮಭೂಷಣ ರಾಜ್ಯಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ. ವೀರೇಂದ್ರ ಹೆಗ್ಗಡೆ ಅವರ 78ನೇ ಜನ್ಮದಿನದ ಅಂಗವಾಗಿ “ಮಾನವ ಹಕ್ಕುಗಳು ಮತ್ತು ಕರ್ತವ್ಯಗಳು” ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವೂ ಈ ಸಂದರ್ಭದಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾಗಿ ಕರ್ನಾಟಕ ರಾಜ್ಯ ಹೈಕೋರ್ಟ್ ಧಾರವಾಡ ಬೆಂಚಿನ ಅಡಿಷನಲ್ ಅಡ್ವಕೇಟ್ ಜನರಲ್ ಅಡ್ವ. ಗಂಗಾಧರ್ ಜಿ.ಎಂ. ಅವರು ಭಾಗವಹಿಸಿ, ವಿದ್ಯಾರ್ಥಿಗಳಿಗೆ ಸಂವಿಧಾನ ಮೌಲ್ಯಗಳು ಹಾಗೂ ಜವಾಬ್ದಾರಿಯುತ ನಾಗರಿಕತೆಯ ಅಗತ್ಯತೆಯನ್ನು ಸಮಗ್ರವಾಗಿ ವಿವರಿಸಿದರು.
“ಮನುಷ್ಯನ ವ್ಯಕ್ತಿತ್ವದ ಮೂಲವೇ ಸನ್ಮಾರ್ಗದ ನಡತೆ. ಸಂಪತ್ತು ಇದ್ದರೂ ಇಲ್ಲದಿದ್ದರೂಶ್ರಿ ಒಳ್ಳೆಯ ಗುಣ ಮತ್ತು ಕರ್ತವ್ಯಪಾಲನೆಯೇ ಜೀವನದಲ್ಲಿ ಎತ್ತರಕ್ಕೆ ಕೊಂಡೊಯ್ಯುತ್ತದೆ,” ಎಂದು ಅವರು ಹಿತವಚನ ನೀಡಿದರು.
ಅವರು ಮುಂದುವರೆದು, “ಒಂದು ಶಕ್ತಿಶಾಲಿ ರಾಷ್ಟ್ರ ಮತ್ತೊಂದು ರಾಷ್ಟ್ರದಿಂದ ಗೌರವ ಪಡೆಯಲು ಕಾರಣ ಅದರ ನಾಗರಿಕರ ನಡತೆ ಮತ್ತು ಸಂವಿಧಾನದ ಬಲ,” ಎಂದು ತಿಳಿಸಿ, ಸಂವಿಧಾನ ನೀಡಿರುವ ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತ್ವ ಮೌಲ್ಯಗಳು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಅಳವಡಿಸಬೇಕೆಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಅವರು ಮಾತನಾಡಿ, ಪೂಜ್ಯ ಹೆಗ್ಗಡೆಯವರ 78ನೇ ಜನ್ಮದಿನದ ಸಂದರ್ಭದಲ್ಲಿ ಸಂಸ್ಥೆ ವಿವಿಧ ಸಮಾಜಮುಖಿ ಮತ್ತು ಶಿಕ್ಷಣಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಹೇಳಿದರು. ಮಾನವ ಹಕ್ಕುಗಳ ಸಂಘದ ಕಾರ್ಯಪದ್ಧತಿ ವಿದ್ಯಾರ್ಥಿಗಳಿಗೆ ಸಂವಿಧಾನ ಜಾಗೃತಿ ಮೂಡಿಸುವ ದಿಸೆಯಲ್ಲಿ ಮಹತ್ವದ್ದಾಗಿದೆ ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ಪ್ರೊ. ಡಾ. ವೆಂಕಟೇಶ್ ಮುತಾಲಿಕ್ ಅವರು, “ಕರ್ತವ್ಯ ಮತ್ತು ಹಕ್ಕುಗಳು ಒಂದೇ ನಾಣ್ಯದ ಎರಡು ಮುಖಗಳು. ಕರ್ತವ್ಯಪಾಲನೆಯಿಂದಲೇ ಹಕ್ಕುಗಳು ಬಲಗೊಳ್ಳುತ್ತವೆ,” ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.
ಪ್ರಾಸ್ತಾವಿಕ ಭಾಷಣ ಮಾಡಿದ ಮಾನವ ಹಕ್ಕುಗಳ ಸಂಘದ ಅಧ್ಯಕ್ಷರಾದ ಡಾ. ಅರುಣಕುಮಾರ್ ಎಂ. ಶಿರಹಟ್ಟಿ ಅವರು, “ನಮ್ಮ ಮಹಾವಿದ್ಯಾಲಯದ ಮಾನವ ಹಕ್ಕುಗಳ ಸಂಘವು ಸಂವಿಧಾನ ಮೌಲ್ಯಗಳನ್ನು ವಿದ್ಯಾರ್ಥಿಗಳ ನಡೆ-ನಡವಳಿಕೆಯಲ್ಲಿ ಬೇರೂರಿಸುವ ನಿಟ್ಟಿನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಜೆ.ಎಸ್.ಎಸ್. ಸಂಸ್ಥೆಯ ಶಿಕ್ಷಣ ವ್ಯವಸ್ಥೆಯೇ ಸಂವಿಧಾನ ಮೌಲ್ಯಸರಣಿಗೆ ನೇರವಾಗಿ ಹೊಂದಿಕೊಳ್ಳುತ್ತದೆ,” ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಅಡಿಷನಲ್ ಅಡ್ವಕೇಟ್ ಜನರಲ್ ಅಡ್ವ. ಗಂಗಾಧರ್ ಜಿ.ಎಂ. ಅವರಿಗೆ ಮಹಾವಿದ್ಯಾಲಯದ ಪರವಾಗಿ ಗೌರವ ಸನ್ಮಾನ ಸಲ್ಲಿಸಲಾಯಿತು. ಡಾ. ಶಿವಪ್ರಸಾದ್ ನಾಯಕ ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿ ಕಾರ್ಯದರ್ಶಿ ಉಜ್ವಲ ಅತಿಥಿಯ ಪರಿಚಯ ಮಾಡಿಕೊಟ್ಟರು. ಕೊನೆಯಲ್ಲಿ ಕು. ಅನುಶ್ರೀ ವಂದನಾ ಸಲ್ಲಿಸಿದರು.
ಈ ಸಂಘ ಉದ್ಘಾಟನಾ ಕಾರ್ಯಕ್ರಮದಲ್ಲಿ ಜೆ.ಎಸ್.ಎಸ್. ಸಂಸ್ಥೆಯ ಆಡಳಿತಾಧಿಕಾರಿ ಅರಿಹಂತ ಪ್ರಸಾದ, ಐ.ಟಿ.ಐ ಪ್ರಾಂಶುಪಾಲರಾದ ಮಹಾವೀರ್ ಉಪಾದ್ಯೆ, ಬೋಧಕಹಿಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
ವಿದ್ಯಾರ್ಥಿಗಳಲ್ಲಿ ಮಾನವ ಹಕ್ಕುಗಳು, ಕರ್ತವ್ಯಗಳು ಮತ್ತು ಸಂವಿಧಾನ ಜಾಗೃತಿ ಮೂಡಿಸಿ, ಜವಾಬ್ದಾರಿಯುತ ನಾಗರಿಕ ಜೀವನಕ್ಕೆ ದಾರಿ ತೋರಿದ ಮಹತ್ವದ ಕಾರ್ಯಕ್ರಮವಾಗಿ ಇದನ್ನು ಗುರುತಿಸಲಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 